RNI NO. KARKAN/2006/27779|Friday, October 18, 2024
You are here: Home » breaking news » ಮೂಡಲಗಿ:ಸಾಲಗಳ ಮೇಲೆ ಶೇ.1 ರಷ್ಟು ಬಡ್ಡಿ ಕಡಿತ ಮಾಡಲಾಗಿದೆ : ಮಲ್ಲಪ್ಪ ಗು.ಗಾಣಿಗೇರ

ಮೂಡಲಗಿ:ಸಾಲಗಳ ಮೇಲೆ ಶೇ.1 ರಷ್ಟು ಬಡ್ಡಿ ಕಡಿತ ಮಾಡಲಾಗಿದೆ : ಮಲ್ಲಪ್ಪ ಗು.ಗಾಣಿಗೇರ 

ಸಾಲಗಳ ಮೇಲೆ ಶೇ.1 ರಷ್ಟು ಬಡ್ಡಿ ಕಡಿತ ಮಾಡಲಾಗಿದೆ : ಮಲ್ಲಪ್ಪ ಗು.ಗಾಣಿಗೇರ

ಮೂಡಲಗಿ ಅ 6 : ಅಕ್ಟೋಬರ 22 ರಂದು ಹಮ್ಮಿಕೊಂಡ ಮಹಾಲಕ್ಷ್ಮೀ ಸೊಸಾಯಿಟಿ ಬೇಳ್ಳಿ ಹಬ್ಬದ ನಿಮಿತ್ಯವಾಗಿ ಎಲ್ಲ ಸಾಲಗಳ ಮೇಲೆ ಶೇ.1 ರಷ್ಟು ಬಡ್ಡಿ ಕಡಿತ ಮಾಡಲಾಗಿದೆ ಎಂದು ಸೊಸಾಯಿಟಿ ಉಪಾಧ್ಯಕ್ಷ ಮಲ್ಲಪ್ಪ ಗು.ಗಾಣಿಗೇರ ಹೇಳಿದರು.
ಅವರು ಸೋಮವಾರ ಇಲ್ಲಿಯ ಮಹಾಲಕ್ಷ್ಮೀ ಅರ್ಬನ್ ಸೊಸಾಯಿಟಿ 26ನೇ ವಾರ್ಷಿಕ ಸರ್ವಸಾಧಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೊಸಾಯಿಟಿಯ ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ ಸುಮಾರು 58 ಕೋಟಿ ರೂ ದುಡಿಯುವ ಹೊಂದಿ, 1.12 ಕೋಟಿ ಲಾಭಗಳಿಸಿ ಸೊಸಾಯಿಟಿಯು ಪ್ರಗತಿ ಪಥದತ ಸಾಗುತ್ತಿದೆ ಎಂದರು.
ಸಾವಯವ ಕೃಷಿಕರಾದ ಸಾಲಹಳ್ಳಿಯ ಶಾಖೆ ಸಲಹಾ ಸಮೀತಿ ಅಧ್ಯಕ್ಷ ಎಸ್.ಎನ್.ಹೊಸಗೌಡ್ರ ಸಾಸಾಯಿಟಿಯಿಂದ ಸತ್ಕಾರ ಸ್ವೀಕರಿ ಮಾತನಾಡಿ ಮಾತನಾಡಿ, ರೈತರು ರಾಸಾಯನಿಕ ಗೋಬ್ಬರವನ್ನು ಬಳಸದೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಭೂಮಿ ತಾಯಿನ್ನು ವಿಷಕಾರಿ ಮಾಡದೇ ನಾವು ವಿಷಮುಕ್ತ ಆಹಾರ ಸೇವೆಸಲ್ಲು ಪ್ರಯತ್ನಿಸಬೇಕೆಂದರು. ತಮ್ಮ ಸಾವಯವ ಕೃಷಿಯ ಅನುಭವನ್ನು ಹಂಚಿಕೊಂಡರು.
ಕಟಕೋಳ ಶಾಖೆ ಉಪಾಧ್ಯಕ್ಷ ಬಿ.ಬಿ.ಹಂಜಿ, ರಾಮದುರ್ಗ ಶಾಖೆ ಸದಸ್ಯ ಎಸ್.ವ್ಹಿ.ಹೊನ್ನುಂಗುರ, ಮುನ್ನವಳ್ಳಿ ಶಾಖೆಯ ಅಧ್ಯಕ್ಷ ಪ್ರೊ.ಎಮ್.ಎಮ್.ಹಣಸಿ, ಎಚ್.ಎಸ್.ಪಾರ್ಶಿ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಸ್ಥಳೀಯ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಮಾತನಾಡಿ, ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ, ಪ್ರಾಣಿಕತೆಯ ಸಿಬ್ಬಂದಿ, ಅವಧಿಗೆ ಮರು ಪಾವತಿಸುವ ಸಾಲಗಾರರಿದ್ದಲ್ಲಿ ಹಣಕಾಸಿನ ಸಂಸ್ಥೆಗಳು ಅಭಿವೃದ್ಧಿ ಹೊಂದುವದರಲ್ಲಿ ಸಂಸಯವಿಲ್ಲ ಎಂದರು.
ಸೊಸಾಯಿಟಿ ನಿರ್ಧೇಶಕ ಡಾ: ಪ್ರಕಾಶ ನಿಡಗುಂದಿ, ಎಚ್.ಬಿ.ಎಮ್.ದೇಸಾಯಿ, ಸುಭಾಸ ಪುಟ್ಟಿ, ಎನ್.ಎಸ್.ಬಡಿಗೇರ ಅವರು ಸೊಸಾಯಟಿ ವರದಿ ವಾಚನ, ಅಡ್ವಾಪತ್ರಿಕೆ, ಲಾಭ ಹಾನಿ ಪತ್ರಿಕೆ ಮಂಡಿಸಿದರು. ಸೊಸಾಯಿಟಿ ಪ್ರಧಾನ ವ್ಯವಸ್ಥಾಪಕಸಿ.ಎಸ್.ಬಗನಾಳ ಸ್ವಾಗತಿಸಿದರು, ಅರ್ಜುನ ಗಾಣಿಗೇರ ನಿರೂಪಿಸಿದರು. ವಿಜಯ ನಿಡಗುಂದಿ ವಂದಿಸಿದರು.

Related posts: