RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ: ಕರೋ ಯೋಗ, ರಹೋ ನಿರೋಗ : ಉಚಿತ ಯೋಗ ಶಿಬಿರದಲ್ಲಿ ಭವರಲಾಲ್ ಆರ್ಯ ಸಲಹೆ

ಗೋಕಾಕ: ಕರೋ ಯೋಗ, ರಹೋ ನಿರೋಗ : ಉಚಿತ ಯೋಗ ಶಿಬಿರದಲ್ಲಿ ಭವರಲಾಲ್ ಆರ್ಯ ಸಲಹೆ 

ಕರೋ ಯೋಗ, ರಹೋ ನಿರೋಗ : ಉಚಿತ ಯೋಗ ಶಿಬಿರದಲ್ಲಿ ಭವರಲಾಲ್ ಆರ್ಯ ಸಲಹೆ

ಗೋಕಾಕ : ಪ್ರತಿನಿತ್ಯ ಯೋಗ ಮಾಡುವುದರಿಂದ ಮನಷ್ಯ ಒಳ್ಳೆಯ ಆರೋಗ್ಯ ಹೊಂದಲು ಸಾದ್ಯ ವೆಂದು ಪಂತಜಲಿ ಯೋಗ ಪೀಠ (ಟ್ರಸ್ಟ್) ಹರಿದ್ವಾರ ನ ಕರ್ನಾಟಕ ರಾಜ್ಯ ಪ್ರಭಾರಿ ಶ್ರೀ ಭವರಲಾಲ್ ಆರ್ಯ ಹೇಳಿದರು

ಇಲ್ಲಿಯ ಮಯೂರ ಸ್ಕೂಲ ಮೈದಾನದಲ್ಲಿ ಪತಂಜಲಿ ಯೋಗ ಪೀಠ (ಟ್ರಸ್ಟ್) ಹರಿದ್ವಾರ ,ವೈಭವಲಕ್ಷ್ಮೀ ಆರ.ಸಿ.ಎಮ್ ಬಜಾರ ಗೋಕಾಕ ಮತ್ತು ಸ್ವರ್ಣಶ್ರೀ ಏಜೆನ್ಸಿ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಇಂದಿನಿಂದ ಐದು ದಿನಗಳಕಾಲ ಹಮ್ಮಿಕೊಂಡ ಉಚಿತ ಯೋಗ ಶಿಬಿರವನ್ನು ಉದ್ಘಾಟಿಸಿ ಶಿಭಿರಾರ್ಥಿಗಳಿಗೆ ಯೋಗಭ್ಯಾಸ ಮಾಡಿಸುತ್ತಾ ಮಾತನಾಡಿದರು

ಮನುಷ್ಯನ ಆರೋಗ್ಯಕ್ಕೆ ಯೋಗವು ಸಂಜೀವನಿ ಇದ್ದಂತೆ ದಿನನಿತ್ಯದ ಜಂಜಾಟಗಳನ್ನು ಬದಿಗೋತ್ತಿ ಮನುಷ್ಯ ದಿನಾಲೂ ಕನಿಷ್ಠ ಅರ್ಧ ಘಂಟೆಗಳಕಾಲ ಯೋಗದಲ್ಲಿ ತೊಡಗಿದರೆ ರೋಗ ರುಜಿನಗಳಿಂದ ದೂರವಿದ್ದು ಆರೋಗ್ಯವಂತನಾಗಲು ಸಾಧ್ಯ . ತಾವು ಯೋಗ ಮಾಡುತ್ತಾ ಯೋಗದ ಬಗ್ಗೆ ಜನರಿಗೆ ತಿಳಿಹೇಳಿ ಅವರನ್ನು ಯೋಗ್ಯಾಭ್ಯಾಸ ಮಾಡುವಂತೆ ಪ್ರೇರೆಪಿಸಿ ಆರೋಗ್ಯವಂತ ಸಮಾಜ ನಿರ್ಮಿಸಲು ಸಹಕರಿಸಬೇಕೆಂದು ಸಲಹೆ ನೀಡಿದರಲ್ಲದೆ “ಕರೋ ಯೋಗ ರಹೋ ನಿರೋಗ ” ಎಂಬ ಘೋಷ್ಯವಾಕ್ಯವನ್ನು ಮೈದಾನದ್ಯಂತ ಮೋಳಗಿಸಿದರು.

ಶಿಬಿರದಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳು

ಇಂದಿನಿಂದ ಪ್ರಾರಂಭವಾಗಿರುವ ಈ ಉಚಿತ ಯೋಗ ಶಿಬಿರವು ಗುರುವಾರ ದಿ.1/6/2017.ರವರೆಗೆ ಪ್ರತಿನಿತ್ಯ ಬೆಳಿಗ್ಗೆ 5:15 ರಿಂದ 7:00 ರವರೆಗೆ ನಡೆಯಲಿದೆ ಗೋಕಾಕಿನ ಎಲ್ಲ ಸಾರ್ವಜನಿಕರು ಇದರ ಲಾಭ ಪಡೆದು ಪುನಿತರಾಗಬೇಕೆಂದು ಭವರಲಾಲ್ ಆರ್ಯ ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಈ ಸಮಯದಲ್ಲಿ ದೇವೇಂದ್ರಜಿ , ನಿಜಲಿಂಗ ದಡ್ಡಿಮನಿ ,ಶ್ರೀಮತಿ ಗುಗವಾಡ ,ವಿನೋದ ಜಾಧವ , ಶ್ರೀಕಾಂತ ಗೋಕಾಕ , ಶ್ರೀಧರ ಪಿರಡಿ , ವೀರಭದ್ರ ಗುಂಡಿ , ಸಂಜಯ ಕುಸ್ತಿಗಾರ , ಅಶೋಕ ಓಸವಾಲ ಸೇರಿದಂತೆ ಅನೇಕರು ಇದ್ದರು ಮೊದಲನೇಯ ದಿನ ನಡೆದ ಶಿಬಿದಲ್ಲಿ ನಗರದ ಸುಮಾರು ನೂರಕ್ಕೂ ಹೆಚ್ಚು ಜನ ಭಾಗವಹಿಸಿ ಇದರು ಲಾಭ ಪಡೆದರು. ಕಾರ್ಯಕ್ರಮವನ್ನು ಶಿಕ್ಷಕ ರಾಮಚಂದ್ರ ಕಾಕಡೆ ನಿರೂಪಿಸಿ ವಂದಿಸಿದರು

Related posts: