RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಸಚಿವ ರಮೇಶ ಗೋಕಾಕ ಮತಕ್ಷೇತ್ರದ ಡ್ರೈವರ್ ಇದ್ದಂತೆ : ಮುರಘರಾಜೇಂದ್ರ ಶ್ರೀ ಅಭಿಮತ

ಗೋಕಾಕ:ಸಚಿವ ರಮೇಶ ಗೋಕಾಕ ಮತಕ್ಷೇತ್ರದ ಡ್ರೈವರ್ ಇದ್ದಂತೆ : ಮುರಘರಾಜೇಂದ್ರ ಶ್ರೀ ಅಭಿಮತ 

ಸಚಿವ ರಮೇಶ ಗೋಕಾಕ ಮತಕ್ಷೇತ್ರದ ಡ್ರೈವರ್ ಇದ್ದಂತೆ : ಮುರಘರಾಜೇಂದ್ರ ಶ್ರೀ ಅಭಿಮತ

ಗೋಕಾಕ ಜು 6 : ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಗೋಕಾಕ ಮತಕ್ಷೇತ್ರದ ಜನತೆಯ ಡ್ರೈವರ್ ಇದ್ದಂತೆ ಎಲ್ಲರನ್ನು ಕೂಡ್ರಿಸಿಕೊಂಡು ಅಭಿವೃದ್ಧಿಯತ್ತ ಒಯ್ಯುತ್ತಿದ್ದಾರೆ ಎಂದು ನಗರದ ಶೂನ್ಯ ಸಂಪಾದನಾ ಮಠದ ಮ.ನಿ.ಪ್ರ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು

ಶುಕ್ರವಾರದಂದು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಗರಸಭೆ ಗೋಕಾಕ ವತಿಯಿಂದ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಹಮ್ಮಿಕೊಂಡಿದ್ದ ಪೌರ ಸನ್ಮಾನ ಹಾಗೂ ಗೋಕಾಕ ನಗರದಲ್ಲಿ ರೂ 36.41 ಕೋಟಿ ಅಂದಾಜು ಮೊತ್ತದ 11 ಕೆ.ವ್ಹಿ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ , ರೂ 21 ಕೋಟಿ ಮೊತ್ತದ ನಖರೋತ್ಥಾನ 3 ನೇ ಹಂತದ ಕಾಮಗಾರಿಗಳಿಗೆ ಚಾಲನೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು

ಮೊದಲನೇ ಸಾರಿ ಸಚಿವರಾದಾಗ ಸಚಿವಸ್ಥಾನವನ್ನು ರಮೆಶ ಜಾರಕಿಹೊಳಿ ಸರ್ಮಥವಾಗಿ ನಿಭಾಯಿಸುತ್ತಾರ ಎಂಬ ಅನುಮಾನ ವಿತ್ತು ಆದರೆ ಜನರ ನಿರೀಕ್ಷೆಗೂ ಮೀರಿ ಕೆಲಸ ಮಾಡಿ ತೋರಿಸಿದ್ದಾರೆ ಅದಕ್ಕಾಗಿಯೇ ಜನ ಅವರನ್ನು ಐದನೇಯ ಭಾರಿಗೆ ಆಯ್ಕೆಮಾಡಿದ್ದಾರೆ .
ಮಾಸ್ಟರ್ ಪ್ಲ್ಯಾನ್ ದಂತಹ ಮಹತ್ವದ ಯೋಜನೆಯನ್ನು ತಂದು ಗೋಕಾಕ ನಗರವನ್ನು ಸುಂದರ ಗೋಳಿಸಲು ಪ್ರಯತ್ನಿಸುತ್ತಿದ್ದಾರೆ . ಮೊದಲು ಮಾಸ್ಟರ್ ಪ್ಲ್ಯಾನ್ ಯೋಜನೆಗೆ ಬಲವಾದ ವಿರೋಧ ವ್ಯಕ್ತ ಪಡಿಸಿದ್ದು ನಾನೇ ನಂತರ ಈ ಯೋಜನೆಯ ಮಹತ್ವ ಅರಿತು ಬೆಂಬಲಿಸಿದೆ ಎಂದು ನೆನಪಿಸದ ಶ್ರೀಗಳು ಹಿಂದಿನ ಕಾಲದಲ್ಲಿ ಗೋಕಾಕ ನಾಡನ್ನು ಮೊದಲು ರಟ್ಟರು , ಬಾದಾಮಿ ಚಾಲುಕ್ಯರು , ವಿಜಯ ನಗರ ಅರಸರು , ಬಿಜಾಪೂರದ ಆದಿಲಶಾಹಿಗಳು , ಶಿವಾಜಿ ಮಾಹಾರಾಜ ರಂತಹ ಪ್ರತಿಷ್ಠಿತ ಮಹಾನ ವ್ತಕ್ತಿಗಳು ಸರ್ಮಥವಾಗಿ ಆಳಿ ಹೋಗಿದ್ದಾರೆ ಈಗ ಪ್ರಸ್ತುತ ಜಾರಕಿಹೊಳಿ ಸಹೋದರರು ಗೋಕಾಕ ನಾಡನ್ನು ಸರ್ಮಥವಾಗಿ ಆಳುವ ಮುಖೇನ ಅಂತಹ ಮಹಾನ ವ್ಯಕ್ತಿಗಳ ಸಾಲಿಗೆ ಸೇರಿ ಇತಿಹಾಸ ಸೃಷ್ಠಿಸಿದ್ದಾರೆ ಎಂದು ಮುರಘರಾಜೇಂದ್ರ ಶ್ರೀ ಹೇಳಿದರು

ಈ ಸಂಧರ್ಭದಲ್ಲಿ ತಹಶೀಲ್ದಾರ್ ಜಿ.ಎಸ.ಮಾಳಗಿ , ಹೆಸ್ಕಾಂ ಅಧಿಕಾರಿಗಳಾದ ಕಿರಣ ಸಣಕ್ಕಿ , ವರಾಳೇ , ಅನಿಲಕುಮಾರ ಬಬಲೇಶ್ವರ , ಸ್ಥಾಯಿ ಸಮಿತಿ ಚೇರಮನ್ ಭಗವಂತ ಹೂಳಿ , ಉಪಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಜತ್ತಿ , ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ , ಯುವ ಧುರೀಣ ಅಮರನಾಥ ಜಾರಕಿಹೊಳಿ , ಎಪಿಎಂಸಿ ನಿದೇರ್ಶಕ ಬಸವರಾಜ ಸಾಯನ್ನವರ , ಅಬ್ಬಾಸ ದೇಸಾಯಿ , ಜಯಾನಂದ ಹುಣಶ್ಯಾಳ , ಭೀಮಶಿ ಭರಮಣ್ಣವರ , ಗಿರೀಶ ಖೋತ , ಚಂದ್ರಕಾಂತ ಈಳಿಗೇರ , ವಿಶ್ವನಾಥ್ ಬಿಳ್ಳೂರ , ಜಾಕೀರ ನಧಾಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: