ಗೋಕಾಕ:ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ
ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ
ಗೋಕಾಕ ಜು 31 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರ ತಾಲೂಕಾ ಮಟ್ಟದ ಸಭೆಯು ಸೋಮವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಜರುಗಿತು.
ಈ ಸಭೆಯಲ್ಲಿ ಅಗಸ್ಟ್ ತಿಂಗಳಲ್ಲಿ ಮೂಡಲಗಿ ತಾಲೂಕಾ ಮಟ್ಟದ ರೈತ ಸಮಾವೇಶವನ್ನು ನಡೆಸುವ ಕುರಿತು ಚರ್ಚಿಸಲಾಯಿತು. ತಾಲೂಕಿನ ರೈತರ ಸಮಸ್ಯೆಗಳಾದ ನೀರಾವರಿ ಪಡಿತರ ಚೀಟಿ, ಪಹಣಿ ಪತ್ರ ವಿತರಣೆಯಲ್ಲಿಯಾಗುತ್ತಿರುವ ವಿಳಂಬ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಸಭೆಯ ನಂತರ ತಹಶೀಲದಾರ ಅವರಿಗೆ ಮನವಿ ಅರ್ಪಿಸಿ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಲಾಯಿತ್ತಲ್ಲದೇ ಪಹಿಣಿ ಪತ್ರಗಳನ್ನು ನೀಡಲು ಬೆಳೆ ಪ್ರಮಾಣ ಪತ್ರಗಳನ್ನು ನೀಡುವಂತೆ ಇಲಾಖೆಯ ಆದೇಶವನ್ನು ಪ್ರಶ್ನಿಸಿದ ರೈತರು ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳಿಂದ ರೈತರ ಜಮೀನುಗಳಲ್ಲಿ ಬೆಳೆದ ಬೆಳೆಗಳ ಬಗ್ಗೆ ಸರ್ವೆಯನ್ನು ನಡೆಸಿ ಬೆಳೆಯ ವಿವರವನ್ನು ದಾಖಲಿಸಬೇಕು. ತಕ್ಷಣದಿಂದಲೇ ರೈತರಿಗೆ ಪಹಣಿ ಪತ್ರಗಳನ್ನು ವಿತರಿಸಬೇಕೆಂದು ರೈತರು ತಹಶೀಲದಾರ ಅವರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಭೀಮಶಿ ಗದಾಡಿ, ಗಣಪತಿ ಈಳಿಗೇರ, ಮುತ್ತೆಪ್ಪ ಬಾಗನ್ನವರ, ಶಿದ್ಲಿಂಗಪ್ಪ ಪೂಜೇರಿ, ಎಸ್.ಎಮ್.ಬಿಳ್ಳೂರ, ಲಕ್ಷ್ಮಣ ತೋಳಮರಡಿ, ಪ್ರಕಾಶ ಹಾಲನ್ನವರ, ಮಹಾಂತೇಶ ರಡೆರಟ್ಟಿ, ಮಲ್ಲಿಕಾರ್ಜುನ ಈಳಿಗೇರ, ಜಗದೀಶ ಅಗಸರ, ವಿಠ್ಠಲ ಲಂಗೋಟಿ, ಸಿದ್ದಾರೂಢ ಮುಗಳಖೋಡ, ಮಲ್ಲಪ್ಪ ಗೌಡರ, ಶಂಕರ ಮದಿಹಳ್ಳಿ, ಶಂಕರ ಗಡ್ಡಿ, ಬಸವರಾಜ ವ್ಯಾಪಾರಿ, ವೆಂಕಪ್ಪ ಕೊಪ್ಪದ, ಪರಸಪ್ಪ ಗದಾಡಿ, ಸಿದ್ದಪ್ಪ ತಪಸಿ ಸೇರಿದಂತೆ ಅನೇಕರು ಇದ್ದರು.