ಬೆಳಗಾವಿ :ಕೊಲೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ
ಕೊಲೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ
ಬೆಳಗಾವಿ ಜೂ 3 : ಕೇವಲ 15 ನೂರು ರೂಪಾಯಿಗಾಗಿ ನಡೆದ ಯುವಕನ ಕಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ
ಜೂ.1ರಂದು ನೆಹರೂ ನಗರದ ನಿವಾಸಿ ಬಸವರಾಜ ಕಾಕತಿ(22) ಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಸದಾಶಿವನಗರ ನಿವಾಸಿಗಳಾದ ಸೂರಜ್ ಶಿಂಧೆ (24), ಮನೋಜ್ ನೇಸರಕರ (27) ಅವರನ್ನು ಬಂಧಿಸಲಾಗಿದೆ. ಮೃತ ಬಸವರಾಜ ಮತ್ತು ಹಂತಕರ ಮಧ್ಯೆ ಕ್ಯಾಮರಾ ಮಾರಾಟ ಮಾಡಿದ ಹಣಕ್ಕಾಗಿ ಗಲಾಟೆ ಆಗಿತ್ತು.
ಕ್ಯಾಮೆರಾದ 1.500 ರುಪಾಯಿಯನ್ನು ಜೂ.1 ರಂದು ನೀಡುವುದಾಗಿ ಬಸವರಾಜ ಹೇಳಿದ್ದ. ಆದರೆ ಜೂ. 1ರ ರಾತ್ರಿ ಹಣ ನೀಡದಿದ್ದಾಗ ಚೂರಿಯಿಂದ ಇರಿದು ಆರೋಪಿಗಳು ಕೊಲೆ ಮಾಡಿದ್ದರು. ಕುಡಿದ ಮತ್ತಿನಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.