RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ರಮೇಶ ಜಾರಕಿಹೊಳಿ ಅವರಿಗೆ ಐದನೇಯ ಬಾರಿ ಜಯ : ಹರಕೆ ಪೂರೈಸಿದ ಅಭಿಮಾನಿ

ಗೋಕಾಕ:ರಮೇಶ ಜಾರಕಿಹೊಳಿ ಅವರಿಗೆ ಐದನೇಯ ಬಾರಿ ಜಯ : ಹರಕೆ ಪೂರೈಸಿದ ಅಭಿಮಾನಿ 

ರಮೇಶ ಜಾರಕಿಹೊಳಿ ಅವರಿಗೆ ಐದನೇಯ ಬಾರಿ ಜಯ : ಹರಕೆ ಪೂರೈಸಿದ ಅಭಿಮಾನಿ
ಗೋಕಾಕ ಮೇ 18 : ಮೊನ್ನೆಯಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಜಯಗಳಿಸಲಿ ಎಂದು ಹರಕೆ ಹೊತ್ತಿದ್ದ ಜಾರಕಿಹೊಳಿ ಅಭಿಮಾನಿಯೋರ್ವ ಇಂದು ತಮ್ಮ ಹರಕೆ ಪೂರೈಸಿದ್ದಾರೆ
ತಾಲೂಕಿನ ಗೋಕಾಕ ಫಾಲ್ಸ ವಾಲ್ಮೀಕಿ ನಗರದ ನಿವಾಸಿ ಹನಮಂತ ಸೊಂಡಿ ಹರಕೆ ಪೂರೈಸಿರುವ ಅಭಿಮಾನಿಯಾಗಿದ್ದು , ರಮೇಶ ಜಾರಕಿಹೊಳಿ 5 ನೆ ಬಾರಿಗೆ ವಿಧಾನ ಸಭೆ ಚುನಾವಣೆ ಯಲ್ಲಿ ಜಯಶಾಲಿ ಆಗಬೇಕೆಂದು ಲಕ್ಷ್ಮಿ ದೇವರಿಗೆ ಕಾಯಿ ಕಟ್ಟಿ.ಚಪ್ಪಲಿ ತೊರೆದು ಬರಗಾಲಿನಲ್ಲಿ ನಡೆದಾಡುವ ದಾಗಿ ಹರಕೆ ಹೊತ್ತಿದ್ದ , ಜಾರಕಿಹೊಳಿ ಅವರಿಗೆ 5 ಬಾರಿ ಶಾಸಕನಾಗುವ ಅದೃಷ್ಟ ದೊರೆತ ಹಿನ್ನಲೆಯಲ್ಲಿ ಇಂದು ಹನುಮಂತ ಲಕ್ಮೀ ಗುಡಿಗೆ ಬಂದು ತಮ್ಮ ಹರಕೆ ಪೂರೈಸಿದ್ದಾನೆ

ಈ ಸಂದರ್ಭದಲ್ಲಿ ಕಿರಣ ಢಮಾಮಗರ , ಕಾಂಗ್ರೇಸ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು

Related posts: