RNI NO. KARKAN/2006/27779|Sunday, December 22, 2024
You are here: Home » breaking news » ಬೆಳಗಾವಿ:ಸಂಸದೀಯ ಕಾರ್ಯದರ್ಶಿಗಳ ಹೆಸರಲ್ಲಿ ಸರಕಾರದಿಂದ ಲಕ್ಷಾಂತರ ರೂಪಾಯಿ ಲೂಟಿ : ಭೀಮಪ್ಪ ಗಡಾದ ಆರೋಪ

ಬೆಳಗಾವಿ:ಸಂಸದೀಯ ಕಾರ್ಯದರ್ಶಿಗಳ ಹೆಸರಲ್ಲಿ ಸರಕಾರದಿಂದ ಲಕ್ಷಾಂತರ ರೂಪಾಯಿ ಲೂಟಿ : ಭೀಮಪ್ಪ ಗಡಾದ ಆರೋಪ 

ಸಂಸದೀಯ ಕಾರ್ಯದರ್ಶಿಗಳ ಹೆಸರಲ್ಲಿ ಸರಕಾರದಿಂದ ಲಕ್ಷಾಂತರ ರೂಪಾಯಿ ಲೂಟಿ : ಭೀಮಪ್ಪ ಗಡಾದ ಆರೋಪ

 

ಬೆಳಗಾವಿ ಜೂ 7: ರಾಜ್ಯ ಸರ್ಕಾರದಿಂದ ಸಂಸದೀಯ ಕಾರ್ಯದರ್ಶಿಗಳ ಹೆಸರಲ್ಲಿ ಲಕ್ಷಾಂತರ ರುಪಾಯಿ ಹಣ ಪೋಲಾಗುತ್ತಿದೆ ಎಂದು ಭೀಮಪ್ಪ ಗಡಾದ ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಬಹಿರಂಗ ಗೊಳಿಸಿದ ಆರ.ಟಿ.ಐ ಕಾರ್ಯಕರ್ತ ಗಡಾದ ರಾಜ್ಯ ಸರ್ಕಾರ ಸಂಸದೀಯ ಕಾರ್ಯದರ್ಶಿ ಗಳಿಗೆ ಎಷ್ಟು ದುಡ್ಡು ಖರ್ಚಾಗುತ್ತಿದೆ ಸರ್ಕಾರದ ಎಷ್ಟು ಹಣ ಪೋಲಾಗುತ್ತಿದೆ ಎಂಬ ಮಾಹಿತಿಯನ್ನು ಹೊರಹಾಕಿದ್ದಾರೆ

ಸರ್ಕಾರ 16 ತಿಂಗಳಲ್ಲಿ 12 ಜನ ಸಂಸದೀಯ ಕಾರ್ಯದರ್ಶಿಗಳಿಗೆ 3 ಕೋಟಿ 64 ಲಕ್ಷ 72 ಸಾವಿರ ಭತ್ತೆಗಾಗಿ ವೆಚ್ಚ ಮಾಡಿದೆ. ಆದ್ರೆ ಈವರೆಗೂ ಯಾವೊಬ್ಬ ಸಂಸದೀಯ ಕಾರ್ಯದರ್ಶಿಗಳು ಸಭೆ ನಡೆಸಿಲ್ಲ. ಎಂದು ಸಮಾಜ ಸೇವಕ ಭೀಮಪ್ಪ ಗಡಾದ ಆರೋಪಿಸಿದ್ದಾರೆ

ಸರ್ಕಾರಕ್ಕೆ ಆಯಾ ಇಲಾಖೆ ಬಗ್ಗೆ ಸಲಹೆ ಸೂಚನೆಗಳನ್ನೆ ನೀಡದಿರುವುದು ಆರ.ಟಿ.ಐ ಅಡಿ ಅಂಶ ಬೆಳಕಿಗೆ ಬಂದಿದೆ.

12 ಜನರಲ್ಲಿ 10 ಜನ ಸಂಸದೀಯ ಕಾರ್ಯದರ್ಶಿಗಳು 16 ತಿಂಗಳಲ್ಲಿ 35 ಲಕ್ಷ 95 ಸಾವಿರದ 700 ರುಪಾಯಿ ಭತ್ತೆ ಪಡೆದಿದ್ದಾರೆ.

ಕಂದಾಯ ಇಲಾಖೆ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ 7 ಲಕ್ಷ 35 ಸಾವಿರ ಹಾಗೂ ಹಾಲಿ ಸಚಿವ ಪ್ರಮೋದ ಮಧ್ವರಾಜ 15 ಲಕ್ಷ 62 ಸಾವಿರ ಮಾತ್ರ ಪಡೆದುಕೊಂಡಿದ್ದಾರೆ. ಇವರಿಬ್ಬರು ಮನೆ ಬಾಡಿಗೆ,ಮನೆ ನಿರ್ವಹಣೆ ಭತ್ತೆ ಪಡೆದಿಲ್ಲ ಎಂದು ಭೀಮಪ್ಪ ಗಡಾದ ತಿಳಿಸಿದ್ದಾರೆ

ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹವಾದ ಹಣ ಪೋಲಾಗುತ್ತಿದೆ. ಸರ್ಕಾರದ ಆಶಯದಂತೆ ಸಂಸದೀಯಕಾರ್ಯದರ್ಶಿಗಳುಕಾರ್ಯನಿರ್ವಹಿಸುತ್ತಿಲ್ಲ ಎಂದು ಗಡಾದ್ ಆರೋಪ ಮಾಡಿದ್ದಾರೆ

Related posts: