ಮೂಡಲಗಿ:ಮೂಡಲಗಿಯಲ್ಲಿ ಸರಣಿ ಕಳ್ಳತನ, ಭಯಗೊಂಡ ಜನತೆ
ಮೂಡಲಗಿಯಲ್ಲಿ ಸರಣಿ ಕಳ್ಳತನ, ಭಯಗೊಂಡ ಜನತೆ
ಮೂಡಲಗಿ ಅ 9 : ಪಟ್ಟಣದ ಲಕ್ಷ್ಮಿನಗರದಲ್ಲಿ ಗುರುವಾರ ಮುಂಜಾನೆ ಖದೀಮರು ವಿವಿಧೆಡೆ ಸರಣಿ ಕಳ್ಳತನ ನಡೆಸಿದ ಪ್ರಕರಣ ಮೂಡಲಗಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.
ಪಟ್ಟಣದ ಲಕ್ಷ್ಮಿನಗರದ ಗುಡಗುಡಿ ಬಿಲ್ಡಿಂಗ್‍ನಲ್ಲಿರುವ ಶ್ರೀ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಕಛೇರಿ, ನಯನ ಬ್ಯೂಟಿ ಪಾರ್ಲರ್, ಬಾಲಾಜಿ ಕ್ಲಿನಿಕ್ ಹಾಗೂ ಇಲ್ಲಿಗೆ ಸ್ವಲ್ಪ ದೂರದಲ್ಲಿನ ಒಂದು ಮನೆಯ ಬೀಗ ಒಡೆದು ಕಳ್ಳತನ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ವೆಂಕಟೇಶ ಮುರನಾಳ, ಪಿಎಸ್‍ಐ ಶರಣೇಶ ಜಾಲಿಹಾಳ ಮತ್ತು ಬೆಳಗಾವಿಯಿಂದ ಆಗಮಿಸಿದ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರೀಶಿಲಿಸಿದರು.
ಸಾರ್ವಜನಿಕರ ಆಗ್ರಹ: ಪಟ್ಟಣದಲ್ಲಿ ಪದೇ ಪದೇ ಈ ರೀತಿಯ ಪ್ರಕರಣಗಳು ಜರುಗುತ್ತಿದ್ದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ, ಹಲವು ಬಾರಿ ಕಳ್ಳತನ ಪ್ರಕರಣ ನಡೆದಿದ್ದರು ಇವರೆಗೂ ಖದೀಮರನ್ನು ಬಂಧಿಸದೇ ಇರುವದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ರಾತ್ರಿ ಗಸ್ತು ನಡೆಸಿ ಸಾರ್ವಜನಿಕರಲ್ಲಿ ಮೂಡಿರುವ ಭಯದ ವಾತಾವರಣ ದೂರಗೊಳಿಸಬೇಕೆನ್ನುವದು ಸಾರ್ವಜನಿಕರ ಆಗ್ರಹವಾಗಿದೆ.