ಘಟಪ್ರಭಾ:ದಿ. 16 ರಂದು ರೈಲು ರೋಖೋ ಚಳವಳಿ : ಸುರೇಶ ಪಾಟೀಲ
ದಿ. 16 ರಂದು ರೈಲು ರೋಖೋ ಚಳವಳಿ : ಸುರೇಶ ಪಾಟೀಲ
ಘಟಪ್ರಭಾ ಜು 13 : ಯಶವಂತಪೂರ-ಪಂಡರಪೂರ 16541 ಮತ್ತು 16542 ರೈಲುಗಳನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ರದ್ದು ಮಾಡಿದ್ದನ್ನು ಖಂಡಿಸಿ ದಿ.16 ರಂದು ರೈಲು ರೋಖೋ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಹಿರಿಯ ಕಾರ್ಯಕರ್ತ ಸುರೇಶ ಪಾಟೀಲ ತಿಳಿಸಿದ್ದಾರೆ.
ದಿ. 13 ರಂದು ರೈಲು ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಇತ್ತೀಚಿಗೆ ಘಟಪ್ರಭಾ ರೇಲ್ವೆ ಸುಪ್ರಿಡೆಂಟ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ರೈಲು ನಿಲುಗಡೆ ಮಾಡದ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತ ಪಡಿಸಿರುವ ಅವರು ದಿ.16 ರಂದು ರೈಲು ರೋಖೋ ಚಳವಳಿಯನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಆಗಮಿಸಿ ಕೋಲ್ಹಾಪೂರ-ಹೈದರಾಬಾದ ರೈಲು ತಡೆದು ಪ್ರತಿಭಟಿಲಾಗುವುದು ಎಂದು ತಿಳಿಸಿದ್ದಾರೆ.