ಗೋಕಾಕ:ಶ್ರೀ ಸಂತ ಶಿರೋಮಣಿ ನಾಮದೇವ ಮಹಾರಾಜರ ಪುಣ್ಯತಿಥಿ ಹಾಗೂ ಸೋಹಳಾ ಕಾರ್ಯಕ್ರಮ
ಶ್ರೀ ಸಂತ ಶಿರೋಮಣಿ ನಾಮದೇವ ಮಹಾರಾಜರ ಪುಣ್ಯತಿಥಿ ಹಾಗೂ ಸೋಹಳಾ ಕಾರ್ಯಕ್ರಮ
ಗೋಕಾಕ ಅ 7 : ನಗರದ ಗುರುವಾರ ಪೇಠೆಯ ಉಪ್ಪಾರ ಗಲ್ಲಿಯಲ್ಲಿರುವ ಶ್ರೀ ನಾಮದೇವ ಶಿಂಪಿ ಸಮಾಜ ಹರಿಮಂದಿರದಲ್ಲಿ ಶ್ರೀ ಸಂತ ಶಿರೋಮಣಿ ನಾಮದೇವ ಮಹಾರಾಜರ ಪುಣ್ಯತಿಥಿ 668ನೇ ಸಂಜೀವಿನಿ ಸೋಹಳಾ ಕಾರ್ಯಕ್ರಮವು ದಿ.9 ಮತ್ತು 10ರಂದು ಎರಡು ದಿನಗಳ ವರೆಗೆ ಜರುಗಲಿದೆ.
ದಿ.9ರಂದು ಸಂಜೆ 4 ಗಂಟೆಗೆ ಶ್ರೀ ನಾಮದೇವ ಶಿಂಪಿ ಸಮಾಜ ಮಹಿಳಾ ಮಂಡಳದವರಿಂದ ಅರಿಸಿಣ ಕುಂಕುಮ ಕಾರ್ಯಕ್ರಮ ಹಾಗೂ ಭಜನಾ ಕಾರ್ಯಕ್ರಮ,ರಾತ್ರಿ 7 ಗಂಟೆಯಿಂದ ಚಿಕ್ಕಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ.
ದಿ.10ರಂದು ಬೆಳಿಗ್ಗೆ ಕಾಕಡಾರತಿ ನಂತರ ಅಭಿಷೇಕ,ಹರಿಕಿರ್ತನೆ ನಡೆಯಲಿದ್ದು ಶ್ರೀ ಸಂತ ಶಿರೋಮಣಿ ನಾಮದೇವ ಮಹಾರಾಜರ ಪ್ರತಿಮೆಗೆ ಗುಲಾಲ,ಪುಷ್ಪಾರ್ಚನೆ ಹಾಗೂ ಆರತಿ ಜರುಗಲಿದೆ.
ಪುಂಡಲೀಕ ಮನ್ನಾಪೂರೆ ಮಹಾರಾಜರು ಇವರಿಂದ ಕಿರ್ತನೆ ಜರುಗಲಿದೆ.ಬಸವರಾಜ ಸ್ವಾಮಿಗಳು,ಗುರು ಮಹಾದೇವಾಶ್ರಮ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.ಮಧ್ಯಾಹ್ನ ಮಹಾಪ್ರಸಾದ ಜರುಗಲಿದೆ ಎಂದು ಶ್ರೀ ನಾಮದೇವ ಶಿಂಪಿ ಸಮಾಜ ಹಾಗೂ ಯುವಕ ಮಂಡಳದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.