ಬೆಳಗಾವಿ:ಬೆಳಗಾವಿ ನಗರದಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ಕರವೇ ಪ್ರತಿಭಟನೆ
ಬೆಳಗಾವಿ ನಗರದಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ಕರವೇ ಪ್ರತಿಭಟನೆ
ಬೆಳಗಾವಿ ಜು 4 : ನಗರದಲ್ಲಿ ಜಾಹೀರಾತು ಮತ್ತು ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಬುಧವಾರದಂದು ಪ್ರತಿಭಟನೆ ನಡೆಯಿಸಿ ಮಹಾನಗರ ಪಾಲಿಕೆ ಅಧಿಕಾರಿ ಡಾ. ಶಶಿಧರ ನಾಡಗೌಡ ಅವರಿಗೆ ಮನವಿ ಸಲ್ಲಿಸಿದರು .
ಇಂದು ಮುಂಜಾನೆ ಮಹಾನಗರ ಪಾಲಿಕೆಯ ಆವರಣದಲ್ಲಿ ಸೇರಿದ ಕರವೇ ಕಾರ್ಯಕರ್ತರು ಮಹಾನಗರ ಪಾಲಿಕೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು
ಕನ್ನಡವನ್ನು ರಾಜ್ಯ ಭಾಷೆಯಾಗಿ ಮತ್ತು ಆಡಳಿತ ಭಾಷೆಯಾಗಿ ಬಳಸಬೇಕೆಂದು ಸರಕಾರದ ಸ್ಪಷ್ಠ ಆದೇಶವಿದ್ದರೂ ಅದು ಜಾರಿಯಾಗುತ್ತಿಲ್ಲ.
ಜಾಹೀರಾತು ಫಲಕಗಳು, ಹೋರ್ಡಿಂಗಗಳು, ಅಂಗಡಿ ಮುಂಗಟ್ಟುಗಳು, ವಿದ್ಯಾ ಸಂಸ್ಥೆ ನಾಮಫಲಕಗಳು, ರಾಜಕಾರಣಿಗಳ ಶುಭಾಶಯ ಫಲಕಗಳು ಸೇರಿದಂತೆ ಎಲ್ಲ ಬರಹಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಪಾಲಿಕೆ ಆರೋಗ್ಯಾಧಿಕಾರಿ ಡಾ. ಶಶಿಧರ ನಾಡಗೌಡ ಅವರಿಗೆ ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ, ದೀಪಕ ಗುಡಗನಟ್ಟಿ,ಬಾಳು ಜಡಗಿ,ಸುರೇಶ ಗವನ್ನವರ, ಗಜಾನನ ಶಂಗೆ, ಕರೆಪ್ಪ ಕೊಚ್ಚರಗಿ, ಲಗಮನ್ನಾ ಅಂಕಲಗಿ, ಬಸವರಾಜ ಅವರೊಳ್ಳಿ, ಸಂತೋಷ ತಳ್ಳಿಮನಿ ಇತರರು ಉಪಸ್ಥಿತರಿದ್ದರು.