ಗೋಕಾಕ:ಬೆಳೆಗಳಲ್ಲಿ ವಿವಿಧ ಕೀಟ ಹಾಗೂ ರೋಗಗಳು ಕಂಡು ಬಂದಿದ್ದು, ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚನೆ
ಬೆಳೆಗಳಲ್ಲಿ ವಿವಿಧ ಕೀಟ ಹಾಗೂ ರೋಗಗಳು ಕಂಡು ಬಂದಿದ್ದು, ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚನೆ
ಗೋಕಾಕ ಜು 21 : ಕೃಷಿ ಇಲಾಖೆ, ಕೃಷಿ ವಿಶ್ವ ವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕೈಗೊಂಡ ಪೀಡೆ ಸರ್ವೇಕ್ಷಣೆಯಲ್ಲಿ ಗೋಕಾಕ ತಾಲೂಕಿನ ಅನೇಕ ಕಡೆ ವಿವಿಧ ಕೀಟ ಹಾಗೂ ರೋಗಗಳು ಬೆಳೆಗಳಲ್ಲಿ ಇರುವುದು ಕಂಡು ಬಂದಿದ್ದು, ಅವುಗಳ ನಿಯಂತ್ರಣಕ್ಕಾಗಿ ಕ್ರಮಗಳನ್ನು ಅನುಸರಿಸಬೇಕೆಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎ.ಡಿ.ಸವದತ್ತಿ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ತಾಲೂಕಿನ ರೈತರು ಆಯಾ ಬೆಳೆ ಹಾಗೂ ಪೀಡೆಗಳಿಗಣುಸಾರವಾಗಿ ನಿಯಂತ್ರಣದ ಕ್ರಮಗಳನ್ನು ಅನುಸರಿಸಿ ತಮ್ಮ ಬೆಳೆಗಳನ್ನು ರಕ್ಷಿಸುವಂತೆ ಕೋರಿರುವ ಅವರು, ಗೋವಿನ ಜೋಳಕ್ಕೆ ಬಹುತೇಕ ಕಡೆ ಲದ್ದಿ ಹುಳುವಿನ ಬಾಧೆ ಇದ್ದು ಹತೋಟಿಗಾಗಿ ಒಂದು ಎಕರೆಗೆ 20 ಕೀಲೋ ಗ್ರಾಂ ಅಕ್ಕಿ ಅಥವಾ ಗೋದಿ ತವಡಿನೊಂದಿಗೆ 2 ಕೀಲೋ ಗ್ರಾಂ ಬೆಲ್ಲ, 250 ಮಿ.ಲಿ ಮೋನೋಕ್ರೋಟೋಪಾಸ್ 36 ಎಸ್. ಎಲ್ ಮತು 2-3 ಲೀಟರ್ ನೀರಿನೊಂದಿಗೆ ಬೆರೆಸಿ, 48 ಗಂಟೆಗಳ ಕಾಲ ಗಾಳಿಯಾಡದಂತೆ ಚೀಲದಲ್ಲಿ ಕಳಿಯಲು ಇಡಬೇಕು, ನಂತರ ಸಾಯಂಕಾಲ (5 ಗಂಟೆ) ವೇಳೆ ಕೈಗವಚ ಧರಿಸಿಕೊಂಡು ಬೆಳೆಗಳ ಸುಳಿ ಮತ್ತು ಬೆಳೆಯ ಮೇಲೆ ಎರಚಬೇಕು. ಕಬ್ಬಿನಲ್ಲಿ ಸುಮಾರು ಪ್ರದೇಶದಲ್ಲಿ ಗೊಣ್ಣೆ ಹುಳು ಭಾದೆ ಕಂಡು ಬಂದಿದ್ದು, ಎಕರೆಗೆ 5 ಕೆ.ಜಿ ಮೆಟ್ರಾಜಿಯಂ ಜೈವಿಕ ಶೀಲಿಂದ್ರ ನಾಶಕವನ್ನು ಕಳಿತ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಮಣ್ಣಿಗೆ ಸೇರಿಸಬೇಕು. ಹತ್ತಿಯಲ್ಲಿ ಅಲ್ಲಲ್ಲಿ ರಸ ಹೀರುವ ಕೀಡೆ ಬಂದಿದ್ದು 0.10 ಗ್ರಾಂ ಫಿಪ್ರೊನಿಲ್ 80 ಡಬ್ಲು.ಜಿ ಅಥವಾ 0.20 ಗ್ರಾಂ ಅಸಿಟಾಮಿಪ್ರಿಡ್ 20 ಎಸ್. ಪಿ ಪ್ರತಿ ಲೀಟರನೊಂದಿಗೆ ಬೆರೆಸಿ ಸಿಂಪಡಿಸಬೇಕೆಂದು ತಿಳಿಸಿದ್ದಾರೆ.
ಶೇಂಗಾ ಬೆಳೆಯಲ್ಲಿ ಬೀಜೋಪಚಾರ ಮಾಡದೆ ಬಿತ್ತನೆ ಮಾಡಿದ್ದಲ್ಲಿ , ಶಿಲಿಂದ್ರ ಕತ್ತು ಕೊಳೆರೋಗ ಕಾಣಿಸಿಕೊಂಡಿದ್ದು ಇನ್ನೂ ಮುಂದೆ ಬಿತ್ತನೆ ಮಾಡುವವರು ಪ್ರತಿ ಕಿ.ಗ್ರಾಂ ಬೀಜಕ್ಕೆ 3 ಗ್ರಾಂ ಕಾರ್ಬಾಕ್ಸಿನ್ 75 ಡಬ್ಲು.ಪಿ ಅಥವಾ 1 ಗ್ರಾಂ ಟೆಬ್ಯುಕೊನಜೊಲ್ 2 % ಡಿ.ಎಸ್ ನಿಂದ ಬೀಜೋಪಚಾರ ಮಾಡಿ ಬಿತ್ತಬೇಕು. ರೋಗವು ಹೆಚ್ಚು ಕಂಡು ಬಂದಲ್ಲಿ ಸಜ್ಜೆ ಜೋಳ ಅಥವಾ ಮೇಕ್ಕೆ ಜೋಳ ದಿಂದ ಪರಿವರ್ತನೆ ಒಳಪಡಿಸಬೇಕು. ಸೋಯಾ ಅವರೆಯಲ್ಲಿ ಕಂಡು ಬರುವ ಕಾಯಿ ಕೊರೆಯುವ ಹುಳುವಿನ ನಿರ್ವಹಣೆಗೆ ಬೆಳೆಯು 55 ರಿಂದ 60 ದಿನಗಳ ಅವಧಿಯಲ್ಲಿ 2 ಮೀ,ಲಿ ಕ್ವೀನಾಲಫಾಸ್ 25 ಇಸಿ 0.25 ಮೀಲಿ ಸ್ಪೈನೋಸ್ಯಾಡ್ 45 ಎಸ್ .ಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವಂತೆ ಸಹಾಯಕ ಕೃಷಿ ನಿರ್ದೇಶಕರು ಪ್ರಕಟನೆಯಲ್ಲಿ ಕೋರಿದ್ದಾರೆ.