ಬೆಳಗಾವಿ:ಬೆಳಗಾವಿಯಲ್ಲಿ 96 ರ ವೃದ್ದೆಯಿಂದ ಮತದಾನ : ಮತದಾನ ಮಾಡುವ ವೇಳೆ ಕಣ್ಣೀರು ಹಾಕಿದ ಮುಸ್ಲಿಂ ಮಹಿಳೆ
ಬೆಳಗಾವಿಯಲ್ಲಿ 96 ರ ವೃದ್ದೆಯಿಂದ ಮತದಾನ : ಮತದಾನ ಮಾಡುವ ವೇಳೆ ಕಣ್ಣೀರು ಹಾಕಿದ ಮುಸ್ಲಿಂ ಮಹಿಳೆ
ಬೆಳಗಾವಿ ಮೇ 12 : ಜಿಲ್ಲೆಯಾದ್ಯಂತ ವಿವಿಧ ಬಾಗಗಳು ಬಿರುಸಿನ ಮತದಾನ ಆರಂಭಗೊಂಡಿದ್ದು , ಮತದಾರ ಪ್ರಭುಗಳು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ತಮ್ಮ ವೋಟ್ ಚಲಾಯಿಸುತ್ತದ್ದಾರೆ .
ಇದರ ಮಧ್ಯೆ ಬೆಳಗಾವಿ ಸದಾಶಿವ ನಗರದ ನಿವಾಸಿ ಹಾಗೂ 96 ವಯಸ್ಸಿನ ವೃದ್ಧೆ ಶಾಂತಾ ಹೆಗಡೆ ಅವರು ವಿಶ್ವೇಶ್ವರಯ್ಯ ನಗರ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿ, ಇತರರಿಗೆ ಸ್ಪೋರ್ತಿಯಾದರು.
ಇನ್ನು ಮತದಾನ ಮಾಡಲು ಬಂದು ವೇಳೆ ಮುಸ್ಲಿಂ ಮಹಿಳೆವೋರ್ವಳು ಕಣ್ಣೀರು ಹಾಕಿರುವ ಘಟನೆ ನಡೆದಿದೆ. ಬೆಳಗಾವಿ ಸದಾಶಿವ ನಗರದ ವಿಶ್ವೇಶ್ವರಯ್ಯ ನಗರ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಘಟನೆ ನಡೆದಿದೆ. ಮತ ಚಲಾವಣೆ ಮಾಡಲು ಬುರ್ಕಾ ಹಾಕಿಕ್ಕೊಂಡು ಮತಗಟ್ಟೆಯೊಳಗೆ ಪ್ರವೇಶ ಮಾಡುತ್ತಿದ್ದ ವೇಳೆ ಪೋಲಿಸರು ತಡೆದಿದ್ದಾರೆ. ನೀವು ಬುರ್ಕಾ ತೆಗೆದು ಮುಖ ತೋರಿಸಿ ಒಳಗೆ ಹೋಗಿ ಎಂದು ಪೋಲಿಸರು ಹೇಳಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಬುರ್ಕಾ ತೆಗೆಯುವುದಿಲ್ಲ ಎಂದು ಮಹಿಳೆ ಹಟ ಹಿಡಿದಿದ್ದರು.
ಕೊನೆಗೆ ಮತದಾನ ಸಿಬ್ಬಂದಿ ಮನವೋಲಿಕೆ ಮಾಡಿದ್ದು, ಮತಗಟ್ಟೆ ಒಳಗೆ ಹೋಗಿ ಮುಸ್ಲಿಂ ಮಹಿಳೆ ಬುರ್ಕಾ ತೆಗೆದು ಮತದಾನ ಮಾಡಿದ್ದಾಳೆ.