ಮೂಡಲಗಿ:ಮೂಡಲಗಿಯಲ್ಲಿ ಸಂಭ್ರಮದ ನಾಗರ ಪಂಚಮಿ
ಮೂಡಲಗಿಯಲ್ಲಿ ಸಂಭ್ರಮದ ನಾಗರ ಪಂಚಮಿ
ಮೂಡಲಗಿ ಅ 15 ಮೂಡಲಗಿ ಅಣ್ಣ ತಂಗಿಯರ ಹಬ್ಬವೆಂದೇ ಪ್ರಸಿದ್ಧಿಯಾಗಿರುವ ನಾಗರ ಪಂಚಮಿ ಹಬ್ಬವನ್ನು ಪಟ್ಟಣ ಹಾಗೂ ಸುತ್ತಮುತ್ತಲಿನಲ್ಲಿ ಜನತೆ ಸಡಗರ ಸಂಭ್ರಮದಿಂದ ಬುಧವಾರ ಆಚರಿಸಿದರು. ಸ್ಥಳೀಯ ಕೆಇಬಿ, ದನದ ಪೇಟೆಗಳಲ್ಲಿರುವ ಹುತ್ತಕ್ಕೆ ಹಾಗೂ ಲಕ್ಷ್ಮೀನಗರದ ಹನುಮಂತ ಗುಡಿಯಲ್ಲಿರುವ ನಾಗ ದೇವರ ಕಲ್ಲಿಗೆ ಹಾಲೆರೆದು ಜನ ಭಕ್ತಿ ಸಮರ್ಪಿಸಿದರು.
ಮುಂಜಾನೆ ಕುಟುಂಬ ಸದಸ್ಯರೆಲ್ಲ ಸೇರಿ ತಟ್ಟೆಯಲ್ಲಿ ವಿವಿಧ ಬಗೆಯ ಉಂಡೆ, ತಂಬಿಟ್ಟು, ಬಗೆಬಗೆಯ ತಿಂಡಿಗಳನ್ನು ಒಯ್ದು ನಾಗರಾಜನಿಗೆ ನೈವೇದ್ಯ ಅರ್ಪಿಸಿ ನಮ್ಮ ಕುಟುಂಬ ಸದಸ್ಯರ ಸಂಬಂಧವನ್ನು ನಾಗರಾಜ ರಕ್ಷಿಸಲಿ ಎಂದು ಬೇಡಿಕೊಂಡರು. ತದನಂತರ ಮನೆಯಲ್ಲಿ ತಯಾರಿಸಿದ ಸಿಹಿಖಾಧ್ಯಗಳನ್ನು ಸೇವಿಸಿ ಹಬ್ಬದ ಸಡಗರದಲ್ಲಿ ಸಂಭ್ರಮಿಸಿದರು. ಗುಡಿಗಳಲ್ಲಿ ಭಕ್ತರಿಗೆ ಅನ್ನ ಪ್ರಸಾದ ನೇರವೆಸಲಾಗಿತ್ತು.
ಜೋಕಾಲಿ ಸಡಗರ: ಬೆಳ್ಳಗ್ಗೆ ನಾಗರ ಹುತ್ತಕ್ಕೆ ಹಾಲೆರೆದ ಜನರು ಆಯಾ ಪ್ರದೇಶಗಳಲ್ಲಿ ಮರಗಳಿಗೆ ಜೋಕಾಲಿ ಕಟ್ಟಿ ಜೋಕಾಲಿ ಜೀಗಿ ಸಂಭ್ರಮಿಸಿದರು. ಚಿಣ್ಣರು ಮನೆಯಲ್ಲಿ ಕಟ್ಟಿದ ಜೋಕಾಲಿ ಆಡಿದರೆ. ವಯಸ್ಕರು, ಹೆಣ್ಣು ಮಕ್ಕಳು, ಸಾರ್ವಜನಿಕವಾಗಿ ಕಟ್ಟಿದ ಜೋಕಾಲಿಯಲ್ಲಿ ಜೀಗಿ ಆನಂದಿಸಿದರು. ಜಾತಿ, ಮತ,ಪಂಥದ ಭೇದವಿಲ್ಲದೇ ಎಲ್ಲರೂ ಹಬ್ಬದಲ್ಲಿ ಪಾಲ್ಗೋಂಡು ಸಂಭ್ರಮಿಸಿದರು.