RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜ್ಯ ಯೋಜನೆಯಡಿ ಅರ್ಜಿ ಆಹ್ವಾನ

ಗೋಕಾಕ:ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜ್ಯ ಯೋಜನೆಯಡಿ ಅರ್ಜಿ ಆಹ್ವಾನ 

ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜ್ಯ ಯೋಜನೆಯಡಿ ಅರ್ಜಿ ಆಹ್ವಾನ

ಗೋಕಾಕ ಜು 28 : ನಗರ ಪ್ರದೇಶದ ಬಡ ಫಲಾನುಭವಿಗಳಿಂದ ಸನ್ 2018-19ನೇ ಸಾಲಿಗೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜ್ಯ ಯೋಜನೆಯಡಿ ಸ್ವಯಂ ಉದ್ಯೋಗದ ಸಲುವಾಗಿ ಸಾಲ ಸೌಲಭ್ಯ ಕಲ್ಪಿಸಿಕೊಡಲು ನಗರ ಸಭೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಮಾಡಬಯಸುವ ಫಲಾನುಭವಿಗಳು ದಿ. 14 ರ ಸಾಯಂಕಾಲ 4 ಗಂಟೆಯೊಳಗಾಗಿ ದ್ವಿ-ಪ್ರತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಫಲಾನುಭವಿಗಳು ಗೋಕಾಕ ರಹವಾಸಿಗಳಾಗಿದ್ದು, 18 ರಿಂದ 40 ವರ್ಷ ವಯೋಮಿತಿಯೊಳಗಿರಬೇಕು. ಅರ್ಜಿದಾರರು ಮಾಡಬಯಸುವ ಉದ್ಯೋಗದ ಯೋಜನಾ ವರದಿಯೊಂದಿಗೆ, ಕೋಟೇಶನ್, ಜಾತಿ/ಆದಾಯ ಪ್ರಮಾಣ ಪತ್ರ, ಶಾಲಾ ದಾಖಲಾತಿ ಸಲ್ಲಿಸಬೇಕು. ಸದರ ಯೋಜನೆಯಡಿ ರೂ. 2 ಲಕ್ಷ ರೂ ವರೆಗೆ ಸಾಲ ಸೌಲಭ್ಯವಿದ್ದು, ಶೇ.7ಕ್ಕಿಂತ ಮೇಲ್ಪಟ್ಟ ಬಡ್ಡಿ ಸಹಾಯಧನ ಸೌಲಭ್ಯವಿರುತ್ತದೆ.
ಕನಿಷ್ಠ 5 ಜನ ಬಡ ಮಹಿಳೆಯರು ಸೇರಿ ಅಥವಾ ಸ್ವ-ಸಹಾಯ ಸಂಘದ ಸದಸ್ಯರು ಗುಂಪು ಉದ್ಯೋಗ ಪ್ರಾರಂಭಿಸಲು ಮೇಲ್ಕಂಡ ದಾಖಲಾತಿಗಳಂತೆ ಅರ್ಜಿ ಸಲ್ಲಿಸಬಹುದಾಗಿದೆ. ಸದರ ಯೋಜನೆಯಡಿ ರೂ. 5 ರಿಂದ 10 ಲಕ್ಷವರೆಗೆ ಸಾಲ ಸೌಲಭ್ಯ ಪಡೆಯಬಹುದಾಗಿದ್ದು, ಶೇ. 7ಕ್ಕಿಂತ ಮೇಲ್ಪಟ್ಟ ಸಹಾಯಧನ ಸೌಲಭ್ಯವಿರುತ್ತದೆ.
ಯೋಜನೆಯಡಿ ರಚಿಸಲ್ಪಟ್ಟ ಸ್ವಸಹಾಯ ಗುಂಪುಗಳು ಬ್ಯಾಂಕನಿಂದ ಸಾಲ ಸೌಲಭ್ಯ ಪಡೆಯುವ ಗುಂಪುಗಳಿಗೆ ಶೇ. 7ಕ್ಕಿಂತ ಮೇಲ್ಪಟ್ಟ ಸಹಾಯಧನ ಸೌಲಭ್ಯವಿರುತ್ತದೆ. ಹಾಗೂ ಸಾಲವನ್ನು ಸಕಾಲಕ್ಕೆ ಮರುಪಾವತಿಸುವ ಗುಂಪುಗಳಿಗೆ ಹೆಚ್ಚುವರಿಯಾಗಿ ಶೇ.3ರಷ್ಟು ಬಡ್ಡಿ ಸಹಾಯಧನ ನೀಡಲಾಗುವದು.
ತರಬೇತಿ ಉಪಘಟಕದಡಿ ನಿರುದ್ಯೋಗಿ ಯುವಕ/ಯುವತಿಯರು ವಿವಿಧ ವೃತ್ತಿ ಕೌಶಲ್ಯ ಅಭಿವೃದ್ಧಿ ತರಬೇತಿ ಪಡೆಯಬಹುದಾಗಿದ್ದು, ಸದರೀ ತರಬೇತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ತರಬೇತಿ ನಂತರ ಕೈಗಾರಿಕೆಗಳಲ್ಲಿ ಹಾಗೂ ಸೇವಾ ವಲಯಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸಿಕೊಡಲಾಗುವದು. ಸದರೀ ಘಟಕದಡಿ ಡ್ರೈವಿಂಗ, ಹೊಲಿಗೆ ತರಬೇತಿ, ಮೊಬೈಲ ರಿಪೇರಿ, ಕ್ಯಾಂಡಲ/ಫಿನಾಯಿಲ್ ತಯಾರಿಕೆ, ಕಂಪ್ಯೂಟರ ಸಂಭಂದಿತ ತರಬೇತಿ ಕಾರ್ಯಕ್ರಮಗಳಿದ್ದು ಆಸಕ್ತಿವುಳ್ಳವರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪೌರಾಯುಕ್ತ ಎಮ್.ಎಚ್.ಅತ್ತಾರ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: