RNI NO. KARKAN/2006/27779|Sunday, December 15, 2024
You are here: Home » breaking news » ಘಟಪ್ರಭಾ:ಯುವಕರು ದುಶ್ಟಟಗಳಿಂದ ದೂರವಿರಬೇಕು: ಮಾದರ

ಘಟಪ್ರಭಾ:ಯುವಕರು ದುಶ್ಟಟಗಳಿಂದ ದೂರವಿರಬೇಕು: ಮಾದರ 

ಯುವಕರು ದುಶ್ಟಟಗಳಿಂದ ದೂರವಿರಬೇಕು: ಮಾದರ

ಘಟಪ್ರಭಾ ಜು 16 : ಯುವಕರು ದುಶ್ಟಟಗಳಿಂದ ದೂರವಿರಬೇಕು. ಸಮಾಜದಲ್ಲಿ ಒಳ್ಳೆಯವರಾಗಿ ಇಂತಹ ಸಂಘಟನೆಯಿಂದ ಗ್ರಾಮದ ಹಿತಕ್ಕಾಗಿ ದುಡಿಯಬೇಕೆಂದು ದಲಿತ ಸಂಘರ್ಷ ಸಮೀತಿಯ ಕರ್ನಾಟಕ ಜಿಲ್ಲಾ ಅಧ್ಯಕ್ಷರಾದ ರಮೇಶ ಮಾದರ ಹೇಳಿದರು.
ಅವರು ಸೋಮವಾರದಂದು ಸಮೀಪದ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮೀತಿಯ ಕರ್ನಾಟಕ (ಅಣ್ಣಯ್ಯ ಬಣ) ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಸಂಘಟನೆಯ ಬೆಳವಣಿಗಾಗಿ ಪ್ರಯತ್ನಿಸಬೇಕು ಎಂದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳÀ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಯುವ ಸೇನೆ ಜಿಲ್ಲಾಧ್ಯಕ್ಷ ವೀರಣ್ಣಾ ಸಂಗಮನವರ, ಶಂಕರ ಖೀಲಾರಿ, ರಾಘವೇಂದ್ರ ತಳವಾರ, ಮಹಾದೇವಿ ತಳವಾರ, ಅಶೋಕ ತಳವಾರ, ಪ್ರವೀಣ ಮಾಡಲಗಿ, ಬಸವರಾಜ ಮಾಡಲಗಿ, ಶ್ರವಣ ಶಿಡ್ಲೆಪ್ಪಗೋಳ, ವರದರಾಜ ಗಸ್ತಿ, ಓಂಕಾರ ಮಾಡಲಗಿ, ಸೇರಿದಂತೆ ಅನೇಕ ದಲಿತ ಸಂಘರ್ಷ ಸಮೀತಿಯ ಕಾರ್ಯಕರ್ತರು ಇದ್ದರು.

Related posts: