RNI NO. KARKAN/2006/27779|Tuesday, December 24, 2024
You are here: Home » breaking news » ಗೋಕಾಕ:ಅಭಿವೃದ್ಧಿ ಕಾರ್ಯಗಳನ್ನು ನೋಡಿ ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ : ಲಖನ್ ಜಾರಕಿಹೊಳಿ

ಗೋಕಾಕ:ಅಭಿವೃದ್ಧಿ ಕಾರ್ಯಗಳನ್ನು ನೋಡಿ ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ : ಲಖನ್ ಜಾರಕಿಹೊಳಿ 

ನಗರದ ವಾರ್ಡ ನಂ. 6ರಲ್ಲಿ ಕಾಂಗ್ರೆಸ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಯುವ ಮುಖಂಡ ಲಖನ್ ಜಾರಕಿಹೊಳಿ ಅವರು ಮಾತನಾಡುತ್ತಿರುವದು.

ಅಭಿವೃದ್ಧಿ ಕಾರ್ಯಗಳನ್ನು ನೋಡಿ ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ : ಲಖನ್ ಜಾರಕಿಹೊಳಿ
ಗೋಕಾಕ ಮೇ 4 : ಜನತೆ ಸುಳ್ಳು ಪ್ರಚಾರ ಹಾಗೂ ಅಪಪ್ರಚಾರವನ್ನು ನಂಬದೆ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ಆಯ್ಕೆ ಮಾಡಬೇಕೆಂದು ಯುವ ಮುಖಂಡ ಲಖನ್ ಜಾರಕಿಹೊಳಿ ಇಂದಿಲ್ಲಿ ಮನವಿ ಮಾಡಿಕೊಂಡರು.
ಅವರು ನಗರದ ವಾರ್ಡ ನಂ. 6ರಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.
ನಗರದಲ್ಲಿ ಕುಡಿಯುವ ನೀರು, ವಿಶಾಲ ರಸ್ತೆಗಳು, ಶೌಚಾಲಯಗಳು ಸೇರಿದಂತೆ ಜನತೆಗೆ ಮೂಲಭೂತ ಸೌಲಭ್ಯಗಳನ್ನು ರಮೇಶ ಜಾರಕಿಹೊಳಿ ಅವರು ಕಲ್ಪಿಸಿದ್ದಾರೆ. ಅಲ್ಲದೆ ನಗರದ ಕುಡಿಯುವ ನೀರಿನ ಶಾಶ್ವತ ಭವಣೆ ತಪ್ಪಿಸಲು ಯೋಗಿಕೊಳ್ಳದ ಬಳಿ ಘಟ್ಟಿ ಬಸವಣ್ಣ ಯಾತ ನೀರಾವರಿ ಯೋಜನೆಗೆ ಸರಕಾರದಿಂದ ಮಂಜೂರಾತಿ ದೊರಕಿಸಿಕೊಟ್ಟಿದ್ದಾರೆ. ಅಲ್ಲದೆ ಗೋಕಾಕ ಕ್ಷೇತ್ರದಾದ್ಯಂತ ನೀರಾವರಿ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಗೊಡಚಿನಮಲ್ಕಿ ಯಾತ ನೀರಾವರಿ ಯೋಜನೆ ಮೂಲಕ ಕ್ಷೇತ್ರದ ಶೇ.99 ಭಾಗ ನೀರಾವರಿಗೆ ಒಳಪಡಿಸುವ ಕಾರ್ಯ ರಮೇಶ ಜಾರಕಿಹೊಳಿ ಮಾಡಿಸಿದ್ದಾರೆ. ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಗೋಕಾಕ ಮತಕ್ಷೇತ್ರ ಮಾದರಿ ಕ್ಷೇತ್ರವನ್ನಾಗಿಸಲು ಕಾಂಗ್ರೆಸ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ನೀಡಿ ಅತ್ಯಧಿಕ ಮತಗಳಿಂದ ಆಯ್ಕೆ ಮಾಡುವಂತೆ ಲಖನ್ ಜಾರಕಿಹೊಳಿ ಕೇಳಿಕೊಂಡರು.
ಈ ಸಂದರ್ಭದಲ್ಲಿ ಭೀಮಪ್ಪ ತೋಳಿ, ಭಗವಂತ ಹುಳ್ಳಿ, ರಮೇಶ ಬಡೆಪ್ಪಗೋಳ, ಮಂಜುನಾಥ ಮಾಳಗಿ, ರಾಜು ಕಡಬಿ, ಅಡಿವೆಪ್ಪ ಕಿತ್ತೂರ, ಬಾಲಪ್ಪ ದಾಸಪ್ಪನವರ, ಅಶೋಕ ಪಾಟೀಲ, ನಾರಾಯಣ ಕಲಾಲ, ರಾಜು ಗುಮತಿ, ಅಶೋಕ ಜಡೆನ್ನವರ, ಮಾಯಪ್ಪ ತಾಶೀಲ್ದಾರ, ಶಿವಾನಂದ ವಾಳವಿ, ಶೌಕತ ಭೋಜಗಾರ, ಚಂದ್ರಶೇಖರ ಕಾತಿ, ಬಸಪ್ಪ ರಂಕನಕೊಪ್ಪ ಸೇರಿದಂತೆ ಅನೇಕರು ಇದ್ದರು.

Related posts: