ಗೋಕಾಕ:ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ವೆಂಕಟೇಶ ಈಳಿಗೇರ
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ವೆಂಕಟೇಶ ಈಳಿಗೇರ
ಗೋಕಾಕ ಅ 27 : ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಈಡಿಗ ಸಮಾಜದ ಯುವ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ ಈಳಿಗೇರ ಹೇಳಿದರು.
ಅವರು ಸೋಮವಾರದಂದು ತಾಲೂಕಿನ ಅರಭಾವಿ ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತಿ ಉತ್ಸವ ಕಾರ್ಯಕ್ರಮಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಅಪಾರವಾದ ತಪಸ್ಸಿನಿಂದ ನಾಡಿನ ಉದ್ದಾರಕ್ಕಾಗಿ ಶ್ರಮಿಸಿದ ನಾರಾಯಣ ಗುರುಗಳು ಲೋಕಕಲ್ಯಾಣಕ್ಕಾಗಿ ಶ್ರಮಸಿದ ಮಹಾನ್ ಪರುಷರಾಗಿದ್ದಾರೆ ಎಂದರು. ಅಧ್ಯಾತ್ಮಿಕ ತತ್ವವನ್ನು ಮಾನವ ಕುಲಕ್ಕೆ ಸಾರಿದ ಮಹಾತಪಸ್ವಿ ನಾರಾಯಣ ಗುರುಗಳಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿವಯ್ಯ ಸ್ವಾಮಿಗಳು, ಈಡಿಗ ಸಮಾಜದ ಮುಖಂಡರಾದ ಮುತ್ತೇಪ್ಪ ಈಳಿಗೇರ, ಗಣಪತಿ ಈಳಿಗೇರ,ಮಾರುತಿ ಈಳಿಗೇರ, ಗ್ರಾಮದ ಪ್ರಮುಖರಾದ ರಾಯಪ್ಪ ಬಂಡಿವಡ್ಡರ, ಭೀಮಶಿ ಕಡ್ಡಿ ಸೇರಿದಂತೆ ಈಡಿಗ ಸಮಾಜ ಯುವಕರು, ಮುಖಂಡರು ಇದ್ದರು.