ಗೋಕಾಕ:ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಗೋಕಾಕಿನ ಔಷಧಿ ಅಂಗಡಿಗಳು ಮತ್ತು ಹೊಟೇಲ್ಸ್
ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಗೋಕಾಕಿನ ಔಷಧಿ ಅಂಗಡಿಗಳು ಮತ್ತು ಹೊಟೇಲ್ಸ್
ಗೋಕಾಕ ಮೇ 30: ಆನ್ ಲೈನ್ ಔಷಧಿ ಮಾರಾಟ ವಿರೋಧಿಸಿ ಮತ್ತು ಕೇಂದ್ರ ಸರ್ಕಾರವು ವೈದ್ಯರು ನೀಡುವ ಪ್ರತಿ ಪ್ರಿಸ್ಕ್ರಿಪ್ಷನ್ ಅನ್ನು ಸ್ಕ್ಯಾನ್ ಮಾಡಿ ಅಯಾ ಮೆಡಿಕಲ್ ಸ್ಟೋರ ನವರು ಸೆಂಟ್ರಲ್ ಇ ಪೋರ್ಟಲ್ ಗೆ ಅಪ್ಲೋಡ್ ಮಾಡಬೇಕೆಂಬ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿರುವುದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಇಂದು ರಾಜ್ಯಾದ್ಯಂತ ಮೆಡಿಕಲ್ ಶಾಪ್ ಗೆ ಬಂದಗೆ ಕರೆ ನೀಡಲಾಗಿದೆ.
ಕರದಂಟಿನ ನಾಡು ಗೋಕಾಕಿನಲ್ಲಿ ಮೆಡಿಕಲ್ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಈ ಬಂದಗೆ ಗೋಕಾಕ ಔಷಧ ವ್ಯಾಪಾರಸ್ಥರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿಲ್ಲ ಸೋಮವಾರ ಮದ್ಯರಾತ್ರಿ ೧೨ ಘಂಟೆ ಯಿಂದ ಮಂಗಳವಾರ ಮಧ್ಯರಾತ್ರಿ ೧೨ ಘಂಟೆವರೆಗೆ ಔಷಧಿ ಅಂಗಡಿಗಳು ಬಂದಾಗಲಿವೆ ಎಂದು ಸಂಘಟನೆಯವರು ತಿಳಿಸಿದರು
ಗೋಕಾಕಿನ ಬಸವೇಶ್ವರ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ, ಅಫ್ಸರಾ ಕೂಟ್, ಸೇರಿದಂತೆ ನಗರದಲ್ಲಿನ ಬಹುತೇಕ ಔಷಧ ಅಂಗಡಿಗಳು ಅರ್ಥ ಬಂದ ಅರ್ಥ ಚಾಲುವಾಗಿ ಕಾರ್ಯನಿರ್ವಹಿಸಿದ್ದು ಹೋರಾಟವನ್ನು ಇನುಕಿಸುವಂತೆ ಭಾಸವಗುತಿತ್ತು
ಇನ್ನು ಆಸ್ಪತ್ರೆಯ ಕಟ್ಟಡ ಒಳಗೆ ಹಾಗೂ ಹೊರಗೆ ಇರುವ ಪ್ರಧಾನ ಮಂತ್ರಿ ಜನರಿಕ್ ಔಷಧ ಅಂಗಡಿಗಳು ಮಂಗಳವಾರ ಎಂದಿನಂತೆ ಕೆಲಸ ನಿರ್ವಹಿಸುತ್ತವೆ.
ಔಷದ ಅಂಗಡಿ ಬಂದಾಗಿದ್ದರಿಂದ ಸಾರ್ವಜನಿಕರಿಗೆ ತೊಂದ್ರೆ ಉಂಟಾಗುತ್ತದೆ ಎಂದು ಭಾವಿಸಿದ ಗೋಕಾಕ ಜನತೆಗೆ ಯಾವುದೆ ತೊಂದರೆ ಉಂಟಾಗಲಿಲ್ಲಾ
ಬೆಳಗಾವಿ ಜಿಲ್ಲೆಯಲ್ಲಿ 1880 ಮೆಡಿಕಲ್ ಶಾಪ್ ಗಳಿವೆ ಇದರಲ್ಲಿ ಜಿಲ್ಲೆಯ 29 ಮಡ್ ಪ್ಲಸ್ ಮತ್ತು ಅಪೊಲೊ ಮೆಡಿಕಲ್ ಶಾಪ್ ಗಳಲ್ಲಿ ಔಷಧ ಲಭ್ಯವಾಗಿದೆ
ನಗರದ ಸರಕಾರಿ ಆಸ್ಪತ್ರೆಯಲ್ಲಿ 1 ಫಾರ್ಮಸಿ ಹಾಗೂ ಆಸ್ವತ್ರೆ ಎದುರುಗಡೆ 1 ಪ್ರಧಾನ ಮಂತ್ರಿ ಜನ ಜೌಷಧಿ ಕೇಂದ್ರ ಅಂಗಡಿಯಲ್ಲಿ ಔಷದ ಲಭ್ಯ ಇವೆ
ಜಿಲ್ಲೆಯ 1880 ಔಷಧ ಅಂಗಡಿಗಳ ಪೈಕಿ 1699 ಮೆಡಿಕಲ್ ಗಳು ಬಂದ್ ಗೆ ಬೆಂಬಲ ನೀಡಿವೆ ಎಂದು ತಿಳಿದು ಬಂದಿದೆ ಆದರೆ ಗೋಕಾಕ ನಗರದಲ್ಲಿ ಭಾಗಶಃ ಎಲ್ಲ ಜಾಷಧಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೆ ಕೆಲವು ಔಷಧಿ ಅಂಗಡಿಗಳು ಅರ್ಥ ಶೆಟರ್ ಬಂದ ಮಾಡಿ ಕಾರ್ಯನಿರ್ವಹಿಸುತ್ತಿವೆ
ಹೋಟೆಲಗಳಂತೂ ಬಂದಕಡೆ ಮುಖ ಮಾಡದೆ ಎಂದಿನಂತೆ ತಮ್ಮ ಕಾರ್ಯದಲ್ಲಿ ನಿರತರಾಗಿ಼಼ದ್ದಾರೆ
ಒಟ್ಟಾರೆಯಾಗಿ ದೇಶವ್ಯಾಪಿ ಬಂದ ಗೆ ಕರೆನಿಡಿದ್ದ ಔಷಧಿ ಮತ್ತು ಹೊಟೇಲ್ ಗಳ ಬಂದಗೆ ಗೋಕಾಕದಲ್ಲಿ ನಿರುತ್ಸಾಹ ದಾಯಕ ಬೆಂಬಲ ವ್ಯಕ್ತವಾಯಿತು