ಗೋಕಾಕ :ರಂಗೇರಿದ ಚುನಾವಣಾ ಕಣ : ಬಹಿರಂಗ ಪ್ರಚಾರಕ್ಕೆ ಇಂದು ಫೈನಲ್ ಡೇ
ರಂಗೇರಿದ ಚುನಾವಣಾ ಕಣ : ಬಹಿರಂಗ ಪ್ರಚಾರಕ್ಕೆ ಇಂದು ಫೈನಲ್ ಡೇ
ವಿಶೇಷ ವರದಿ :
ಗೋಕಾಕ ಮೇ 10 : ಜಿಲ್ಲೆಯಲ್ಲಿ ಚುನಾವಣಾ ಕಾವು ಜೋರಾಗಿಯೇ ನಡೆದಿದ್ದು ಅಭ್ಯರ್ಥಿಗಳು ತಮ್ಮ ಸಾರ್ಮಥ್ಯ ಅನುಸಾರ ಮತದಾರರನ್ನು ತಮ್ಮತ್ತ ಸೆಳೆಯಲು ಏನಿಲ್ಲದ ಕಸರತ್ತುಗಳನ್ನು ಮಾಡುತ್ತಿದ್ದಾರೆ
ಕಳೆದ ಸುಮಾರು 12 ದಿನಗಳಿಂದ ನಡೆಯುತ್ತಿರುವ ಅಬ್ಬರದ ಪ್ರಚಾರಕ್ಕೆ ಇಂದು ಸಾಯಂಕಾಲ 6 ಕ್ಕೆ ತೆರೆ ಬಿಳಲಿದೆ. ನಾಳೆ ಮನೆ ಮನೆಗೆ ಹೋಗಿ ಮತದಾರರನ್ನು ಬೇಟ್ಟಿಯಾಗಲು ಆಯೋಗ ಸಡಲಿಕೆ ನೀಡಿದೆ.
ಜಿಲ್ಲೆಯಲ್ಲಿ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ರಾಜ್ಯದ ಘಟಾನುಘಟ್ಟಿ ನಾಯಕರ ದಂಡೆ ಹರಿದು ಬಂದು ಮತಯಾಚನೆ ಮಾಡಿದೆ . ಬಿಜೆಪಿಯಿಂದ ಪ್ರಧಾನಿ ಮೋದಿ , ಅಮಿತ ಶಾ , ಬಿಎಸವಾಯ್ , ಅನಂತಕುಮಾರ್ ಹೆಗಡೆ , ಸ್ಮೃತಿ ಇರಾನಿ , ನಿತಿನ್ ಗಡ್ಕರಿ , ಜಾವಡೇಕರ ಸೇರಿದಂತೆ ಅನೇಕ ನಾಯಕರು ಪ್ರಚಾರ ಮಾಡಿದರೇ ಕಾಂಗ್ರೇಸ ನಿಂದ ಮಲ್ಲಿಕಾರ್ಜುನ ಖರ್ಗೆ , ಗುಲ್ಲಾಂನಬಿ ಆಝಾದ , ಮಹಾ ಮಾಜಿ ಸಿಎಂಗಳಾಜ ಚವ್ಹಾಣ , ಸಿಂಧಿಯಾ , ಸಿ.ಎಂ ಇಬ್ರಾಹಿಂ , ಸಂಸಂದ ಜೋತಿಪ್ರಕಾಶ ಸಿಂಧಿಯಾ ಸೇರಿದಂತೆ ಅನೇಕ ನಾಯಕರು ತಮ್ಮ ಕಸರತ್ತುಗಳನ್ನು ಪ್ರರ್ದಶಿಸಿದ್ದಾರೆ ಆದರೆ ಮತದಾರ ಪ್ರಭು ತಮ್ಮ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ
ಇಂದು ಕೊನೆಯ ದಿನವಾಗಿರುವುದರಿಂದ ಎಲ್ಲ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿಯೇ ಠಿಕಾಣಿ ಹೂಡಿ ಕಾರ್ಯತಂತ್ರಗಳನ್ನು ರೂಪಿಸಿ ಮನೆ ಮನೆ ತೆರಳಿ ಪ್ರಚಾರ ,ರೋಡ್ ಶೋ , ಸಭೆಗಳನ್ನು ನಡೆಸುವಲ್ಲಿ ಮಗ್ನರಾಗಿದ್ದಾರೆ