ಗೋಕಾಕ:ಪೌರಾಡಳಿತ ಸಚಿವ ಹಾಗೂ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹರಿಸಿಕೊಳ್ಳುತ್ತೆವೆ : ಎಸ್.ಎಚ್.ದೇಸಾಯಿ
ಪೌರಾಡಳಿತ ಸಚಿವ ಹಾಗೂ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹರಿಸಿಕೊಳ್ಳುತ್ತೆವೆ : ಎಸ್.ಎಚ್.ದೇಸಾಯಿ
ಗೋಕಾಕ ಜು 13 : ನಂದಗಾಂವ ಹಾಗೂ ಮಾಲದಿನ್ನಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಿದ್ದನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಪಂಚಾಯತ ರಾಜ್ ನೌಕರರ ಸಂಘದಿಂದ ಕಳೆದ ಮಂಗಳವಾರದಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲಾದ ಮನವಿಗೂ ಸಂಘಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸಂಘದ ಅಧ್ಯಕ್ಷ ಎಸ್.ಎಚ್.ದೇಸಾಯಿ ಹೇಳಿದರು.
ಅವರು ಶುಕ್ರವಾರದಂದು ನಗರದ ತಾಲೂಕಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರದಂದು ಪಂಚಾಯತ ರಾಜ್ ನೌಕರರ ಸಂಘದ ಸಭೆಯಲ್ಲಿ ಮಾತನಾಡುತ್ತಿದ್ದರು.
ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹಾಗೂ ಮೇಲಾಧಿಕಾರಿಗಳ ಜೊತೆ ಈ ಸಂಬಂಧವಾಗಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವದು. ಕೆಲ ಪತ್ರಿಕೆಗಳಲ್ಲಿ ಬಂದ ವರದಿಗಳ ಪ್ರಕಾರ ಪಂಚಾಯತ ರಾಜ್ ನೌಕರರ ಸಂಘಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಮತ್ತು ಈ ಸಂಬಂಧವಾಗಿ ಹೋರಾಟ ವಗೈರೆ ಮಾಡುವುದಿಲ್ಲ ಎಂದು ಸಭೆಯಲ್ಲಿ ಸ್ಪಷ್ಟ ಪಡಿಸಿದರಲ್ಲದೆ ಈ ಬಗ್ಗೆ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಉಮೇಶ ಮನಗೂಳಿ, ಬಿ.ಎಫ್. ದಳವಾಯಿ, ಎಮ್.ಡಿ.ಸರ್ಕಾವಸ, ವಿ. ನಾಗರಾಜು, ಎಂ.ಬಿ. ಯಡವಣ್ಣವರ, ವಿ.ಎಸ್.ಗುಂಡಿ, ಎ.ಎಂ ಭಜಂತ್ರಿ, ಎಸ್.ಸಿ.ಮೆಣಸಿನಕಾಯಿ, ಎಸ್.ಆರ್.ದೇವರ, ವಾಯ್.ಎನ್. ಮೂಡಲಗಿ, ಗುಜನಟ್ಟಿ, ಗುಡಸಿ, ಎಸ್.ಆರ್.ಜಮಖಂಡಿ, ವಿ.ಎನ್. ಪಟ್ಟಿಹಾಳ, ಸತೀಶ ಸುಣಗಾರ, ಪರಶುರಾಮ ಸಮಗಾರ ಸೇರಿದಂತೆ ಅನೇಕರು ಇದ್ದರು.