RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಹಾಲನ್ನು ವ್ಯರ್ಥ ಮಾಡದೇ ಮಕ್ಕಳಿಗೆ,ರೋಗಿಗಳಿಗೆ ನೀಡಿ ನಾಗ ಪಂಚಮಿಯನ್ನು ಆಚರಿಸಿ : ಮುರುಘರಾಜೇಂದ್ರ ಶ್ರೀ

ಗೋಕಾಕ:ಹಾಲನ್ನು ವ್ಯರ್ಥ ಮಾಡದೇ ಮಕ್ಕಳಿಗೆ,ರೋಗಿಗಳಿಗೆ ನೀಡಿ ನಾಗ ಪಂಚಮಿಯನ್ನು ಆಚರಿಸಿ : ಮುರುಘರಾಜೇಂದ್ರ ಶ್ರೀ 

ಹಾಲನ್ನು ವ್ಯರ್ಥ ಮಾಡದೇ ಮಕ್ಕಳಿಗೆ,ರೋಗಿಗಳಿಗೆ ನೀಡಿ ನಾಗ ಪಂಚಮಿಯನ್ನು ಆಚರಿಸಿ : ಮುರುಘರಾಜೇಂದ್ರ ಶ್ರೀ

ಗೋಕಾಕ ಅ 14: ಪೌಷ್ಠಿಕವಾದ ಹಾಲನ್ನು ವ್ಯರ್ಥ ಮಾಡದೇ ಮಕ್ಕಳಿಗೆ,ರೋಗಿಗಳಿಗೆ ನೀಡಿ ನಾಗ ಪಂಚಮಿಯನ್ನು ಆಚರಿಸಿದರೆ ನಾಗ ಪಂಚಮಿ ಅರ್ಥಪೂರ್ಣವಾಗಿರುತ್ತದೆ ಎಂದು ಇಲ್ಲಿಯ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ಅವರು ಮಂಗಳವಾರದಂದು ನಗರದ ಚನ್ನಬಸವೇಶ್ವರ ವಿದ್ಯಾಪೀಠದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಸವತತ್ವ ಪ್ರಚಾರ ವೇದಿಕೆ ಹಾಗೂ ವೀರಶೈವ ಜಾಗೃತಿ ಮಹಿಳಾ ವೇದಿಕೆ ಇವರು ನಾಗ ಪಂಚಮಿ ನಿಮಿತ್ಯ ಶಾಲಾ ಮಕ್ಕಳಿಗೆ ಹಾಲನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಬ್ಬ ಹರಿದಿನಗಳು ಭಾರತೀಯ ಪರಂಪರೆಯನ್ನು ಹೊಂದಿದ್ದು ಈ ನಿಟ್ಟಿನಲ್ಲಿ ಜನತೆ ಮೂಢನಂಬಿಕೆಗಳಿಂದ ಹೊರಬಂದು ಕಂದಾಚಾರಗಳನ್ನು ಆಚರಿಸದೇ ಅರ್ಥಪೂರ್ಣವಾಗಿ ಹಬ್ಬಗಳನ್ನು ಆಚರಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ, ಆನಂದ ಗೋಟಡಕಿ, ಮುರಗೇಶ ಹುಕ್ಕೇರಿ, ಮೈಲಾರಲಿಂಗ ಉಪ್ಪಿನ, ಸಂಜು ಗಾಣಿಗೇರ, ಮಾಯಪ್ಪ ತಾಶೀಲ್ದಾರ, ವಿಜಯ ಗೋಟಡಕಿ, ಅಕ್ಷಯ ಮಗೆನ್ನವರ, ಅಡಿವೇಶ ಗವಿಮಠ, ವೀರಶೈವ ಜಾಗೃತ ಮಹಿಳಾ ವೇದಿಕೆಯ ಸದಸ್ಯರು, ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts: