RNI NO. KARKAN/2006/27779|Thursday, March 13, 2025
You are here: Home » breaking news » ಗೋಕಾಕ:“ಅಲ್ಲಮಪ್ರಭು ಅರ್ಥಾರ್ಥ ಮಾಯಾಯಾಟ” ಸಣ್ಣಾಟ ಪುಸ್ತಕ ಬಿಡುಗಡೆ

ಗೋಕಾಕ:“ಅಲ್ಲಮಪ್ರಭು ಅರ್ಥಾರ್ಥ ಮಾಯಾಯಾಟ” ಸಣ್ಣಾಟ ಪುಸ್ತಕ ಬಿಡುಗಡೆ 

“ಅಲ್ಲಮಪ್ರಭು ಅರ್ಥಾರ್ಥ ಮಾಯಾಯಾಟ” ಸಣ್ಣಾಟ ಪುಸ್ತಕ ಬಿಡುಗಡೆ

ಗೋಕಾಕ ಅ 28 : ಶರಣ ಸಂಕುಲದ ಮಧ್ಯೆದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಶೂನ್ಯ ಪೀಠವನ್ನು ಅಲಂಕರಿಸಿದ ಮಹಾ ಜಂಗಮ ಅಲ್ಲಮಪ್ರಭುದೇವರು ಎಂದು ಇಲ್ಲಿಯ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ಅವರು ಮಂಗಳವಾರದಂದು ನಗರದ ಶೂನ್ಯ ಸಂಪಾದನಮಠದಲ್ಲಿ 126ನೇ ಶಿವಾನುಭವ ಗೋಷ್ಠಿ ಹಾಗೂ ಅಣ್ಣಿಗೇರಿ ಶಿವಾನಂದ ಕವಿ ವಿರಚಿತ ಹಾಗೂ ಇಲ್ಲಿಯ ಜಾನಪದ ರಂಗಭೂಮಿ ಕಲಾವಿದ ಈಶ್ವರಚಂದ್ರ ಬೆಟಗೇರಿಯವರು ಸಂಪಾದಿಸಿದ “ಅಲ್ಲಮಪ್ರಭು ಅರ್ಥಾರ್ಥ ಮಾಯಾಯಾಟ” ಸಣ್ಣಾಟ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಅಲ್ಲಮಪ್ರಭುದೇವರ ಸಂದೇಶಗಳು ನಿತ್ಯ ನೂತನವಾಗಿ ಲೋಕಕ್ಕೆ ದಾರಿದೀಪಗಳಾಗಿವೆ. ಅವುಗಳನ್ನು ಎಲ್ಲರೂ ಆಚರಣೆ ತರುವಂತೆ ಕರೆ ನೀಡಿದರು.
ಕೃತಿ ಕುರಿತು ಜನಪದ ವಿದ್ವಾಂಸ ಡಾ| ಸಿ.ಕೆ.ನಾವಲಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಈಶ್ವರಚಂದ್ರ ಬೆಟಗೇರಿಯವರನ್ನು ಹಿರಿಯ ಸಾಹಿತಿ ಮಹಾಲಿಂಗ ಮಂಗಿ, ಶಕುಂತಲಾ ದಂಡಗಿ, ರಜನಿ ಜೀರಗ್ಯಾಳ ಅವರು ಸನ್ಮಾನಿಸಿದರು.
ವೇದಿಕೆ ಮೇಲೆ ಬಸನಗೌಡ ಪಾಟೀಲ, ಸುಜಾತಾ ಮುಚ್ಚಂಡಿ ಹಿರೇಮಠ, ಶೋಭಾ ಜತ್ತಿ, ಮಂಗಳಾದೇವಿ ಬೆಟಗೇರಿ ಇದ್ದರು.
ಸಂಗನಕೇರಿಯ ಶ್ರೀ ಸರ್ವೇಶ್ವರ ಜಾನಪದ ಕಲಾ ಬಳಗದಿಂದ ಅಲ್ಲಮಪ್ರಭು, ಅಕ್ಕಮಹಾದೇವಿ ಸಂವಾದ ಪ್ರದರ್ಶನ ಜರುಗಿತು.

Related posts: