ರಾಯಬಾಗ: ಅನೈತಿಕ ಸಂಬಂಧ ಕುಡಗೋಲಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ : ರಾಯಬಾಗ ತಾಲೂಕಿನ ಗುಂಡವಾಡ ಗ್ರಾಮದಲ್ಲಿ ಘಟನೆ
ಅನೈತಿಕ ಸಂಬಂಧ ಕುಡಗೋಲಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ : ರಾಯಬಾಗ ತಾಲೂಕಿನ ಗುಂಡವಾಡ ಗ್ರಾಮದಲ್ಲಿ ಘಟನೆ
ರಾಯಬಾಗ ಜೂ 1: ಅನೈತಿಕ ಸಂಬಂಧ ಹೊಂದಿದ ಪರಿಣಾಮ ವ್ಯಕ್ತಿಯನ್ನು ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಗುಂಡವಾಡ ಗ್ರಾಮದಲ್ಲಿ ನಡೆದಿದೆ.
ರಾಜೆಂದ್ರ ಕಾಂಬಳೆ( 44) ಕೊಲೆಯಾದ ವ್ಯಕ್ತಿಯಾಗಿದ್ದು, ಗಜೇಂದ್ರ ಗಸ್ತಿ ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇನ್ನೂ ಸ್ಥಳಕ್ಕೆ ಕುಡಚಿ ಪಿಎಸ್ಐ ಶಿವಶಂಕರ ಮುಖರಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕುಡಚಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ