ಗೋಕಾಕ:ವಿಕಲಚೇತನ ಮಕ್ಕಳ ಪ್ರವಾಸಕ್ಕೆ ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ಚಾಲನೆ
ವಿಕಲಚೇತನ ಮಕ್ಕಳ ಎರಡಡು ದಿನಗಳ ಪ್ರವಾಸಕ್ಕೆ ಶನಿವಾರದಂದು ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ಚಾಲನೆ ನೀಡುತ್ತಿರುವುದು.
ವಿಕಲಚೇತನ ಮಕ್ಕಳ ಪ್ರವಾಸಕ್ಕೆ ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ಚಾಲನೆ
ಗೋಕಾಕ ಜೂ, 23 ;- ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಕಲಚೇತನ ಮಕ್ಕಳ ಎರಡಡು ದಿನಗಳ ಪ್ರವಾಸಕ್ಕೆ ಶನಿವಾರದಂದು ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶೀಕ್ಷಣಾಧಿಕಾರಿ ಡಿ.ಎಸ್. ಕುಲಕರ್ಣಿ, ದೈಹಿಕ ಶಿಕ್ಷಣಾಧಿಕಾರಿ ವಿಜಯಕುಮಾರ ಸೂಲೇಗಾಂವಿ, ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಉಪಪ್ರಾಚಾರ್ಯ ಪಿ.ಎಚ್.ಕೌಜಲಗಿ, ಮಹೇಶ್ವರಿ ಶಿಕ್ಷಣ ಸಂಸ್ಥೆಯ ಚೇರಮನ್ ಗಿರೀಶ ಝಂವರ, ಶಿಕ್ಷಕರಾದ ಕೆ.ಎಸ್.ದಡ್ಡಿ, ಎಸ್.ಪಿ.ಉಪಳೆ, ಆರ್.ವಾಯ್.ಮಜ್ಜಗಿ, ಸಂಗಮೇಶ ಕೊಂತಿ, ಎಸ್.ಎಮ್.ಮುಲ್ಲಾ ಸೇರಿದಂತೆ ಅನೇಕರು ಇದ್ದರು.