ಗೋಕಾಕ : ಸತೀಶ ಜಾರಕಿಹೊಳಿ ಅವರ ಹೇಳಿಕೆ ಸ್ವಾಗತಾರ್ಹ : ಮುರಘರಾಜೇಂದ್ರ ಶ್ರೀ
ಸತೀಶ ಜಾರಕಿಹೊಳಿ ಅವರ ಹೇಳಿಕೆ ಸ್ವಾಗತಾರ್ಹ : ಮುರಘರಾಜೇಂದ್ರ ಶ್ರೀ
ಗೋಕಾಕ ಜು 5 : ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲೆ ಮಾಡಲು ಸಮ್ಮಿಶ್ರ ಸರಕಾರದಲ್ಲಿ ಪ್ರಯತ್ನಿಸಲಾಗವದು ಎಂದು ಹೇಳಿರುವ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಹೇಳಿಕೆ ಸ್ವಾಗತಾರ್ಹ ವಾಗಿದೆ ಎಂದು ಗೋಕಾಕಿನ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ , ಗೋಕಾಕ ಜಿಲ್ಲಾ ಚಾಲನಾ ಸಮಿತಿಯ ಅಧ್ಯಕ್ಷರಾದ ಮ.ನಿ.ಪ್ರ ಶ್ರೀ ಮುರಘರಾಜೇಂದ್ರ ಸ್ವಾಮಿಗಳು ಹೇಳಿದರು
ನಗರದ ಶೂನ್ಯ ಸಂಪಾದನಾ ಮಠದಲ್ಲಿ ಗುರುವಾರದಂದು ಸಾಯಂಕಾಲ ಕರೆದ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು
ಸಿಎಂ ಕುಮಾರಸ್ವಾಮಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಆದಷ್ಟು ಬೇಗ ಸಿಎಂ ಮೇಲೆ ಒತ್ತಡ ಹಾಕಿ ಚಿಕ್ಕೋಡಿ ಮತ್ತು ಗೋಕಾಕ ಜನತೆಯ ಬಹುದಿನಗಳ ಜಿಲ್ಲಾ ಬೇಡಿಕೆಯನ್ನು ಈಡೇರಿಸಲು ಶ್ರಮಿಸಬೇಕು ಇವರಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಲು ಜಿಲ್ಲಾ ಚಾಲನಾ ಸಮಿತಿ ಸಿದ್ಧವಿದೆ .
ಈಗಾಗಲೇ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಸಹ ಗೋಕಾಕ ನೂತನ ಜಿಲ್ಲೆ ಮಾಡುವದಾಗಿ ಹೇಳಿಕೆ ನೀಡಿದ್ದಾರೆ ಇಬ್ಬರೂ ಸಹೋದರರು ಸೇರಿ ಆದಷ್ಟು ಬೇಗ ಈ ಗೋಕಾಕಕನ್ನು ನೂತನ ಜಿಲ್ಲೆಯನ್ನಾಗಿಸಲು ಶ್ರಮಿಸಬೇಕೆಂದು ಶ್ರೀಗಳು ಹೇಳಿದರು
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಸಿ.ಡಿ ಹುಕ್ಕೇರಿ , ಬಿ.ಬಿ ಬೀರನಗಡ್ಡಿ , ಸುರೇಶ ಪಾಟೀಲ , ಗುರು ಪೂಜೇರಿ , ಎಸ್.ಜಿ.ಪಾಟೀಲ , ಬಿ.ಆರ್.ತೋಟಗಿ , ಶಫಿ ಜಮಾದಾರ , ಎಸ್.ಬಿ.ಸಂತಿ , ಎಸ್.ಬಿ.ಅರಬಾಂವಿ , ಮುಖಂಡ ವಿವೇಕ ಜತ್ತಿ ಇದ್ದರು