ಘಟಪ್ರಭಾ:ಸದೃಡ ಶರೀರಕ್ಕಾಗಿ ಕ್ರೀಡೆ ಅವಶ್ಯಕ : ಎ.ಸಿ. ಗಂಗಾದರ
ಸದೃಡ ಶರೀರಕ್ಕಾಗಿ ಕ್ರೀಡೆ ಅವಶ್ಯಕ : ಎ.ಸಿ. ಗಂಗಾದರ
ಘಟಪ್ರಭಾ ಜು 27 : ಸದೃಡ ಶರೀರಕ್ಕಾಗಿ ಕ್ರೀಡೆ ಅವಶ್ಯಕವಾಗಿದ್ದು, ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಕೂಟಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯವಂತರಾಗಿರಬೇಕೆಂದು ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಗಂಗಾದರ ಹೇಳಿದರು.
ಅವರು ಶುಕ್ರವಾರದಂದು ಸ್ಥಳೀಯ ಓರಿಯಂಟಲ್ ಆಂಗ್ಲ ಮಾದ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಘಟಪ್ರಭಾ ವಲಯ ಮಟ್ಟದ ಕ್ರೀಡಾಕೂಟದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು. ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಆರೋಗ್ಯದ ಜೊತೆಗೆ ಬುದ್ದಿಶಕ್ತಿ ಮತ್ತು ಏಕಾಗ್ರತೆ ಬೆಳೆಯುತ್ತದೆ ಎಂದು ಹೇಳಿದರು.
ಘಟಪ್ರಭಾ, ಶಿಂದಿಕುರಬೇಟ, ದಂಡಾಪೂರ, ದುರದುಂಡಿ, ಪಾಮಲದಿನ್ನಿ, ರಾಜಾಪೂರ, ಹಾಗೂ ಅರಭಾವಿಮಠ ಗ್ರಾಮಗಳ 11 ಪ್ರೌಡ ಶಾಲೆಗಳ ಒಟ್ಟು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಡಿ.ಎಮ್.ದಳವಾಯಿ, ಗೌಸಖಾನ ಕಿತ್ತೂರಕರ, ಪ್ರಕಾಶ ಡಾಂಗೆ, ದೈಹಿಕ ಶಿಕ್ಷಣಾಧಿಕಾರಿ ನಾಡಗೌಡ, ದೀಲಿಪ ಕಲಾರಕೊಪ್ಪ, ಪ್ರಧಾನ ಗುರುಮಾತೆ ನಝೀಮಾ ಕೊಣ್ಣೂರ ಸೇರಿದಂತೆ ಅನೇಕರು ಇದ್ದರು.
ಸ್ಟಫಿ ಸೂಸಾಯಿ ನಿರೂಪಿಸಿದರು. ಸಂಸ್ಥೆಯ ಚೇರಮನ್ ವಿನ್ಸಂಟ್ ಸೂಸಾಯಿ ವಂದಿಸಿದರು.