RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ :ಸರಕಾರದ ಯೋಜನೆಗಳು ಮನೆ ಮನೆ , ಮನ ಮನಗಳಿಗೆ ತಲುಪುತ್ತಿವೆ : ಸಚಿವ ರಮೆಶ

ಗೋಕಾಕ :ಸರಕಾರದ ಯೋಜನೆಗಳು ಮನೆ ಮನೆ , ಮನ ಮನಗಳಿಗೆ ತಲುಪುತ್ತಿವೆ : ಸಚಿವ ರಮೆಶ 


ಸರಕಾರದ ಯೋಜನೆಗಳು ಮನೆ ಮನೆ , ಮನ ಮನಗಳಿಗೆ ತಲುಪುತ್ತಿವೆ : ಸಚಿವ ರಮೆಶ

 

ಗೋಕಾಕ ಜೂ 3 : ಕಳೆದ ಸತತ ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳು ಸಾರ್ವಜನಿಕರ ಮನೆ ಮನೆಗೆ , ಮನ ಮನಗಳಿಗೆ ತಲುಪಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು .
ಅವರು ಕರ್ನಾಟಕ ಸರಕಾರ , ಜಿಲ್ಲಾ ಪಂಚಾಯತ್ ಬೆಳಗಾವಿ,ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ , ಸಮೂಹ ಸಂಪನ್ಮೂಲ ಕೇಂದ್ರ ಹಿರೇನಂದಿ ಇವುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಿಗ್ಗೆ ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ 2017/18 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಇಲಾಖಾ ಪ್ರೋತ್ಸಾಹದಾಯಕ ಯೋಜನೆಗಳ ಅನುಷ್ಠಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

ಕಳೆದ ಎರೆಡು ದಶಕಗಳಿಂದ ಸರಕಾರದಿಂದ ವಿದ್ಯಾರ್ಥಿಗಳಿಗೆ ದೊರೆಯುವ ಎಲ್ಲಾ ಸಹಾಯ , ಸವಲತ್ತುಗಳನ್ನು ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತಿದೆವೆ ಶಿಕ್ಷಕ ಬಳಗವು ಸಹ ಗುಣಮಟ್ಟದ ಶಿಕ್ಷಣವನ್ನು ನೀಡಿ ಮಕ್ಕಳ ಬೌದ್ಧಿಕ ಮಟ್ಟವನ್ನು ಬೆಳೆಸಲು ರಚನಾತ್ಮಕ ಕಾರ್ಯಗಳನ್ನು ರೂಪಿಸಿಕೊಂಡು ಬೋಧನೆ ಮಾಡಬೇಕೆಂದು ಸಚಿವರು ಶಿಕ್ಷಕರಿಗೆ ಕಿವಿಮಾತು ಹೇಳಿದರು

ಜಾರಕಿಹೊಳಿ ಕುಟುಂಬದ ಎಲ್ಲ ಸಹೋದರರು ಸಹ ಇದೇ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಸಾಧನೆಯ ಹಾದಿಯನ್ನು ತಲುಪಲು ಸಾದ್ಯವಾಗಿದೆ ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ನೆನೆದ ಸಚಿವರು
ಈ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಗೋಕಾಕ ವಲಯವನ್ನು ರಾಜ್ಯಮಟ್ಟದಲ್ಲಿ ಪರಿಚಯಿಸುವಂತೆ ಮಾಡಿದೆ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿ ಗಳು ಮತ್ತು ಶಿಕ್ಷಕರು ಮತ್ತಷ್ಟು ಶ್ರಮ ವಹಿಸಿ ಗೋಕಾಕ ವಲಯ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ನಿಟ್ಟಿನಲ್ಲಿ ಈಗಿನಿಂದಲೆ ಪೂರ್ವತಯಾರಿ ಮಾಡಿಕೊಳ್ಳಬೇಕು ಇದಕ್ಕಾಗಿ ಎಲ್ಲ ರೀತಿಯ ಸಹಾಯ ಸಹಕಾರ ನೀಡಲು ಸಿದ್ದ ಎಂದು ಸಚಿವ ರಮೇಶ ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಡಿಪಿಐ ಗಜಾನನ ಮನ್ನೀಕೇರಿ ವಹಿಸಿದರು ವೇದಿಕೆಯಲ್ಲಿ ಜಿ.ಪಂ ಸದಸ್ಯ ಟಿ ಆರ್ ಕಾಗಲ , ನಗರಾದಧ್ಯಕ್ಷ ತಳದಪ್ಪಾ ಅಮ್ಮಣಗಿ , ನಗರಸಭೆ ಸದಸ್ಯರಾದ ಎಸ ಎ ಕೋತವಾಲ , ಪರುಶರಾಮ ಭಗತ ,ಚಂದ್ರು ಇಳಿಗೇರ , ವಲಯ ಅರಣ್ಯ ಅಧಿಕಾರಿ ಎಂ ಕೆ ಪಾತ್ರೋಟ ಸೇರಿದಂತೆ ಇತರರು ಉಪಸ್ಥಿತರಿದ್ದರು
ಕ್ಷೇತ್ರ ಶಿಕ್ಷಾಣಾಧಿಕಾರಿ ಬಳಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು ಕಾರ್ಯಕ್ರಮವನ್ನು ಶಿಕ್ಷಕ ಮಿರ್ಜಿ ನಿರೂಪಿಸಿ ವಂದಿಸಿದರು

Related posts: