ಗೋಕಾಕ:ಬಕ್ರೀದ್ ಹಬ್ಬದ ನಿಮಿತ್ಯ ಸಂಗನಕೇರಿ ಗ್ರಾಮದಲ್ಲಿ ಶಾಂತಿ ಪಾಲನಾ ಸಭೆ
ಬಕ್ರೀದ್ ಹಬ್ಬದ ನಿಮಿತ್ಯ ಸಂಗನಕೇರಿ ಗ್ರಾಮದಲ್ಲಿ ಶಾಂತಿ ಪಾಲನಾ ಸಭೆ
ಗೋಕಾಕ ಅ 18 : ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬದ ನಿಮಿತ್ಯ ಶುಕ್ರವಾರ ಸಂಜೆ ಸಂಗನಕೇರಿ ಗ್ರಾಮದಲ್ಲಿ ಶಾಂತಿ ಪಾಲನೆ ಸಭೆ ನಡೆಯಿತು
ಆ.22ರಂದು ಆಚರಿಸುವ ಬಕ್ರೀದ ಹಬ್ಬವನ್ನು ಶಾಂತಿ ಸೌಹರ್ದತೆಯಿಂದ ಆಚರಿಸಿ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರದಂತೆ ಎಲ್ಲರೂ ಸ್ವರ್ಹೋದಯುತವಾಗಿ ಆಚರಿಸಿ ಎಂದು ಘಟಪ್ರಭಾ ಠಾಣೆಯ ಪಿಎಸ್ಐ ದೇವಾನಂದ ಹೇಳಿದರು
ಈ ಸಂದರ್ಭದಲ್ಲಿ ದಸ್ತಗಿರಿ ಮುಜಾವರ , ಶಫೀ ಮೋಕಾಶಿ , ಮಲ್ಲಗೌಡ ಮಲ್ಯಾಗೋಳ , ಮುಸ್ತಫಾ ಮನೀಯಾರ , ಹನುಮಂತ ದಾಸನಾಳ , ಶಾನೂಲ ಶಾಪೂರ ,ರಫೀಕ ಮುಲ್ಲಾ , ವಜೀರ ಸೈಯದ , ಶಾಹೀನ ಸೈಯದ , ಅಶೋಕ ಗಡಿಕದಾರ , ಸೇರಿದಂತೆ ಇತರರು ಉಪಸ್ಥಿತರಿದ್ದರು