ಬೆಳಗಾವಿ : ಎಚ್ ಡಿ ಕೆ ಸಂಪುಟ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸಚಿವ ರಮೇಶ ಜಾರಕಿಹೊಳಿ
ಎಚ್ ಡಿ ಕೆ ಸಂಪುಟ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸಚಿವ ರಮೇಶ ಜಾರಕಿಹೊಳಿ
ಬೆಳಗಾವಿ ಜೂ 6 : ಗೋಕಾಕ ಸಾಮಾನ್ಯ ವಿಧಾನಸಭಾ ಕ್ಷೇತ್ರದಿಂದ ಸತತ ಐದನೇಯ ಬಾರಿ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಅವರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು
ಬುಧವಾರದಂದು ರಾಜಧಾನಿ ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಂಪುಟ ವಿಸ್ತರಣೆ ಸಮಾರಂಭದಲ್ಲಿ ರಾಜಪಾಲ ವಜೂಬಾಯಿ ವಾಲಾ ಅವರು ರಮೇಶ ಜಾರಕಿಹೊಳಿ ಅವರಿಗೆ ಪ್ರಮಾಣ ಭೋದಿಸಿದರು
ಕಳೆದ ಎರೆಡು ವಾರದಿಂದ ಸಂಪುಟ ವಿಸ್ತರಣೆ ಕಸರತ್ತಿನಿಂದ ದೂರ ಉಳಿದಿದ ರಮೇಶ ಜಾರಕಿಹೊಳಿ ಅವರ ಹೆಸರು ಕೊನೆ ಘಳಿಗೆಯಲ್ಲಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ . ಇತ್ತ ಸಚಿವ ಸ್ಥಾನಕ್ಕೆ ಭಾರಿ ಲಾಬಿ ನಡೆಯಿಸಿದ ಜಿಲ್ಲೆಯ ಪ್ರಭಾವಿ ನಾಯಕರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಅವರಿಗೆ ತೀವ್ರ ಹಿನ್ನಡೆಯಾಗಿದೆ