ಘಟಪ್ರಭಾ:ದರೋಡೆ ಮಾಡಲು ಬಂದು ಸಾರ್ವಜನಿಕರ ಕೈಗೆ ಸಿಕ್ಕಿ ಥಳಿಸಿಕೊಂಡ ಕಳ್ಳರು
ದರೋಡೆ ಮಾಡಲು ಬಂದು ಸಾರ್ವಜನಿಕರ ಕೈಗೆ ಸಿಕ್ಕಿ ಥಳಿಸಿಕೊಂಡ ಕಳ್ಳರು
ಘಟಪ್ರಭಾ ಮೇ 18 : ಪಿಗ್ಮಿ ಸಂಗ್ರಾಹಕನೊಬ್ಬನ ಮೇಲೆ ನಿರ್ಜನ ಪ್ರದೇಶದಲ್ಲಿ ಹಲ್ಲೆ ಮಾಡಿ ಆತನ ಬ್ಯಾಗಿನಲ್ಲಿರುವ ಹಣವನ್ನು ದೋಚಲು ಯತ್ನಿಸಿದ ಮಹಾರಾಷ್ಟ್ರ ಮೂಲದ ಕಳ್ಳರಿಬ್ಬರನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೋಲಿಸರಿಗೆ ಒಪ್ಪಿಸಿದ ಘಟನೆ ನಿನ್ನೆ ರಾತ್ರಿ 10ಗಂಟೆ ಸುಮಾರಿಗೆ ಘಟಪ್ರಭಾ ತರಕಾರಿ ಮಾರುಕಟ್ಟೆ ಹತ್ತಿರವಿರುವ ದಡ್ಡಿ ಲಕ್ಷ್ಮೀ ದೇವರ ಗುಡಿಯ ಹತ್ತಿರ ನಡೆದಿದೆ.
ಸ್ಥಳೀಯ ಭಾಗ್ಯಲಕ್ಷ್ಮೀ ಪತ್ತಿನ ಸಹಕಾರ ಸಂಘದ ಪಿಗ್ಮಿ ಸಂಗ್ರಾಹಕ ಶಂಕರ ಹೂಗಾರ ಎನ್ನುವ ವ್ಯಕ್ತಿ ತನ್ನ ಕೆಲಸ ಮುಗಿಸಿಕೊಂಡು ರಾತ್ರಿ 10ಗಂಟೆ ಸುಮಾರಿಗೆ ಮನೆ ಕಡೆ ಹೋಗುತ್ತಿರುವಾಗ ಇಲ್ಲಿನ ತರಕಾರಿ ಮಾರುಕಟ್ಟೆಯ ಹಿಂಭಾಗದಲ್ಲಿ ಜನರ ಓಡಾಟ ಕಡಿಮೆಯಿದ್ದ ಸ್ಥಳದಲ್ಲಿ ಚಿಲ್ಲರೆ ಕೇಳುವ ನೆಪದಲ್ಲಿ ಇಬ್ಬರು ಅಡ್ಡಕಟ್ಟಿ ಆತನ ಮುಖಕ್ಕೆ ಸುತ್ತಿಗೆಯಿಂದ ಹೊಡೆದು ಆತನ ಹಣದ ಬ್ಯಾಗ ಕಸಿದುಕೊಳ್ಳಲು ಯತ್ನಿಸಿದಾಗ ಕೆಳಗೆ ಬಿದ್ದ ಶಂಕರ ಜೋರಾಗಿ ಕೂಗಿ ಕೊಂಡಿದ್ದರಿಂದ ಹತ್ತಿರದ ಮನೆಯವರು ಓಡಿ ಬಂದು ಕಳ್ಳರನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಸರಿಯಾಗಿ ಥಳಿಸಿದ್ದಾರೆ. ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಸೇರಿದ್ದರಿಂದ ಜನರನ್ನು ಚದುರಿಸಲು ಸ್ಥಳಕ್ಕೆ ಆಗಮಿಸಿದ ಪೋಲಿಸರು ಪರದಾಡಬೇಕಾಯಿತ್ತು.
ಕಳ್ಳರನ್ನು ವಶಕ್ಕೆ ಪಡೆದುಕೊಂಡ ಪೋಲಿಸರು ತನಿಖೆ ನಡೆಸುತ್ತಿದ್ದು ಅವರು ಮಹಾರಾಷ್ಟ್ರ ಮೂಲದ ಇಂಚಲಕರಂಜಿಯವರು ಎಂದು ತಿಳಿದು ಬಂದಿದೆ ಗಾಯಗೊಂಡ ಪಿಗ್ಮಿ ಸಂಗ್ರಾಹಕ ಶಂಕರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾನೆ. ಘಟಪ್ರಭಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‍ಐ ದೇವಾನಂದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇವರÀ ಹಿಂದೆ ದೊಡ್ಡ ಜಾಲವೆ ಇದೆ ಎಂದು ಸಂಶಯ ವ್ಯಕ್ತ ಪಡಿಸಿದ್ದು ತೀವೃ ವಿಚಾರಣೆಯನ್ನು ನಡೆಸುತ್ತಿದ್ದಾರೆ.