RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಸಡಗರದಿಂದ ಜರುಗಿದ ಅಕ್ಷರಜಾತ್ರೆಯ “ಅಕ್ಷರ ಬಂಡಿ” ವಿನೂತನ ಕಾರ್ಯಕ್ರಮ

ಗೋಕಾಕ:ಸಡಗರದಿಂದ ಜರುಗಿದ ಅಕ್ಷರಜಾತ್ರೆಯ “ಅಕ್ಷರ ಬಂಡಿ” ವಿನೂತನ ಕಾರ್ಯಕ್ರಮ 

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಪಠ್ಯ ಪುಸ್ತಕ ವಿತರಣೆ ಹಾಗೂ ಅಕ್ಷರ ಬಂಡಿ ವಿನೂತನ ಕಾರ್ಯಕ್ರಮ ನಡೆಯಿತು

ಸಡಗರದಿಂದ ಜರುಗಿದ ಅಕ್ಷರಜಾತ್ರೆಯ “ಅಕ್ಷರ ಬಂಡಿ” ವಿನೂತನ ಕಾರ್ಯಕ್ರಮ
ಬೆಟಗೇರಿ ಮೇ 29 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ 2018-19 ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಪ್ರಯುಕ್ತ ಪಠ್ಯ ಪುಸ್ತಕ ವಿತರಣೆ ಹಾಗೂ ಅಕ್ಷರಜಾತ್ರೆಯ ಅಕ್ಷರ ಬಂಡಿ ವಿನೂತನ ಭವ್ಯ ಕಾರ್ಯಕ್ರಮ ಇದೇ ಮಂಗಳವಾರ ಮೇ.29 ರಂದು ಸಡಗರದಿಂದ ನಡೆಯಿತು.
ಸ್ಥಳೀಯ ಸಿಆರ್‍ಸಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ಟಿ.ಪುಂಜಿ ಅಕ್ಷರ ಜಾತ್ರೆಯ ವಿನೂತನ ಕಾರ್ಯಕ್ರಮದ ಅಕ್ಷರ ಬಂಡಿ ಭವ್ಯ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಅಕ್ಷರ ಬಂಡಿಯ ಮತ್ತು ಎತ್ತುಗಳನ್ನು ಅಕ್ಷರ, ಜ್ಯೂಲ್, ರಂಗು ರಂಗಿನ ಬಣ್ಣ ಬಳಿದು ಎತ್ತುಗಳ ಕೂಡುಗಳಿಗೆ ರೆಬ್ಬನ್‍ಗಳಿಂದ ಶೃಂಗರಿಸಿ, ಶಾಲೆಯ ಮುಖ್ಯ ಶಿಕ್ಷಕ ಬಂಡಿಯ ಯಜಮಾನನಾಗಿ, ಬಂಡಿಗಳಲ್ಲಿ ಶಾಲಾ ಮಕ್ಕಳನ್ನು ಕೂಡ್ರಿಸಿ, ಶಾಲಾ ಪ್ರಾರಂಭ, ಮಕ್ಕಳ ದಾಖಲಾತಿ ಸೇರಿದಂತೆ ಹಲವಾರು ಶಿಕ್ಷಣದ ಘೋಷ ವಾಕ್ಯಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಕೂಗುತ್ತಾ ಅಕ್ಷರ ಬಂಡಿ ಕಾರ್ಯಕ್ರಮ ಯಶಸ್ವಿಯಾಗಿ ಆಚರಿಸಿದ ಬಳಿಕ ಶಾಲಾ ಮಕ್ಕಳಿಗೆ ಪುಸ್ತಕ, ಸಿಹಿ ವಿತರಣೆ ಮಾಡಲಾಯಿತು.
ತೋಟದ ಶಾಲೆಗಳಲ್ಲಿ ಆಚರಣೆ: ಗ್ರಾಮದ ಪತ್ರೆಪ್ಪನ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ, ಲಕ್ಷ್ಮೀ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ, ಬಸವನಗರ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿಯೂ ಸಹ ಅಕ್ಷರಜಾತ್ರೆಯ ಅಕ್ಷರ ಬಂಡಿ ವಿನೂತನ ಭವ್ಯ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಯಶಸ್ವಿಯಾಗಿ ಆಚರಣೆ ಮಾಡಿದ ಬಳಿಕ ಶಾಲಾ ಮಕ್ಕಳಿಗೆ ಸಿಹಿ, ಪಠ್ಯ ಪುಸ್ತಕ ವಿತರಿಸಲಾಯಿತು. ತೋಟದ ಶಾಲೆಗಳ ಮುಖ್ಯ ಶಿಕ್ಷಕರಾದ ಬಿ.ಎ.ಕೋಟಿ, ಜಿ.ವೈ.ಹಂಜಿ. ಎನ್.ಆರ್.ಹುಣಶ್ಯಾಳ, ಶಾಲಾ ಶಿಕ್ಷಕವೃಂದ, ಬಿಸಿಯೂಟ ಅಡುಗೆ ಸಿಬ್ಬಂದಿ ಹಾಗೂ ಎಸ್‍ಡಿಎಮ್‍ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಣ ಪ್ರೇಮಿಗಳು, ಸ್ಥಳೀಯರು,ಇತರರು ಇದ್ದರು.
ಬೆಟಗೇರಿ ಸಿಆರ್‍ಸಿ ವಲಯ ವ್ಯಾಪ್ತಿಯಲ್ಲಿ : ಬೆಟಗೇರಿ, ಬಿಲಕುಂದಿ, ತಪಸಿ, ಕೆಮ್ಮನಕೋಲ, ನಿಂಗಾಪೂರ, ಬಗರನಾಳ ಸೇರಿದಂತೆ ಬೆಟಗೇರಿ ಸಿಆರ್‍ಸಿ ವಲಯ ವ್ಯಾಪ್ತಿಯ ಎಲ್ಲ ಸರ್ಕಾರಿ ಹಿರಿಯ ಹಾಗೂ ತೋಟದ ಕಿರಿಯ ಪ್ರಾಥಮಿಕ ಕನ್ನಡ ಶಾಲೆಗಳಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಅಕ್ಷರಜಾತ್ರೆಯ ಅಕ್ಷರ ಬಂಡಿ ವಿನೂತನ ಭವ್ಯ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಯಶಸ್ವಿಯಾಗಿ ನಡೆದ ಬಳಿಕ ಶಾಲಾ ಮಕ್ಕಳಿಗೆ ಸಿಹಿ, ಪಠ್ಯ ಪುಸ್ತಕ ವಿತರಣೆ ಮಾಡಲಾಗಿದೆ ಎಂದು ಬೆಟಗೇರಿ ಸಿಆರ್‍ಸಿ ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ಟಿ.ಪುಂಜಿ ತಿಳಿಸಿದ್ದಾರೆ.
ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳ ಮುಖ್ಯ ಶಿಕ್ಷಕರಾದ ವೈ ಸಿ ಶೀಗಿಹಳ್ಳಿ, ಆರ್ ಬಿ ಬೆಟಗೇರಿ, ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷರಾದ ರಾಮಣ್ಣ ನೀಲಣ್ಣವರ, ಉದ್ದಪ್ಪ ಚಂದರಗಿ, ಸದಸ್ಯರು, ಉಭಯ ಶಾಲೆಗಳ ಶಿಕ್ಷಕ ವೃಂದ, ಬಿಸಿಯೂಟ ಅಡುಗೆ ಸಿಬ್ಬಂದಿ, ಹಾಗೂ ಚುನಾಯಿತ ಗ್ರಾಪಂ, ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು, ಸದಸ್ಯರು, ಮಕ್ಕಳ ಪಾಲಕರು, ಶಿಕ್ಷಣ ಪ್ರೇಮಿಗಳು ಅಕ್ಷರ ಜಾತ್ರೆಯ ಅಕ್ಷರ ಬಂಡಿ ವಿನೂತನ ಭವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related posts: