RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಕ್ರೀಡಾ ಮನೋಭಾವನೆ ಬೆಳಸಿಕೊಳ್ಳಿ ವಿದ್ಯಾರ್ಥಿಗಳಿಗೆ ಶಿವಲಿಂಗಪ್ಪ ಬಳಿಗಾರ ಸಲಹೆ

ಗೋಕಾಕ:ಕ್ರೀಡಾ ಮನೋಭಾವನೆ ಬೆಳಸಿಕೊಳ್ಳಿ ವಿದ್ಯಾರ್ಥಿಗಳಿಗೆ ಶಿವಲಿಂಗಪ್ಪ ಬಳಿಗಾರ ಸಲಹೆ 

ಕ್ರೀಡಾ ಮನೋಭಾವನೆ ಬೆಳಸಿಕೊಳ್ಳಿ ವಿದ್ಯಾರ್ಥಿಗಳಿಗೆ ಶಿವಲಿಂಗಪ್ಪ ಬಳಿಗಾರ ಸಲಹೆ

ಗೋಕಾಕ ಜು 28 : ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆ ಬೆಳಸಿಕೊಳ್ಳಬೇಕೆಂದು ಗ್ರಾ.ಪಂ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ ಹೇಳಿದರು.
ಅವರು ಶನಿವಾರ ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಜರುಗಿದ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಬೇಕು. ಅಲ್ಲದೇ ಪಠ್ಯದೊಂದಿಗೆ ಪಠ್ಯತೇರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾಗೋಜಿಕೊಪ್ಪದ ಪೂಜ್ಯ ಶ್ರೀ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರು ವಹಿಸಿ ಆಶೀರ್ವಚನ ನೀಡಿದರು. ವೇದಿಕೆ ಮೇಲೆ ಎಸ್ ಡಿಎಂಸಿ ಅಧ್ಯಕ್ಷ ಎಸ್.ಆರ್.ಹೊಸಟ್ಟಿ,ಆರ್.ಎಸ್.ಅಳಗುಂಡಿ ಸೇರಿದಂತೆ ಇತರರು ಇದ್ದರು. ಮೆಳವಂಕಿ ಹಾಗೂ ಬೆಟಗೇರಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಎಂ.ಎಲ್.ಹೊಸಟ್ಟಿ ಸ್ವಾಗತಿಸಿದರು.ಎಸ್.ಬಿ.ಪಾಟೀಲ ನಿರೂಪಿಸಿದರು.

Related posts: