RNI NO. KARKAN/2006/27779|Saturday, November 23, 2024
You are here: Home » breaking news » ಗೋಕಾಕ:ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ ಕಾರ್ಡ ಕಡ್ಡಾಯ : ಜಿ.ಎಸ್.ಮಳಗಿ

ಗೋಕಾಕ:ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ ಕಾರ್ಡ ಕಡ್ಡಾಯ : ಜಿ.ಎಸ್.ಮಳಗಿ 

ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ ಕಾರ್ಡ ಕಡ್ಡಾಯ : ಜಿ.ಎಸ್.ಮಳಗಿ

ಗೋಕಾಕ ಜು 16: ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಹಾಗೂ ಇನ್ನಿತರ ಕಾರ್ಯಗಳಲ್ಲಿ ಆಧಾರ ಕಾರ್ಡ ಕಡ್ಡಾಯವಾಗಿ ಬೇಕಾಗಿರುವುದರಿಂದ ಇಂದು ಆಧಾರ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಇದರ ಪ್ರಯೋಜನೆಯನ್ನು ಸಾರ್ವಜನಿಕರು ಪಡೆಯಬೇಕೆಂದು ತಹಶೀಲದಾರ ಜಿ.ಎಸ್.ಮಳಗಿ ಹೇಳಿದರು.
ಸೋಮವಾರದಂದು ನಗರದ ಮಿನಿ ವಿಧಾನ ಸೌಧದಲ್ಲಿ ಆಧಾರ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧಾರ ಕಾರ್ಡಗೆ ಸಂಭಂದಿಸಿದ ಕುಂದುಕೊರತೆ ನಿವಾರಣೆ ಮಾಡಿಕೊಳ್ಳಲು ಈ ಅದಾಲತ್ ಸಾರ್ವಜನಿಕರಿಗೆ ಅನುಕೂಲಕರವಾಗಿರುತ್ತದೆ ಎಂದು ತಿಳಿಸಿದರು.
ಆಧಾರಗೆ ಸಂಬಂಧಿಸಿದ ತಿದ್ದುಪಡಿಗಳು ಹಾಗೂ ಇತರೆ ಸಮಸ್ಯೆಗಳನ್ನು ಸ್ಥಳದಲ್ಲಿಯೇ ನಿವಾರಣೆ ಮಾಡಲಾಗುವುದು. ಇದಕ್ಕಾಗಿಯೇ ಹೆಚ್ಚುವರಿಯಾಗಿ 4 ಕೌಂಟರಗಳನ್ನು ತೆರೆಯಲಾಗಿದ್ದು ಸಾರ್ವಜನಿಕರಿಗೆ ಇದು ಸುವರ್ಣ ಅವಕಾಶವಾಗಿದೆ. ಆಧಾರ ಅದಾಲತ್ ಕಾರ್ಯಕ್ರಮವು ದಿ. 21 ರ ವರೆಗೆ ನಡೆಯಲಿದ್ದು. ಇದರ ಪ್ರಯೋಜನೆಯನ್ನು ಸಾರ್ವಜನಿಕರು ಪಡೆದುಕೊಳ್ಳುಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಳಗಾವಿಯ ಆಧಾರ ಮುಖ್ಯಸ್ಥ ಇಳಯರಾಜ ಮಾಣಿಕಂ, ಗ್ರೇಡ್-2 ತಹಶೀಲದಾರಾದ ಎಸ್.ಕೆ.ಕುಲಕರ್ಣಿ, ಎಲ್.ಎಚ್.ಭೋವಿ, ಉಪ ತಹಶೀಲದಾರರಾದ ವಾಯ್.ಎಲ್.ಡಬ್ಬನವರ, ಎಮ್.ಎ.ಚೌಧರಿ ಇದ್ದರು.
ಆರ್.ಎನ್.ನಕಾತಿ ಸ್ವಾಗತಿಸಿದರು. ಶ್ರೀನಾಥ ಬಾಗಿ ವಂದಿಸಿದರು.

Related posts: