RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಶ್ರಾವಣ ಮಾಸದಲ್ಲಿ ಒಳ್ಳೇಯದನ್ನು ಕೇಳಬೇಕು : ಶ್ರೀ ನಿಜಗುಣ ದೇವರು

ಗೋಕಾಕ:ಶ್ರಾವಣ ಮಾಸದಲ್ಲಿ ಒಳ್ಳೇಯದನ್ನು ಕೇಳಬೇಕು : ಶ್ರೀ ನಿಜಗುಣ ದೇವರು 

ಶ್ರಾವಣ ಮಾಸದಲ್ಲಿ ಒಳ್ಳೇಯದನ್ನು ಕೇಳಬೇಕು : ಶ್ರೀ ನಿಜಗುಣ ದೇವರು

ಗೋಕಾಕ ಅ 12 : ಶ್ರಾವಣ ಮಾಸದಲ್ಲಿ ಒಳ್ಳೇಯದನ್ನು ಕೇಳಬೇಕು,ಕೇಳಿದ್ದರ ಬಗ್ಗೆ ಚಿಂತನೆ ಮಾಡಬೇಕು,ಅದನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕು ಎಂಬುದರ ಅರ್ಥವಿದೆ.ಅದಕ್ಕೆ ನಮ್ಮ ಪರಂಪರೆಯಲ್ಲಿ ಗುರು ಹಿರಿಯರ ಮಾತು ಕೇಳಬೇಕು ಎಂಬ ಮಾತಿದೆ ಎಂದು ಶ್ರೀ ನಿಜಗುಣ ದೇವರು ಹೇಳಿದರು.
ಅವರು ಶನಿವಾರದಂದು ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಜರುಗಿದ 96ನೇ ಮಾಸಿಕ ಚಿಂತನ ಗೋಷ್ಠಿಯ ಸಾನಿಧ್ಯವಹಿಸಿ ಮಾತನಾಡಿದರು.
ಶ್ರಾವಣ ಮಾಸದ ಸಂದರ್ಭದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸುವುದು ಆದರೆ ಈಗಿನ ಕಾಲಘಟ್ಟದಲ್ಲಿ ಶ್ರಾವಣ ಮಾಸವೂ ಮಾನವನ ಬದುಕಿಗೆ ಸ್ಪೂರ್ತಿ ನೀಡುವುದು ಆಗಬೇಕಾಗಿದೆ.
ಈ ಶ್ರಾವಣ ಮಾಸವು ಅಂತರಂಗ ಪರಿಶುದ್ಧ ಮಾಡಿ ಕೊಳ್ಳುವ ಮಾಸ. ಶರಣರ,ಸಂತರ ಅನುಭಾವಿಗಳ ಪ್ರವಚನ ಕೇಳುವುದರಿಂದ ಮನದಲ್ಲಿರುವ ಕಲ್ಮಶ ಕಳೆದುಕೊಳ್ಳುತ್ತೇವೆ.ಶರಣವಾಣಿಯಿಂದ ಪರಿವರ್ತನೆ ಸಾಧ್ಯ ಸದ್ಗುಣ ಅರಳುತ್ತದೆ.ನೆಮ್ಮದಿ ನಮ್ಮದಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಗೊರಗುದ್ದಿ ಗ್ರಾಮದ ಶ್ರೀ ಸಿದ್ಧಾರೂಢಮಠದ ಶ್ರೀ ತುಕಾರಾಮ ಮಹಾರಾಜರು ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.
ಪ್ರಕಾಶ ಹೂಗಾರ ಇವರಿಂದ ಅನ್ನದಾಸೋಹ ಜರುಗಿತು. ಹಣಮಂತ ದಾಸರ, ಹಣಮಂತ ಪಾದಗಟ್ಟಿ, ಗಂಗಾಧರ ಹೊಳಿಹೊಸೂರ ಇವರಿಂದ ಸಂಗೀತ ಸೇವೆ ನಡೆಸಿಕೊಟ್ಟರು. ಶ್ರೀ ಸಿದ್ಧಲಿಂಗೇಶ್ವರ ಶಾಲಾ ಮಕ್ಕಳಿಂದ ವಿವಿಧ ಮನರಂಜನೆ ಕಾರ್ಯಕ್ರಮ ಜರುಗಿದವು.

Related posts: