ಗೋಕಾಕ:ರಮೇಶ ಕ್ರೀಡಾ ಸಂಕೀರ್ಣಕ್ಕೆ ಕ್ರೀಡಾ ಇಲಾಖೆಯ ಉಪನಿರ್ದೇಶಕ ಸಿ.ಬಿ.ರಂಗಯ್ಯ ಬೇಟ್ಟಿ
ರಮೇಶ ಕ್ರೀಡಾ ಸಂಕೀರ್ಣಕ್ಕೆ ಕ್ರೀಡಾ ಇಲಾಖೆಯ ಉಪನಿರ್ದೇಶಕ ಸಿ.ಬಿ.ರಂಗಯ್ಯ ಬೇಟ್ಟಿ
ಗೋಕಾಕ ಜು 21 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಇರುವ ರಮೇಶ ಕ್ರೀಡಾ ಸಂಕೀರ್ಣಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಸಿ.ಬಿ.ರಂಗಯ್ಯ ಬೇಟ್ಟಿ ನೀಡಿ ಪರಿಶೀಲನೆ ನಡೆಸಿದರು
ರಮೇಶ ಕ್ರೀಡಾ ಸಂಕೀರ್ಣ ದುರಸ್ತಿಗೆ ಆಗ್ರಹಿ ನಡೆದ ಪ್ರತಿಭಟನೆ ಎಚ್ಚೆತ್ತುಕೊಂಡ ಇಲಾಖೆ ಉಪ ನಿರ್ದೇಶಕ ಸಿ.ಬಿ ರಂಗಯ್ಯ ಅವರು ಶನಿವಾರದಂದು ಮುಂಜಾನೆ ಸಂಕೀರ್ಣ ಕ್ಕೆ ಬೇಟ್ಟಿ ನೀಡಿ ಇಲ್ಲಿನ ಅವ್ಯವಸ್ಥೆಯನ್ನು ನೋಡಿ ಸಿಬ್ಬಂದಿಗಳಿಗೆ ತರಾಟೆಗೆ ತಗೆದುಕೊಂಡು ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಖಡಕ್ ಎಚ್ಚರಿಕೆ ನೀಡಿದರು . ನಂತರ ಪತ್ರಕರ್ತರಯೊಂದಿಗೆ ಮಾತನಾಡಿದ ಅವರು ಬರುವ ಒಂದು ವಾರದೊಳಗಡೆ ಸಂಕೀರ್ಣದಲ್ಲಿ ಆಗಿರುವ ಅವ್ಯವಸ್ಥೆಯನ್ನು ಸರಿ ಪಡಿಸಿ ಕ್ರೀಡಾ ಪ್ರೇಮಿಗಳಿಗೆ ಜೀಮ್ ಮತ್ತು ಬ್ಯಾಡ್ಮಿಂಟನ್ ಆಡಲು ಅನುವು ಮಾಡಿಕೊಡಲಾಗುವದು , ಮುರಿದಿರುವ ಮೇಲ್ಛಾವಣಿ , ಶೌಚಾಲಯ ಸೇರಿದಂತೆ ಇತರ ಎಲ್ಲ ಕೆಲಸಗಳನ್ನು ಆದಷ್ಟು ಬೇಗನೆ ಮಾಡಿ ಕ್ರೀಡಾ ಸಂಕೀರ್ಣವನ್ನು ದುರಸ್ಥಿ ಗೋಳಿಸಿ ಮುಂದೆ ಹೀಗಾಗದಂತೆ ನೋಡಿಕೋಳ್ಳಲಾಗುವದೆಂದು ಹೇಳಿದ ಸಿ.ಬಿ ರಂಗಯ್ಯ ಅವರು ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಎಂ ಪಿ ಮರನೂರ ಅವರಿಗೆ ಕಡ್ಡಾಯವಾಗಿ ವಾರದಲ್ಲಿ ಮೂರು ದಿನ ಗೋಕಾಕದಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ , ಮುಗುಟ ಪೈಲವಾನ , ಕಿಷ್ಣಾ ಖಾನಪ್ಪನವರ , ಸೇರಿದಂತೆ ಅನೇಕರು ಇದ್ದರು