RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ದಿ.ವಾಜಪೇಯಿ ಅವರು ಬೆಳಗಾವಿ ನಗರದ ಮೇಲೆ ಅಪಾರ ಪ್ರೀತಿ ಹೊಂದಿದ್ದರು : ಈರಣ್ಣ ಕಡಾಡಿ

ಗೋಕಾಕ:ದಿ.ವಾಜಪೇಯಿ ಅವರು ಬೆಳಗಾವಿ ನಗರದ ಮೇಲೆ ಅಪಾರ ಪ್ರೀತಿ ಹೊಂದಿದ್ದರು : ಈರಣ್ಣ ಕಡಾಡಿ 

ದಿ.ವಾಜಪೇಯಿ ಅವರು ಬೆಳಗಾವಿ ನಗರದ ಮೇಲೆ ಅಪಾರ ಪ್ರೀತಿ ಹೊಂದಿದ್ದರು : ಈರಣ್ಣ ಕಡಾಡಿ

ಬೆಟಗೇರಿ ಅ 17 : ದೇಶ ಕಂಡ ಅಪರೂಪದ ನಾಯಕ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾದ ಹಿನ್ನೆಲೆಯಲ್ಲಿ ಸಮೀಪದ ಕಲ್ಲೋಳಿ ಪಟ್ಟಣದ ಯುವ ಬ್ರಿಗೇಡ್ ವತಿಯಿಂದ ಅಟಲ್‍ಜೀ ಅವರ ಭಾವಪೂರ್ಣ ಶ್ರದ್ದಾಂಜಲಿ ಸಭೆಯನ್ನು ಶುಕ್ರವಾರ ಆ.17 ರಂದು ಹಮ್ಮಿಕೊಳ್ಳಲಾಗಿತ್ತು.
ಸಮೀಪದ ಕಲ್ಲೋಳಿ ಪಟ್ಟಣದ ಗಾಂಧಿ ಮೈದಾನದಲ್ಲಿ ಅಟಲ್ ಜೀ ಅವರ ಭಾವ ಚಿತ್ರಕ್ಕೆ ಪೊಜೆ ಸಲ್ಲಿಸಿ, ಪುಷ್ಪ ಅರ್ಪಿಸಿದ ಅಭಿಮಾನಿಗಳು, ಕಾರ್ಯಕರ್ತರು, ಯುವ ಬ್ರಿಗೇಡ್ ಯುವಕರು ಒಂದು ನಿಮಿಷ ಮೌನ ಆಚರಿಸಿದರು.
ಜಿಪಂ ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ, ಬೆಳಗಾವಿ ಜಿಲ್ಲೆಯ ಗೋಕಾಕ, ರಾಮದುರ್ಗ ಸೇರಿದಂತೆ ಹಲವಾರು ನಗರಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರು ಬಂದು ಹೊಗಿದ್ದಾರೆ, 2004ರ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಬೆಳಗಾವಿ ನಗರದ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಈ ಸಂದರ್ಭದಲ್ಲಿ ಕೊಕಂ ಎಂದು ಕರೆದರು, ಕೊಕಂ ಎಂದರೆ ಕೊಂಕಣಿ, ಕನ್ನಡ, ಮರಾಠಿ, ಭಾಷಿಕರು ಇರುವುದರಿಂದ ಕೊಕಂ ಇದು ಒಂದು ತಂಪು ಪಾನಿಯ ಇದನ್ನು ಕುಡಿಯುವದರಿಂದ ದೇಹಕ್ಕೆ ತಂಪು ನೀಡುತ್ತದೆ ಎಂದು ಅವರ ಭಾಷಣವನ್ನು ಮೇಲಕು ಹಾಕಿದರು.
ಮುಖಂಡರಾದ ಸಹದೇವ ಖಾನಾಪುರ, ಭಗವಂತ ಪತ್ತಾರ, ಸೇರಿದಂತೆ ಹಲವರು ಅಟಲ್‍ಜೀ ವ್ಯಕ್ತಿತ್ವದ ಕುರಿತು ಮಾತನಾಡಿದರು.
ಶಿವಪ್ಪ ಬೆಳಕೂಡ, ಯಲ್ಲಪ್ಪ ಕಪ್ಪಲಗುದ್ದಿ, ಬಸವರಾಜ ಸಂಪಗಾವ, ಸುಭಾಸ ಕುರಬೇಟ, ಮಹಾತೇಶ ಕಪ್ಪಲಗುದ್ದಿ, ಯುವ ಬ್ರಿಗೇಡನ ಸಿದ್ದು ಉಳ್ಳಾಗಡ್ಡಿ, ಆನಂದ ಚಿಕ್ಕೋಡಿ, ಪಟ್ಟಣ ಪಂಚಾಯತ ಅಧಿಕಾರಿ ಅರುಣಕುಮಾರ, ಶ್ರೀಶೈಲ್ ತುಪ್ಪದ, ಶಂಭು ಖಾನಾಪುರ, ಮಹಾದೇವ ಮದಭಾವಿ, ಈರಣ್ಣ ಮುನ್ನೋಳಿಮಠ, ಪರಪ್ಪ ಗಿರೆಣ್ಣವರ, ರಾಮಣ್ಣ ಕಂಕಣವಾಡಿ, ಬಸವರಾಜ ಯಾದಗೂಡ, ಶಂಕರ ಕಡಾಡಿ, ಸೇರಿದಂತೆ ವಿವಿಧ ಸಂಘ ಸಂಸ್ಥೆ ಪ್ರತಿನಿಧಿಗಳು, ಪಟ್ಟಣ ಪಂಚಾಯತ ಸದಸ್ಯರು, ಶಾಲಾ ಮುಖ್ಯಸ್ಥರು, ಇತರರು ಉಪಸ್ಥಿತರಿದ್ದರು.

Related posts: