ಬೈಲಹೊಂಗಲ:ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆಗೆ ಆರ್ಥಿಕ ಸಹಕಾರ ನೀಡಿದವರಿಗೆ ಅಭಿನಂದನಾ ಸಮಾರಂಭ
ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆಗೆ ಆರ್ಥಿಕ ಸಹಕಾರ ನೀಡಿದವರಿಗೆ ಅಭಿನಂದನಾ ಸಮಾರಂಭ
ಬೈಲಹೊಂಗಲ ಅ 21 : ವೀರರ ಶೂರರ, ಮಹಾತ್ಮರ, ಮಹಾನ್ ಪುರುಷರ ಪುತ್ಥಳಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವುದರಿಂದ ಅವರ ಆದರ್ಶ ಜೀವನ, ಸಮಾಜ ಸುದಾರಣೆ, ದೇಶ ಸೇವೆ, ಸಂಸ್ಕಾರಯುತ ಜೀವನ ಪ್ರತಿಯೊಬ್ಬರು ಅಳವಡಿಸಿಕೊಳ್ಳಲು ಸಹಕಾರಿಯಾಗುವುದು ಎಂದು ಬೆಳಗಾವಿ ಜಿಲ್ಲಾ ರಾಷ್ಟ್ರೀಯ ಬಸವ ಸೇನಾ ಅದ್ಯಕ್ಷ ಶಂಕರ ಗುಡಸ ಹೇಳಿದರು.
ನೇಗಿನಹಾಳ ಗ್ರಾಮದ ಬಸವೇಶ್ವರ ಸರ್ಕಲ್ ನಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ಪುತ್ಥಳಿ ಅನಾವರಣದ ನಿಮಿತ್ತ ಜಗದ್ಗುರು ಮಡಿವಾಳೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ “ದಾಸೋಹಿಗಳಿಗೆ ಅಭಿನಂದನಾ ಕಾರ್ಯಕ್ರಮ” ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಎಲ್ಲಿ ಬಸವಣ್ಣನವರ ವಿಚಾರಗಳಿಗೆ ಹೆಚ್ಚಿನ ಆದ್ಯತೆ ಇರುವುದೋ ಅಲ್ಲಿ ಎಲ್ಲವು ಸಮನಾಗಿರುವುದು, ಬಸವಾದಿ ಶರಣರ ವಚನಗಳಿಂದ ಶ್ರೇಷ್ಠ ಸಮಾಜ ನಿರ್ಮಿಸಲು ಸಾದ್ಯವಿದೆ ಎಂದರು. ಗುರು ಮಡಿವಾಳೆಶ್ವರ ಮಠದ ಪೀಠಾಧಿಪತಿ ಬಸವ ಸಿದ್ಧಲಿಂಗ ಸ್ವಾಮೀಜಿ ಸಾನಿದ್ಯ ವಹಿಸಿ ಮಾತನಾಡಿ 12ನೆಯ ಶತಮಾನದಲ್ಲಿ ಅಪ್ಪ ಬಸವಣ್ಣನವರಿಂದ ಆರಂಭವಾದ ಪ್ರಜಾಪ್ರಭುತ್ವ ವ್ಯವಸ್ಥೆಯ ಕಲ್ಪನೆ ಇಂದು ನಾವು ನಿವೆಲ್ಲರೂ ಸರ್ವರೂ ಸಮಾನರು ಎಂಬ ಭಾವದಿಂದ ಬದುಕಲು ಸಾದ್ಯವಾಗಿದೆ ಅತಂಹ ಮಹಾನ್ ಪುರುಷ ಜಗದಜ್ಯೋತಿ ಬಸವೇಶ್ವರರ ಸ್ಮಾರಕ ನಿರ್ಮಿಸಿರುವುದು ಅತ್ಯಂತ ಶ್ಲಾಂಘನೀಯ ಕಾರ್ಯ ಎಂದರು. ಮೂರ್ತಿ ಸ್ಥಾಪನೆ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಸಹಾಯ ಮಾಡಿದ ಗ್ರಾಮದ ಯುವ ಧುರೀಣರಾದ ನಾನಾಸಾಹೇಬ ಪಾಟೀಲ, ಬಿ.ಎಸ್ ಕಿವಡಸಣ್ಣವರ, ಶಿವಾನಂದ ದಿವಾಣದ, ಶಿವಾನಂದ ಬೈಲವಾಡ, ಪ್ರಕಾಶ ಮರಿತಮ್ಮನವರ, ಬಸವರಾಜ ಸುತಗಟ್ಟಿ, ಮಡಿವಾಳಪ್ಪ ಕುಲ್ಲೋಳ್ಳಿ, ಮಹಾರುದ್ರಪ್ಪ ಬೋಳೆತ್ತಿನ, ಬಸವರಾಜ ಕಡೇಮನಿ, ವಿರೇಶ ಹಲಕಿ, ಮತ್ತಿತ್ತರ ಹಲವಾರು ಗಣ್ಯರನ್ನು ಸತ್ಕರಿಸಲಾಯಿತ್ತು. ಹಾಗೂ ಬೈಲಹೊಂಗಲ ವಕೀಲರ ಸಂಘದ ನೂತನ ಅದ್ಯಕ್ಷರಾಗಿ ನೇಗಿನಹಾಳ ಗ್ರಾಮದಿಂದ ಆಯ್ಕೆಯಾಗಿರುವ ಮಡಿವಾಳಪ್ಪ ಮೆಳವಂಕಿ ಅವರನ್ನು ಇದೇ ವೇಳೆ ಸತ್ಕರಿಸಲಾಯಿತ್ತು. ಎಸ್.ಎಮ್ ಪಾಟೀಲ ಶಿಕ್ಷಕರು ಉಪನ್ಯಾಸ ನೀಡಿದರು. ವಚನ ಭಂಡಾರಿ ಶಾಂತರಸರ ಕುರಿತು ಮಹಾದೇವ ಮುದ್ದೆನ್ನವರ ಅನುಭಾವ ನೀಡಿದರು. ಗಣ್ಯರಾದ ಶ್ರೀಶೈಲ ಶರಣಪ್ಪನವರ, ಮಹೇಶ ಕೋಟಗಿ, ಚನ್ನಪ್ಪ ನರಸಣ್ಣವರ, ಸಂಜಯ ಭಾಂವಿ, ಸದಾನಂದ ಬಸೆಟ್ಟಿ, ಶಿವಾನಂದ ಮಾಳಗಿ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು. ಅಮೃತಾ ಪಡಸಲಗಿ ಕಾರ್ಯಕ್ರಮದಲ್ಲಿ ಪ್ರಸಾದ ದಾಸೂಹ ಸೇವೆ ನೀಡಿದರು. ಶಂಕರ ಮೇಟ್ಯಾಲ ಸ್ವಾಗತಿಸಿದರು, ಲಕ್ಷ್ಮೀ ಬಡೀಗೇರ ಪ್ರಾಥನೆ ನೇರವೇರಿಸಿದರು, ಶಿವಾನಂದ ನರಸಣ್ಣವರ ನಿರೂಪಿಸಿದರು ಸಿದ್ದಾರೂಢ ತಿಗಡಿ ವಂದಸಿದರು