ಗೋಕಾಕ:ಸಡಗರದಿಂದ ನಡೆದ ದ್ಯಾಮವ್ವ ದೇವಿಯ ಮೂರ್ತಿಯ ಬೀಳ್ಕೂಡುವ ಕಾರ್ಯಕ್ರಮ
ಸಡಗರದಿಂದ ನಡೆದ ದ್ಯಾಮವ್ವ ದೇವಿಯ ಮೂರ್ತಿಯ ಬೀಳ್ಕೂಡುವ ಕಾರ್ಯಕ್ರಮ
ಬೆಟಗೇರಿ : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ದೇವತೆ ದ್ಯಾಮವ್ವದೇವಿಯ ಜಾತ್ರಾ ಮಹೋತ್ಸವ ಮುಂಬರುವ ಇದೇ ಅಗಸ್ಟ್.6 ರಿಂದ ಅಗಸ್ಟ್.10 ರವರೆಗೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ಪ್ರಯುಕ್ತ ಗ್ರಾಮ ದೇವಿ ದ್ಯಾಮವ್ವ ದೇವಿಯ ಮೂರ್ತಿಯನ್ನು ಬಣ್ಣಕ್ಕಾಗಿ ಬೀಳ್ಕೂಡುವ ಕಾರ್ಯಕ್ರಮ ಶನಿವಾರ ಜುಲೈ.14 ರಂದು ಸಡಗರದಿಂದ ನಡೆಯಿತು.
ಸ್ಥಳೀಯ ಗ್ರಾಮ ದೇವತೆ ದ್ಯಾಮವ್ವದೇವಿಯ ದೇವಸ್ಥಾನದಲ್ಲಿ ಬೆಳಗ್ಗೆ 6 ಗಂಟಗೆ ಶ್ರೀದೇವಿಯ ಗದ್ಗುಗೆಯ ಮೂರ್ತಿ ಮಹಾಪೂಜೆ, ಅಭಿಷೇಕ, ಉಡಿ ತುಂಬುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪ್ರದಾಯದಂತೆ ಜರುಗಿದವು. ಗ್ರಾಮದ ಶ್ರೀದೇವಿಯ ಮೂರ್ತಿಯನ್ನು ಬಣ್ಣಕ್ಕಾಗಿ ಇಲ್ಲಿಯ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರ ಆರತಿ, ಕರಡಿ ಮಜಲು ಸೇರಿದಂತೆ ಸಕಲ ವಾದ್ಯಮೇಳಗಳೊಂದಿಗೆ ಗ್ರಾಮಸ್ಥರು, ಭಕ್ತರು ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮಕ್ಕೆ ಬೀಳ್ಕೂಡುವ ಕಾರ್ಯಕ್ರಮ ವೈಭವದಿಂದ ನಡೆಯಿತು.
ಶಿವಾಜಿ ನೀಲಣ್ಣವರ, ರಾಮಣ್ಣ ಬಳಿಗಾರ, ಶ್ರೀಶೈಲ ಗಾಣಗಿ, ಲಕ್ಷ್ಮಣ ಸೋಮನಗೌಡ್ರ, ಕಲ್ಲಪ್ಪ ಚಂದರಗಿ, ಮುತ್ತೆಪ್ಪ ವಡೇರ, ರಾಜು ಪತ್ತಾರ, ಸಂತೋಷ ಬಡಿಗೇರ, ಪರಶುರಾಮ ಬಡಿಗೇರ, ವಿಠಲ ಕೋಣಿ, ಸುರೇಶ ಬಡಿಗೇರ, ಲಕ್ಷ್ಮಣ ಚಂದರಗಿ, ವಿಠಲ ಚಂದರಗಿ, ರಾಮಣ್ಣ ನೀಲಣ್ಣವರ, ಪ್ರಕಾಶ ಬಡಿಗೇರ, ಸಂಜು ಪೂಜೇರಿ, ಮಲ್ಲಪ್ಪ ಪಣದಿ ಸೇರಿದಂತೆ ಸ್ಥಳೀಯ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಆಚರಣೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಶ್ರೀದೇವಿಯ ಭಕ್ತರು, ಇತರರು ಇದ್ದರು.