RNI NO. KARKAN/2006/27779|Friday, November 22, 2024
You are here: Home » breaking news » ಮೂಡಲಗಿ:ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ವಿಶ್ವವನ್ನು ರಕ್ಷಿಸುತ್ತದೆ : ಎ.ಸಿ ಗಂಗಾಧರ

ಮೂಡಲಗಿ:ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ವಿಶ್ವವನ್ನು ರಕ್ಷಿಸುತ್ತದೆ : ಎ.ಸಿ ಗಂಗಾಧರ 

ಮೂಡಲಗಿ ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಬಿ.ಇ.ಒ ಎ.ಸಿ ಗಂಗಾಧರ, ಕೆ.ಎಲ್.ಮೀಶಿ ಹಾಗೂ ಎಸ್.ಡಿ.ಎಮ್.ಸಿ ಆಧ್ಯಕ್ಷರು, ಸದಸ್ಯರು, ಮುಖ್ಯೋಪಾಧ್ಯಯರು, ಶಿಕ್ಷಕರು ಸಸಿ ನೇಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು.

ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ವಿಶ್ವವನ್ನು ರಕ್ಷಿಸುತ್ತದೆ : ಎ.ಸಿ ಗಂಗಾಧರ

ಮೂಡಲಗಿ ಜೂ 5 : ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ವಿಶ್ವವನ್ನು ರಕ್ಷಿಸುತ್ತದೆ. ಇಂದಿನ ಮಾಲಿನ್ಯಯುತ ಪರಿಸರದಿಂದಾಗಿ ಅನೇಕ ರೋಗಗಳು ಹೆಚ್ಚುತ್ತಿದ್ದು ಸೂಕ್ತ ಮುನ್ನಚರಿಕೆ ಕ್ರಮವಾಗಿ ಪರಿಸರ ರಕ್ಷಣೆಯ ಹಿತ ದೃಷ್ಠಿಯಿಂದ ಗಿಡ ಮರಗಳ ಪಾಲನೆ ಮಾಡಿದರೆ ಸ್ವಚ್ಛ ಪರಿಸರ ನಮ್ಮದಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ ಗಂಗಾಧರ ಹೇಳಿದರು.
ಅವರು ಮಂಗಳವಾರ ಪಟ್ಟಣದ ಬಿ.ಇ.ಒ, ಬಿ.ಆರ್.ಸಿ ಕಛೇರಿ, ಲೋಳಸೂರ, ಮೂಡಲಗಿ ಸರಕಾರಿ ಶಾಲೆಗಳಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮೂಡಲಗಿ ವಲಯ ವ್ಯಾಪ್ತಿಯ 263 ಸರಕಾರಿ ಕಿರಿಯ ಹಿರಿಯ ಮತ್ತು ಪ್ರೌಢ ಶಾಲೆಗಳಿಗೆ ಗೋಕಾಕನ ಸಾಮಾಜಿಕ ಅರಣ್ಯ ಇಲಾಖೆಯಿಂದ 1600 ಸಸಿಗಳನ್ನು ಪೂರೈಕೆ ಮಾಡಿದ್ದಾರೆ. ವಲಯದ ಎಲ್ಲ ಶಾಲೆಗಳ ತರಗತಿಗೊಂದರಂತೆ ವಿತರಿಸಿದ್ದು, ಈ ರೀತಿಯಾಗಿ ಏಕಕಾಲಕ್ಕೆ ವಿತರಣೆ ಹಾಗೂ ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಗಿಡಗಳನ್ನು ನೇಡುವ ಕಾರ್ಯ ಪ್ರಶಂಸಾರ್ಯವಾಗಿದೆ.
ಪರಿಸರ ದಿನಾಚರಣೆಗೆ ಅಷ್ಟೇ ಸಿಮಿತಗೊಳಿಸದೆ, ಸದಾ ಪರಿಸರ ಕಾಳಜಿ ಹಾಗೂ ವಿದ್ಯಾರ್ಥಿಗಳಿಗೆ ಅವುಗಳ ಪಾಲನೆ ಪೋಷನೆ ಅದರಿಂದಾಗುವ ಪ್ರಯೋಜನಗಳ ಕುರಿತು ವಿವರಿಸಬೇಕು. ಪರಿಸರದ ಕುರಿತು ಪ್ರಬಂಧ, ಕ್ವಿಜ್ ಗಳಂತ ಪಠ್ಯೇತರ ಕಾರ್ಯಕ್ರಮಗಳನ್ನು ಆಯೋಜಿಸಿ ಪರಿಸರ ದಿನಾಚರಣೆಗೆ ವಿಶೇಷ ಮೆರಗು ನೀಡಿರುವದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ವಲಯ ವ್ಯಾಪ್ತಿಯ ಎಲ್ಲ ಶಾಲೆಗಳನ್ನು ಪರಿಸರದೊಂದಿಗೆ ಸಂತಸದ ಕಲಿಕಾ ವಾತಾವರಣ ನಿರ್ಮಿಸುವಲ್ಲಿ ಕಾರ್ಯಮಾಡಲು ಶಿಕ್ಷಕರು, ಪಾಲಕರು ಚುನಾಯಿತ ಜನ ಪ್ರತಿನಿಧಿಗಳು ಶ್ರಮಿಸಬೇಕೆಂದು ವಿನಂತಿಸಿದರು.
ಮೂಡಲಗಿ ವಲಯ ವ್ಯಾಪ್ತಿಯ ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ತರಗತಿಗೊಂದರಂತೆ ಸಸಿಗಳನ್ನು ನೆಟ್ಟು ಎಸ್.ಡಿ.ಎಮ್.ಸಿ ಆಧ್ಯಕ್ಷರು, ಸದಸ್ಯರು, ಚುನಾಯಿತ ಜನಪ್ರತಿನಿಧಿಗಳು, ಮುಖ್ಯೋಪಾಧ್ಯಯರು, ಶಿಕ್ಷಕರು ಬಿ.ಆರ್.ಪಿ ಸಿ.ಆರ್.ಪಿಗಳು ವಿಶ್ವ ಪರಿಸರ ದಿನಾಚರಣೆ ಆಚರಿಸಿದರು.
ಕಾರ್ಯಕ್ರಮದಲ್ಲಿ ಸಮನ್ವಯಾಧಿಕಾರಿ ಬಿ.ಎಚ್ ಮೊರೆ, ಬಿ.ಆರ್.ಪಿ ಕೆ.ಎಲ್.ಮೀಶಿ, ಎ.ಬಿ ಚವಡನ್ನವರ, ಬಿ.ಎಮ್ ನಂದಿ, ಎಸ್.ಡಿ.ಎಮ್.ಸಿ ಅಧ್ಯಕ್ಷರುಗಳಾದ ಸರಸ್ವತಿ ಗುಡ್ಲಮನಿ, ರಾಜೇಂದ್ರ ಮಹೇಂದ್ರಕರ, ಖ್ವಾಜಾ ಅತ್ತಾರ, ಹನಮಂತ ಬಾಗಾಯಿ ಮುಖ್ಯೋಪಾದ್ಯಯರಾದ ಎಮ್.ಎಸ್ ಕೊಣ್ಣೂರ, ವಾಯ್.ಆರ್ ಖಾನಪ್ಪನವರ, ಮಹೇಶ್ವರಿ ಗಾಣಗಿ, ಕೆ.ಎಮ್ ಮುಕ್ಕನ್ನವರ, ಎ.ಪಿ ಪರಸನ್ನವರ, ಎಫ್ ಆರ್ ಯಲಿಗಾರ ಹಾಗೂ ವಲಯದ ಸಿ.ಆರ್.ಪಿಗಳು, ಶಿಕ್ಷಕ ಸಮೂಹ ಉಪಸ್ಥಿತರಿದ್ದರು.

Related posts: