RNI NO. KARKAN/2006/27779|Thursday, December 12, 2024
You are here: Home » breaking news » ಮೂಡಲಗಿ:ಮಕ್ಕಳನ್ನು ಸುಸಂಸ್ಕಂತ ಪ್ರಜೆಗಳನ್ನಾಗಿ ನಿರ್ಮಿಸುವ ಹೊಣೆ ಶಿಕ್ಷಕರ ಮೇಲಿದೆ : ಡಿಡಿಪಿಐ ಎಮ್.ಜಿ ದಾಸರ

ಮೂಡಲಗಿ:ಮಕ್ಕಳನ್ನು ಸುಸಂಸ್ಕಂತ ಪ್ರಜೆಗಳನ್ನಾಗಿ ನಿರ್ಮಿಸುವ ಹೊಣೆ ಶಿಕ್ಷಕರ ಮೇಲಿದೆ : ಡಿಡಿಪಿಐ ಎಮ್.ಜಿ ದಾಸರ 

ಕಲ್ಲೋಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣ ಬಂಡಿ ಶಿಕ್ಷಣ ಜಾತ್ರೆಯ ಜಾಥಾ ಕಾರ್ಯಕ್ರಮ ಹಾಗೂ ಶಾಲಾ ಪ್ರಾರಂಭೋತ್ಸವದಲ್ಲಿ ಡಿ.ಡಿ.ಪಿಐ ಎಮ್.ಜಿ ದಾಸರ ಪಾಲ್ಗೊಂಡು ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಿದರು.

ಮಕ್ಕಳನ್ನು ಸುಸಂಸ್ಕಂತ ಪ್ರಜೆಗಳನ್ನಾಗಿ ನಿರ್ಮಿಸುವ ಹೊಣೆ ಶಿಕ್ಷಕರ ಮೇಲಿದೆ : ಡಿಡಿಪಿಐ ಎಮ್.ಜಿ ದಾಸರ

ಮೂಡಲಗಿ ಮೇ 29 : ಮಕ್ಕಳು ಮಗ್ದ ಮನಸ್ಸುಗಳು ತಿಗರಿ ಮೇಲೆಟ್ಟಿರುವ ಮಣ್ಣಿದ್ದ ಹಾಗೆ, ಶಿಕ್ಷಣವೆಂಬ ಹೊರಣವನ್ನು ತುಂಬಿ ಸುಸಂಸ್ಕಂತ ಪ್ರಜೆಗಳನ್ನಾಗಿ ನಿರ್ಮಿಸುವ ಹೊಣೆ ಶಿಕ್ಷಕರ ಮೇಲೆ ಇದೆ ಎಂದು ಚಿಕ್ಕೋಡಿ ಡಿಡಿಪಿಐ ಎಮ್.ಜಿ ದಾಸರ ಹೇಳಿದರು.
ಅವರು ಸಮೀಪದ ಕಲ್ಲೋಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣ ಬಂಡಿ ಶಿಕ್ಷಣ ಜಾತ್ರೆಯ ಜಾಥಾ ಕಾರ್ಯಕ್ರಮ ಹಾಗೂ ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಗಂಧ ತೈಯದಾಗ ಮಾತ್ರ ಸುಗಂಧ ಹೊರ ಬರುವದು. ಮಕ್ಕಳ ಮುಗ್ಧ ಮನಸ್ಸಿನಲ್ಲಿ ಅಕ್ಷರವೆಂಬ ಭೀಜಾಕ್ಷರ ಬಿತ್ತಿದಾಗ ಮಾತ್ರ ಮೊಳಕೆ ಎಂಬ ಸಂಸ್ಕಾರ ಎಂಬ ಮೌಲ್ಯ ಹೊರ ಜಗತ್ತಿಗೆ ಕಾಣುವದು. ವಿದ್ಯಾರ್ಥಿ ಬಡವ ನಾಗಿರಬಹುದು ಆದರೆ ವಿದ್ಯೆಯಲ್ಲಿ ಶ್ರಿಮಂತನನ್ನಾಗಿಸಬೇಕು. ಶಾಲೆ ಎಂಬ ವಿದ್ಯಾಮಂದಿರದಲ್ಲಿ ಜ್ಞಾನಾರ್ಜನೆಯೇ ಪ್ರಸಾದವಾಗಿರಬೇಕು.
ಶಿಕ್ಷಕ ವೃತ್ತಿ ಪವಿತ್ರವಾದದ್ದು, ಮಕ್ಕಳೇ ನಮಗೆ ಆಸ್ಥಿ ನಮ್ಮ ಮಕ್ಕಳ ದಾಖಲಾತಿ ಹೆಚ್ಚಾದರೆ ನಮ್ಮ ಆಸ್ಥಿಯು ಹಚ್ಚಾಗಿದೆ ಎಂದು ತಿಳಿಯಬೇಕು. ಬೋಧನಾ ಅವಧಿಯಲ್ಲಿ ಖಡ್ಡಾಯವಾಗಿ ಮೊಬೈಲ್ ಬಳಕೆ ನಿಷೇದವಿದ್ದು ತಪ್ಪಿತಸ್ಥರ ವಿರೂದ್ಧ ಕ್ರಮ ಕೈಗೋಳ್ಳಲಾಗುವದು. ಅತೀ ಹೆಚ್ಚು ದಾಖಲಾತಿ ಹಾಜರಾತಿ ಕಡೆಗೆ ಗಮನ ಹರಿಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಶಿಕ್ಷಣದಿಂದ ಮಾತ್ರಾ ಸಮಾಜಿಕ ಕಳಕಳಿ ಹಾಗೂ ಜವಾಬ್ದಾರಿಗಳು ಹೆಚ್ಚುತ್ತವೆ. ಸರಕಾರದ ವಿವಿಧ ಯೊಜನೆಗಳ ಸದ್ಬಳಕೆ ಮಾಡಿಕೋಳ್ಳುವಂತೆ ಹೇಳಿದರು.
ಕಲ್ಲೋಳ್ಳಿಯ ಅಕ್ಷರ ಜಾತ್ರೆ ರಾಜ್ಯಕ್ಕೆ ಮಾದರಿ: ನೂತನ ವಿಸ್ಮಯ ರೀತಿಯಲ್ಲಿ ಜರುಗಿದ ಅಕ್ಷರ ಬಂಡಿ ಶಿಕ್ಷಣ ಜಾತ್ರೆ ಕಾರ್ಯಕ್ರಮವು ಅಭಿನಂದನರ್ಹವಾಗಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಲಯ ಮೂಡಲಗಿಯಾಗಿದ್ದು ಇಲ್ಲಿಯ ಶಿಕ್ಷಕ ಸಮುದಾಯದ ಅವಿರತ ಪ್ರಯತ್ನದ ಫಲವಾಗಿದೆ. ಕಲ್ಲೋಳ್ಳಿಯ ಸಾರ್ವಜನಿಕರು ಚುನಾಯಿತ ಪ್ರತಿನಿಧಿಗಳು, ಶಾಲಾ ಉಸ್ತುವಾರಿ ಶಿಕ್ಷಕರ ಅಕ್ಷರ ಜಾತ್ರೆ ಭವ್ಯವಾದದ್ದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಚಿಕ್ಕೋಡಿ ಡಿಡಿಪಿಐ ಕಛೇರಿಯ ಶಿಕ್ಷಣಾಧಿಕಾರಿ ಎ.ಸಿ ಮನ್ನಿಕೇರಿ ಮಾತನಾಡಿ, ಬೆಳಗಾವಿ ಜಿ.ಪಂ ಸಿ.ಇ.ಒ ರಾಮಚಂದ್ರನ್ ರವರ ಮಾರ್ಗದರ್ಶನದಂತೆ ಚಿಕ್ಕೋಡಿ ಶೈ.ಜಿಲ್ಲೆಯಲ್ಲಿ ನೂತನವಾಗಿ ಅಕ್ಷರ ಜಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿಕ್ಷಣ ಇಲಾಖೆಗೆ ಬೇಕಾಗುವ ಅಗತ್ಯ ಸಹಕಾರ ಸಲಹೆ ನೀಡಿದ್ದು, ಪ್ರಾಥಮಿಕ ಶಿಕ್ಷಣಕ್ಕೆ ಬೇಕಾಗುವ ಪಠ್ಯಪುಸ್ತಕ, ಸಮವಸ್ತ್ರ, ಕಟ್ಟಡಗಳು, ಮೈದಾನ ಅಗತ್ಯ ಸಿಬ್ಬಂದಿಯ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ನೀಡುವರು. ಅಕ್ಷರ ಜಾತ್ರೆಯ ಮೂಲಕ ಶೈಕ್ಷಣಿಕ ವರ್ಷದೂದ್ದಕ್ಕೂ ಕ್ರಿಯಾಶೀಲರಾಗಿ ಕಾರ್ಯಪ್ರವರ್ತಕರಾಗ ಬೇಕೆಂದರು.
ಪ್ರಾಸ್ತಾವಿಕವಾಗಿ ಮೂಡಲಗಿ ಬಿ.ಇ.ಒ ಎ.ಸಿ ಗಂಗಾಧರ ಮಾತನಾಡಿ, ಮೂಡಲಗಿ ವಲಯ ಸದಾ ತನ್ನ ಹಿರಿಮೆ ಗರಿಮೆಯನ್ನು ಕಾಯ್ದುಕೊಂಡು ಬಂದಿದೆ. ವಲಯ ವ್ಯಾಪ್ತಿಯಲ್ಲಿ ಶಾಲೆಗಳ ಪುನರಾರಂಭ ಹಾಗೂ ಶಿಕ್ಷಕರು ಕೈಗೊಂಡಿರುವ ಕಾರ್ಯಗಳು ಮೆಚ್ಚುವಂತಹದು. ಅಕ್ಷರ ಬಂಡಿಯ ಅಕ್ಷರ ಜಾತ್ರೆಯ ಕುರಿತು ವಿವರಿಸಿದರು.
ಕಲ್ಲೋಳ್ಳಿ ಗ್ರಾಮದ ಶಾಲೆಯಿಂದ ಹೋರಟ ಅಕ್ಷರ ಬಂಡಿಯ ಶಿಕ್ಷಣ ಜಾತ್ರೆಯು ಪ್ರಮುಖ ಬಿದಿ, ಸರ್ಕಲ್, ಮುಖ್ಯ ಬಿದಿ, ಸಿದ್ದಾರೋಢ ಮಠ, ಗೋಕಾಕ ಮುಖ್ಯ ರಸ್ತೆ ಮೂಲಕ ಸಾಗಿ ಎತ್ತು, ಬಂಡಿಗಳು ಶೃಂಗಾರಗೊಂಡಿದ್ದವು. ಶಿಕ್ಷಣದ ಒಳಾರ್ಥಯುಳ್ಳ ಘೋಷಣೆಗಳು ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಕಲ್ಲೋಳ್ಳಿ ಪ.ಪಂ ಅಧ್ಯಕ್ಷೆ ಕಸ್ತೂರಿ ಕುರಬೇಟ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶಿವಾನಂದ ಹೆಬ್ಬಾಳ, ದುಂಡಪ್ಪ ಕುರಬೇಟ, ಕರ್ನಾಚಿ, ಬಿ.ಆರ್.ಪಿಗಳಾದ ಕೆ.ಎಲ್ ಮೀಶಿ, ಎ.ಬಿ ಚವಡನ್ನವರ, ಸಿ.ಆರ್.ಪಿ ಎಸ್.ಬಿ ಕುಂಬಾರ, ಪ್ರಧಾನ ಗುರುಗಳಾದ ಸಿ.ಎಲ್ ಬಡಿಗೇರ, ನಾಯ್ಕೊಡಿ, ಎಚ್ ಎಮ್ ಸನದಿ, ಗೋಪಾಲ ರಾಠೋಡ, ಮಹಾಂತೇಶ ಹುಲ್ಲೋಳ್ಳಿ, ಗಣ್ಯರಾದ ಡಿ.ಎಸ್ ಗೋರೂಶಿ, ಮಾಲಾ ದಬಾಡಿ, ಲಗಮಪ್ಪ ಹೆಬ್ಬಾಳ, ಪ್ರಕಾಶ ಗೋಸಬಾಳ, ಹಣಮಂತ ಯಾದಗೂಡ, ಕಲ್ಲಪ್ಪ ಪಾಗದ, ಕೆ.ಎಮ್ ಬರನಟ್ಟಿ, ರಾಜು ಬಡೆಸಾ ಹಾಗೂ ಪಾಲಕರು, ಪೋಷಕ ಪ್ರತಿನಿಧಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts: