RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಆರೋಗ್ಯ ಕಾಪಾಡುವಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ : ಎಸ್ ಐ ಭಾಗೋಜಿ

ಗೋಕಾಕ:ಆರೋಗ್ಯ ಕಾಪಾಡುವಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ : ಎಸ್ ಐ ಭಾಗೋಜಿ 

ಆರೋಗ್ಯ ಕಾಪಾಡುವಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ : ಎಸ್ ಐ ಭಾಗೋಜಿ

ಗೋಕಾಕ ಜು 27 : ಕ್ರೀಡೆ ಹಾಗೂ ಸಾಂಸ್ಕಂತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿ ಸಾಧಕರಾಗ ಬಹುದೆಂದು ವಡೇರಹಟ್ಟಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್ ಐ ಭಾಗೋಜಿ ಹೇಳಿದರು.
ಶುಕ್ರವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಪೂರ್ವ ಮಹಾವಿದ್ಯಾಲಯದ ಕ್ರೀಡಾ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆರೋಗ್ಯ ಕಾಪಾಡುವಲ್ಲಿ ಪೌಷ್ಠಿಕ ಆಹಾರ, ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದರಿಂದ ಮನಸ್ಸು ಉಲ್ಲಾಸಗೊಂಡು ಮಾನಸಿಕವಾಗಿ ಸದೃಢರಾಗುತ್ತಿರಿ ಎಂದರು.
ಆರೋಗ್ಯ ಹಾಗೂ ಒಳ್ಳೆಯ ಮನಸ್ಸು ಮತ್ತು ಪ್ರಯತ್ನದಿಂದ ಉತ್ತಮ ಕನಸ್ಸುಗಳೊಂದಿಗೆ ವಿದ್ಯಾರ್ಥಿಗಳು ಪ್ರಯತ್ನಶೀಲರಾಗಿ ಉತ್ತಮರಲ್ಲಿ ಉತ್ತಮರಾಗುವಂತೆ ಕರೆ ನೀಡಿದರು.
ವೇದಿಕೆಯ ಮೇಲೆ ಆಡಳಿತಾಧಿಕಾರಿ ಎಸ್ ಜಿ ಬೆಟಗಾರ, ಪ್ರಾಚಾರ್ಯ ಎನ್ ಕೆ ಮಿರಾಶಿ, ಉಪನ್ಯಾಸಕರಾದ ಎಸ್ ಎಸ್ ನಾಯಕ, ಜೆ ಎಲ್ ಜಾಧವ, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಿಯಾಂಕಾ ಕಾಂಬಳೆ, ರಾಮಣ್ಣ ತಿಗಡಿ ಇದ್ದರು.
ವಿದ್ಯಾರ್ಥಿನಿ ಮಹಾನಂದಾ ಅಂಕಲಗಿ ಸ್ವಾಗತಿಸಿದರು. ತಸ್ಕಿನ್ ಅಖಾನಿ ನಿರೂಪಿಸಿದರು. ಮೇಘಾ ಹೊನಕುಪ್ಪಿ ವಂದಿಸಿದರು.

Related posts: