ಬೆಳಗಾವಿ:ಕೈ ಕಾಲು ಕಟ್ಟಿತಂದು ಬಿಜೆಪಿಗೆ ಮತ ಹಾಕಿಸಿ : ಕಾರ್ಯಕರ್ತರಿಗೆ ಬಿಎಸವಾಯ್ ವಿವಾದಾತ್ಮಕ ಕರೆ
ಕೈ ಕಾಲು ಕಟ್ಟಿತಂದು ಬಿಜೆಪಿಗೆ ಮತ ಹಾಕಿಸಿ : ಕಾರ್ಯಕರ್ತರಿಗೆ ಬಿಎಸವಾಯ್ ವಿವಾದಾತ್ಮಕ ಕರೆ
ಬೆಳಗಾವಿ ಮೇ 5 : ಬಿಜೆಪಿಗೆ ಯಾರು ಮತ ನೀಡುವುದಿಲ್ಲ ಎಂದು ನಿಮಗೆ ಆನಿಸುತ್ತದೆ ಅಂತಹವರನ್ನು ಕೈ ಕಾಲು ಕಟ್ಟಿತಂದು ಬಿಜೆಪಿಗೆ ಮತ ಹಾಕಿಸಿ ಎಂದು ಯಡಿಯೂರಪ್ಪ ಬಿಜೆಪಿ ಕಾರ್ಯಕರ್ತರಿಗೆ ವಿವಾದಾತ್ಮಕ ಕರೆ ನೀಡಿದ್ದಾರೆ .
ಬೆಳಗಾವಿ ತಾಲೂಕಿನ ಎಂಕೆ ಹುಬ್ಬಳ್ಳಿ ಗ್ರಾಮದಲ್ಲಿ ಇಂದು ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಯಾರು ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ತಮಗೆ ಅನಿಸುತ್ತೋ ಅಂಥವರ ಕೈ ಕಾಲು ಕಟ್ಟಿ ಕರೆತಂದು ಮತ ಹಾಕಿಸಬೇಕು ಎಂದರು.
ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಿಎಸ್‌ವೈ, ಬಿಜೆಪಿ ಬೆಂಬಲಿಸುವಂತೆ ಕೋರಿದರು