ಗೋಕಾಕ:ಭಾಷೆಯ ರಕ್ಷಣೆಗಾಗಿ ಹೋರಾಟಗಳು ಅನಿವಾರ್ಯವಾಗಿವೆ : ಎಸ್ ಎ ಕೋತವಾಲ
ಭಾಷೆಯ ರಕ್ಷಣೆಗಾಗಿ ಹೋರಾಟಗಳು ಅನಿವಾರ್ಯವಾಗಿವೆ : ಎಸ್ ಎ ಕೋತವಾಲ
ಗೋಕಾಕ ಜೂ 2 : ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ರಕ್ಷಣೆಗಾಗಿ ಹೋರಾಟಗಳು ಅನಿವಾರ್ಯವಾಗಿವೆ ಹೀಗಾಗಿ ಕನ್ನಡಪರ ಸಂಘಟನೆಗಳು ಸಂಘಟಿತರಾಗಿ ನಾಡಿನ ರಕ್ಷಣೆಗೆ ಹೋರಾಡಲು ನಗರಸಭೆ ಹಿರಿಯ ಸದಸ್ಯ ಎಸ್ ಎ ಕೋತವಾಲ ಕರೆ ನೀಡಿದರು.
ಅವರು, ನಗರದ ತಾಪಂ ಸಭಾ ಭವನದಲ್ಲಿ ಜರುಗಿದ ಕರ್ನಾಟಕ ರಕ್ಷಣಾ ವೇದಿಕೆ, ಗಜಸೇನೆಯ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಹೋರಾಟಕ್ಕೆ ಕನ್ನಡಪರ ಸಂಘಟನೆಗಳ ಪಾತ್ರ ಬಹುಮುಖ್ಯವಾಗಿದೆ ಎಂದ ಅವರು, ಇವರೊಂದಿಗೆ ಜನತೆ ಸಾಹಿತಿಗಳು ರಾಜಕೀಯ ವ್ಯಕ್ತಿಗಳು ಸೇರಿದಂತೆ ಹೋರಾಟ ಮಾಡಿದರೆ ನಾಡಿನ ರಕ್ಷಣೆ ಸಾಧ್ಯ ಎಂದರು.
ಮುಖ್ಯತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಚಂದ್ರಶೇಖರ ಅಕ್ಕಿ ಮಾತನಾಡುತ್ತ, ಕಾವೇರಿಯಿಂದ ಗೋದಾವರಿಯ ವರೆಗೆ ಇದ್ದ ಕನ್ನಡ ನಾಡನ್ನು ಅಂದಿನಿಂದ ಇಂದಿನವರೆಗೂ ಕಳೆದುಕೊಳ್ಳುತ್ತಿದ್ದೆವೆ. ಗಡಿ ರಾಜ್ಯಗಳಿಂದ ಸದಾ ಗಡಿ ಸಮಸ್ಸೆಗಳನ್ನು ಎದುರಿಸುತ್ತಿದ್ದೆವೆ. ಕನ್ನಡಿಗರೆಲ್ಲ ಜಾಗೃತರಾಗಿ ನಾಡಿನ ರಕ್ಷಣೆ ಮಾಡುವಂತೆ ಕರೆ ನೀಡಿದರು.
ಗಜಸೇನೆಯ ರಾಜ್ಯಾಧ್ಯಕ್ಷ ಬಿ ವಿ ರಾಘವೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಈ ಸಂಘಟನೆ ಬದುಕಿಗಾಗಿ ಹೋರಾಡದೇ ಬದುಕಿನೊಂದಿಗೆ ನಾಡಿನ ರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದು ಜನತೆ ಕೈ ಜೋಡಿಸುವಂತೆ ವಿನಂತಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ನೆರವೆರಿಸಿದರು.
ವೇದಿಕೆಯ ಮೇಲೆ ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್ ಜಿ ಚಿನ್ನನವರ, ಗಜಸೇನೆಯ ರಾಜ್ಯ ಪದಾಧಿಕಾರಿಗಳಾದ ನವೀನಕುಮಾರ, ಶಶಿಗೌಡಾ, ಕುಮಾರಸ್ವಾಮಿ, ಗೀತಾ, ಜಿಲ್ಲಾ ಘಟಕದ ಅಧ್ಯಕ್ಷ ಪವನ ಮಹಾಲಿಂಗಪೂರ, ಪದಾಧಿಕಾರಿಗಳಾದ ಸತೀಶ ಮನ್ನಿಕೇರಿ, ಸಚೀನ ಕಮಟೇಕರ, ಮಂಜುನಾಥ ಗಂಗನ್ನವರ, ರಾಜು ಕಲಾಲ, ಸುನೀಲ ಬಾಗಲಕೋಟಿ, ಸಾಗರ ಕುಂಬಾರ, ವಿಜಯ ಅಳಗುಂಡಿ ಇದ್ದರು. ಸಂತೋಷ ಸ್ವಾಗತಿಸಿ ವಂದಿಸಿದರು.