ಗೋಕಾಕ:ಸೈನಿಕ(ಲದ್ದಿ) ಹುಳುವಿನ ನಿಯಂತ್ರಣದ ಕುರಿತು ಜಾಗೃತಿ ಕಾರ್ಯಕ್ರಮ
ಸೈನಿಕ(ಲದ್ದಿ) ಹುಳುವಿನ ನಿಯಂತ್ರಣದ ಕುರಿತು ಜಾಗೃತಿ ಕಾರ್ಯಕ್ರಮ
ಗೋಕಾಕ ಜು 20 : ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಸೈನಿಕ(ಲದ್ದಿ) ಹುಳುವಿನ ನಿಯಂತ್ರಣದ ಕುರಿತು ತಾಲೂಕಿನ ಮರಡಿ ಶಿವಾಪೂರದ ಗಣೇಶ ಮಂದಿರದಲ್ಲಿ ಕಾರ್ಯಕ್ರಮ ಜರುಗಿತು.
ನಿವೃತ್ತ ಸಹಾಯಕ ಕೃಷಿ ಅಧಿಕಾರಿ ವಿ.ಎಮ್ ಹೊಸುರ ಮಾತನಾಡುತ್ತಾ ಸೈನಿಕ ಹುಳುವಿನ ನಿಯಂತ್ರಣದ ಕುರಿತು ಪ್ರಾಯೋಗಿಕವಾಗಿ ರೈತರಿಗೆ ಮನದಟ್ಟು ಮಾಡಿದರು. ಒಬ್ಬೊಬ್ಬರಾಗಿ ನಿರ್ಮೂಲನೆ ಮಾಡದೆ ಸಾಮೂಹಿಕವಾಗಿ ಈ ಕೀಡೆಯನ್ನು ನಿಯಂತ್ರಣ ಮಾಡಿದರೆ ಇದರ ಹತೋಟಿ ಸಾಧ್ಯವೆಂದು ಹೇಳಿದರಲ್ಲದೇ ಇದರೊಂದಿಗೆ ಕಬ್ಬು, ಹತ್ತಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಬರುವ ಕೀಡೆ ಮತ್ತು ರೋಗಗಳ ಕುರಿತು ರೈತರಿಗೆ ಸಲಹೆ ನೀಡಿದರು.
ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಛಾಯಾ ಪಾಟೀಲ ಅವರು ಬೀಜ ಮೊಳಕೆ ಮತ್ತು ಬೀಜೊಪಚಾರ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪೂರ್ಣಿಮಾ ಓಡ್ರಾಳೆ ಮತ್ತು ರೈತ ಅನುವುಗಾರ ಬಾಳಪ್ಪಾ ನಂದಿ ಸೇರಿದಂತೆ ಅನೇಕರು ಇದ್ದರು.