RNI NO. KARKAN/2006/27779|Friday, November 22, 2024
You are here: Home » breaking news » ಬೈಲಹೊಂಗಲ:ನೇಗಿನಹಾಳದಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ

ಬೈಲಹೊಂಗಲ:ನೇಗಿನಹಾಳದಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ 

ನೇಗಿನಹಾಳದಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ

ನೇಗಿನಹಾಳ ಜು 27 : 12ನೆಯ ಶತಮಾನದಲ್ಲಿ ಯಾರು ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಆದ್ಯಾತ್ಮಿಕವಾಗಿ ಯಾರು ಈ ಸಮಾಜದಲ್ಲಿ ತುಳಿಥಕ್ಕೆ ಒಳಗಾಗಿದ್ದರು, ಯಾರು ಹಿಂದುಳಿದದ್ದರು ಅವರ ಸಮಗ್ರವಾದ ಸಮಾನತೆಯ ನೀಡಿ ಬದಲಾಣೆ ತರುವ ನಿಟ್ಟಿನಲ್ಲಿ ಗುರು ಬಸವಣ್ಣನವರ ಸಮಾನತೆಯಿಂದ ಸಾದ್ಯವಾಯಿತ್ತು ಎಂದು ನೇಗಿನಹಾಳ ಘಟಕದ ರಾಷ್ಟ್ರೀಯ ಬಸವ ಸೇನಾ ಅದ್ಯಕ್ಷ ನಾಗರಾಜ ನಾಗನೂರ ಹೇಳಿದರು.

ಗ್ರಾಮದ ಬಸವೇಶ್ವರ ಸರ್ಕಲ್‍ನಲ್ಲಿ ರಾಷ್ಟ್ರೀಯ ಬಸವ ಸೇನಾ ಹಾಗೂ ಲಿಂಗಾಯತ ಅಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ನಿಜಸುಖಿ ಹಡಪದ ಅಪ್ಪಣ್ಣನವರ ಹಾಗೂ ಹಡಪದ ಲಿಂಗಮ್ಮನವರ ಜಯಂತಿಯೋತ್ಸವದಲ್ಲಿ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಬಸವಣ್ಣನವರ ಸಮಾನತೆಯ ತತ್ವಗಳಿಂದ ಹಡಪದ ಅಪ್ಪಣ್ಣನವರು, ಸಮಗಾರ ಹರಳಯ್ಯನವರು, ಮದುವರಸರು, ಮಡಿವಾಳ ಮಾಚೀದೇವರು, ಅಂಬಿಗರ ಚೌಡಯ್ಯನವರು ಇಷ್ಠಲಿಂಗಧಾರಿಗಳಾಗಿ ಬದುಕಿದರು. ಲಿಂಗಾಯತ ಅಭಿವೃದ್ಧಿ ಸಂಸ್ಥೆಯ ಮುಖಂಡ ಬಸವರಾಜ ಭೀಮನವರ ಮಾತನಾಡಿ ಗುರುವಿನ ತತ್ವಸಿದ್ಧಾಂತಗಳು ಜಗತ್ತಿನಲ್ಲಿ ಅನುಷ್ಠಾನಗೊಂಡಿದ್ದೇ ಆದರೆ ಜಾತಿ ವ್ಯವಸ್ಥೆ ತೊರೆದುಹೋಗಿ ಪ್ರತಿಯೊಬ್ಬರು ಕಾಯಕ ಜೀವಿಗಳಾಗಿ ಬದಕುವುದರಿಂದ ಬಡತನ, ಅಸ್ಪುಷೃತೆ, ದ್ವೇಶ ಅಸೂಹೆಗಳು ಸಂಪೂರ್ಣ ಮರೆಮಾಚುತ್ತವೆ ಎಂದರು. ರಾಷ್ಟ್ರೀಯ ಬಸವ ಸೇನಾದ ಮುಖಂಡರಾದ ಪ್ರಸಾದ ಕುಂಕೂರ, ನಾಗರಾಜ ನರಸಣ್ಣವರ, ಬಸವರಾಜ ಹಡಪದ, ಸತೀಶ ತಳವಾರ, ಮಹೇಶ ಇಂಚಲ, ಸುನೀಲ ಬಡಿಗೇರ, ಮಹಾದೇವ ಮುದ್ದೆನ್ನವರ, ಸೋಮನಿಂಗ ಭೂಟಾಳಿ, ಬಸವರಾಜ ಹತ್ತಿ, ಬಸವರಾಜ ಭೂಟಾಳಿ, ಸಾಗರ ಅಂಗಡಿ, ಪ್ರಕಾಶ ಮೂಲಿಮನಿ, ಚೇತನ ತಿಗಡಿ, ಶಿವಾನಂದ ತೋಟಗಿ, ಈರಪ್ಪ ಜವಾರಿ, ಸಿದ್ದಾರೂಡ ತಿಗಡಿ ಮತ್ತಿತ್ತರರು ಉಪಸ್ಥಿತರಿದ್ದರು.

Related posts: