RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಹುಣ್ಣಿಮೆ ಪ್ರಯುಕ್ತ ಮಾಸಿಕ ಪ್ರವಚನ ಕಾರ್ಯಕ್ರಮ

ಗೋಕಾಕ:ಹುಣ್ಣಿಮೆ ಪ್ರಯುಕ್ತ ಮಾಸಿಕ ಪ್ರವಚನ ಕಾರ್ಯಕ್ರಮ 

ಹುಣ್ಣಿಮೆ ಪ್ರಯುಕ್ತ ಮಾಸಿಕ ಪ್ರವಚನ ಕಾರ್ಯಕ್ರಮ

ಗೋಕಾಕ ಅ 28 : ಬಸವಣ್ಣನವರು ಪ್ರಾರಂಭಿಸಿದ ಮಹಾಮನೆಯ ಜಂಗಮ ದಾಸೋಹ ಪ್ರಸಾದ ತಯ್ಯಾರಿಕಾ ಕಾರ್ಯದಲ್ಲಿ ನಿಲಾಂಬೀಕಾ ತಾಯಿಯವರು ತಮ್ಮನ್ನು ತೊಡಗಿಸಿಕೊಂಡು ದಾಸೋಹ ಮೂರ್ತಿಯಾಗಿದ್ದರು ಎಂದು ಸಂಕೇಶ್ವರದ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಡಾ| ಶಿವನಗೌಡ ಪಾಟೀಲ ಹೇಳಿದರು.
ಅವರು ಇಲ್ಲಿಯ ವಿದ್ಯಾನಗರದಲ್ಲಿ ರಾಷ್ಟ್ರೀಯ ಬಸವದಳ, ಅಕ್ಕನಾಗಲಾಂಬಿಕಾ ಮಹಿಳಾ ಮಂಡಳ, ಲಿಂಗಾಯತ ಧರ್ಮ ಮಹಾಸಭಾ ಇವುಗಳ ಸಂಯುಕ್ತಾಶ್ರಯದಲ್ಲಿ ಹುಣ್ಣಿಮೆ ಪ್ರಯುಕ್ತ ಹಮ್ಮಿಕೊಂಡ ದಾಸೋಹ ಮೂರ್ತಿ ಮಹಾಶರಣೆ ನೀಲಮ್ಮತಾಯಿ ಕುರಿತು ಮಾತನಾಡುತ್ತಾ ಬಸವಣ್ಣನವರ ಆದರ್ಶ ಪತ್ನಿಯಾಗಿ ಅವರ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತಾವು ಸಹಭಾಗಿಯಾಗಿದ್ದರೆಂದು ಹೇಳಿದರು.
ಈ ಸಂದರ್ಭದಲ್ಲಿ ಇತ್ತಿಚಿಗೆ ನಗರಸಭೆಯಿಂದ ನಿವೃತ್ತಗೊಂಡ ಶೇಖರಯ್ಯ ಕಲ್ಲಾಪೂರಮಠ ಹಾಗೂ ಸಂಕೇಶ್ವರದ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಡಾ| ಶಿವನಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲಿಂಗನಗೌಡ ಪಾಟೀಲ, ಮಹಾದೇವಿ ಪಾಟೀಲ, ಶಿವನಗೌಡ ಪಾಟೀಲ, ಅಶೋಕ ಸ್ವಾಮಿ ಹಿರೇಮಠ, ಮಹಾದೇವ ಗುಡೇರ,ಚನ್ನಪ್ಪ ಬಿದರಿ, ಉದಯ ಕರಜಿಗಿಮಠ,ಕಮಲಕ್ಕ ಕುಬಸದ, ಗುರುಪಾದವ್ವ ಜಕಾತಿ, ಶಿವಲಿಂಗವ್ವ ಶಿರಸಂಗಿ, ಮಹಾದೇವ ಕೌಜಲಗಿ, ಈರಣ್ಣ ಪರುಶೆಟ್ಟಿ,ಶ್ರೀ ಶೈಲ ಪಾಶ್ಚಾಪೂರ, ಎಂ.ಎಚ್.ಉತ್ತೂರ, ಶಂಕರ ಆಲಾಸಿ, ಪ್ರಭಾವತಿ ಕಡಖಬಾವಿ, ಬಸಮ್ಮ ಉಳ್ಳಾಗಡ್ಡಿ, ಜಯಶ್ರೀ ಪಾಟೀಲ ಸೇರಿದಂತೆ ಅನೇಕರು ಇದ್ದರು.

Related posts: