ಗೋಕಾಕ:ಪ್ರಕೃತಿ ವಿಕೋಪದಿಂದ ತತ್ತರಿಸಿದ ಸಂತ್ರಸ್ತರಿಗೆ ನೆರವು ನೀಡಲು ಪ್ರತಿಯೊಬ್ಬರೂ ಮುಂದಾಗಬೇಕು : ರಮೇಶ ಅಳಗುಂಡಿ
ಪ್ರಕೃತಿ ವಿಕೋಪದಿಂದ ತತ್ತರಿಸಿದ ಸಂತ್ರಸ್ತರಿಗೆ ನೆರವು ನೀಡಲು ಪ್ರತಿಯೊಬ್ಬರೂ ಮುಂದಾಗಬೇಕು : ರಮೇಶ ಅಳಗುಂಡಿ
ಬೆಟಗೇರಿ ಅ 27 :ಪ್ರಕೃತಿ ವಿಕೋಪದಿಂದ ತತ್ತರಿಸಿದ ಸಂತ್ರಸ್ತರಿಗೆ ನೆರವು ನೀಡಲು ಪ್ರತಿಯೊಬ್ಬರೂ ಮುಂದಾಗಬೇಕು. ಕಳೆದ ಒಂದು ವಾರದ ಹಿಂದೆ ರಾಜ್ಯದ ಕೊಡಗು ಜಿಲ್ಲೆ ಅತಿವೃಷ್ಠಿಗೆ ತತ್ತಾಗಿರುವದರಿಂದ ನಮ್ಮ ಪ್ರೌಢ ಶಾಲೆಯ ಪರವಾಗಿ ಸಾಧ್ಯವಾದಷ್ಟು ಹಣ ಸಂಗ್ರಹಿಸಿ ಸಂತ್ರಸ್ತರಿಗೆ ನೆರವು ನೀಡಲಾಗುವದು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಸೋಮವಾರ ಆ.27 ರಂದು ನಡೆದ ಕೊಡಗು ನೆರೆ ಸಂತ್ರಸ್ತರಿಗೆ ನೆರವಿಗಾಗಿ ಧನ ಸಂಗ್ರಹದ ಪಾದಯಾತ್ರೆಯ ನೇತೃತ್ವ ವಹಿಸಿ ಮಾತನಾಡಿ, ಇಂದು ಇಲ್ಲಿಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಗ್ರಾಮದೆಲ್ಲೆಡೆ ಸಂಚರಿಸಿ ಸಂಗ್ರಹಿಸಿದ ಹಣವನ್ನು ಕೊಡಗು ನೆರೆ ಸಂತ್ರಸ್ತರಿಗೆ ನೀಡಲಾಗುವದು ಎಂದರು.
ಸ್ಥಳೀಯ ನಿವೃತ್ತ ಗ್ರಾಮ ಲೆಕ್ಕಿಗ ಪತ್ರೇಪ್ಪ ನೀಲಣ್ಣವರ, ಪಿಕೆಪಿಎಸ್ ನಿರ್ದೇಶಕ ಸುಭಾಷ್ ಜಂಬಗಿ ಅವರು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಪಾದಯಾತ್ರೆಯ ಮೂಲಕ ಧನ ಸಂಗ್ರಹಕ್ಕೆ ಚಾಲನೆ ನೀಡಿದರು. ಗ್ರಾಮದ ಅಂಬೇಡ್ಕರ ವೃತ್ತದ ಮೂಲಕ ಪ್ರಮುಖ ಬೀದಿಯಲ್ಲಿರುವ ಅಂಗಡಿ, ಮುಗ್ಗಟ್ಟು, ಹಲವಾರು ಸಂಘ, ಸಂಸ್ಥೆ ಹಾಗೂ ಸ್ಥಳೀಯರಿಂದ ಪ್ರೌಢ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನೀಯರು, ಶಿಕ್ಷಕರು ಕೊಡಗು ನಿರಾಶ್ರಿತರಿಗಾಗಿ ಒಟ್ಟು ರೂಪಾಯಿ 25100/-(ಇಪ್ಪತ್ತೈದು ಸಾವಿರದಾ ಒಂದು ನೂರು ರೂಪಾಯಿ)ಗಳನ್ನು ಸಂಗ್ರಹಿಸಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯ ಮೂಲಕ ರಾಜ್ಯದ ಮುಖ್ಯಮಂತ್ರಿ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಲಾಯಿತು ಎಂದು ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ತಿಳಿಸಿದರು.
ಪ್ರಕಾಶ ಹಾಲಣ್ಣವರ, ಮಲ್ಲಿಕಾರ್ಜುನ ಹಿರೇಮಠ, ಮಂಜುನಾಥ ಹತ್ತಿ, ಮೋಹನ ತುಪ್ಪದ, ಅಪ್ಪಾಸಾಹೇಬ ತಾಂವಶಿ, ರಾಕೇಶ್ ನಡೋಣಿ, ವಿ.ಬಿ.ಬಿರಾದಾರ, ಶುಭಾ.ಬಿ., ಜಯಶ್ರೀ ಇಟ್ನಾಳ, ವೀಣಾ ಹತ್ತಿ, ಪ್ರಮೋದ ದಾಸರ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ, ಗ್ರಾಮದ ಗಣ್ಯರು, ಮತ್ತೀತರರು ಇದ್ದರು.