ಗೋಕಾಕ:ಮಗುವಿಗೆ ತಾಯಿಯ ಹಾಲಿಗಿಂತ ಪೌಷ್ಟಿಕವಾದ ಆಹಾರ ಮತ್ತೊಂದು ಇಲ್ಲ : ಡಾ|| ಪಾರ್ವತಿ ಹೊಸಮನಿ
ಮಗುವಿಗೆ ತಾಯಿಯ ಹಾಲಿಗಿಂತ ಪೌಷ್ಟಿಕವಾದ ಆಹಾರ ಮತ್ತೊಂದು ಇಲ್ಲ : ಡಾ|| ಪಾರ್ವತಿ ಹೊಸಮನಿ
ಗೋಕಾಕ ಜು 20 : ಮಗುವಿಗೆ ತಾಯಿಯ ಹಾಲಿಗಿಂತ ಪೌಷ್ಟಿಕವಾದ ಆಹಾರ ಮತ್ತೊಂದು ಇಲ್ಲವೆಂದು ಡಾ|| ಪಾರ್ವತಿ ಹೊಸಮನಿ ಹೇಳಿದರು.
ಶುಕ್ರವಾರದಂದು ನಗರದ ಗುರುವಾರ ಪೇಟೆಯಲ್ಲಿ ಇಲ್ಲಿಯ ಇನ್ನರ್‍ವ್ಹಿಲ್ ಸಂಸ್ಥೆಯವರು ಹಮ್ಮಿಕೊಂಡ ಸ್ತನಪಾನ ಸಪ್ತಾಹ ಹಾಗೂ ಗರ್ಭಿಣಿ ಸ್ತ್ರೀಯರ ಆರೋಗ್ಯ ತಿಳುವಳಿಕಾ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ತಾಯಿಯ ಹಾಲು ಎಲ್ಲ ಆಹಾರಕ್ಕಿಂತ ಪೌಷ್ಟಿಕವಾಗಿದ್ದು, ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಗರ್ಭಿಣಿ ಸ್ತ್ರೀಯರು ಪೌಷ್ಟಿಕ ಆಹಾರ ಸೇವನೆಯೊಂದಿಗೆ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದರಿಂದ ತಮ್ಮ ಹಾಗೂ ಜನಿಸುವ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಇನ್ನರ್‍ವ್ಹಿಲ್ ಸಂಸ್ಥೆಯ ಅಧ್ಯಕ್ಷೆ ನಮಿತಾ ಅಜರಿ, ಕಾರ್ಯದರ್ಶಿ ಗಿರೀಜಾ ಮುನ್ನೋಳಿಮಠ, ಸದಸ್ಯರಾದ ವಂದನಾ ವರದಾಯಿ, ರಾಜಶ್ರೀ ಕಲ್ಲೋಳಿ, ವಿದ್ಯಾ ಮಗದುಮ್ಮ, ಸವಿತಾ ಈಟಿ, ವಿದ್ಯಾ ಗುಲ್ಲ, ಶಿಲ್ಪಾ ಝಂವರ, ಬಬಿತಾ ಪಂಚನ್ನವರ, ಆಶ್ವಿನಿ ಭರಮಣ್ಣವರ ಸೇರಿದಂತೆ ಅನೇಕರು ಇದ್ದರು.