ಗೋಕಾಕ:ಪರಿಸರ ಸಂರಕ್ಷಣೆ ಮಾಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು
ಪರಿಸರ ಸಂರಕ್ಷಣೆ ಮಾಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು
*ಶಾಲೆಯ ವಿದ್ಯಾಥಿಗಳಿಗೆ ವಿನೂತನ ಪ್ರಾಯೋಗಿಕ ಉಪನ್ಯಾಸ * ಹೊರ ಸಂಚಾರ ಕಾರ್ಯಕ್ರಮದಲ್ಲಿ ರಮೇಶ ಅಳಗುಂಡಿ ಅಭಿಪ್ರಾಯ * ಪ್ರಕೃತಿಯ ಸೊಬಗನ್ನು ಕಣ್ಣುತುಂಬಿಕೊಂಡ ಶಾಲಾ ಮಕ್ಕಳು
ಬೆಟಗೇರಿ ಸೆ 1 : ಇಂದಿನ ದಿನಮಾನಗಳಲ್ಲಿ ಪರಿಸರ ಸಂರಕ್ಷಣೆ ಮಾಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಪರಿಸರ ಮನುಷ್ಯನ ಉತ್ತಮ ಬಯಕೆ ಇಡೇರಿಸುವುದಕ್ಕಿದೆ ಹೊರತು ದುರಾಶೆ ಇಡೇರಿಸುವದಕ್ಕೆ ಅಲ್ಲ, ಉತ್ತಮ ಪರಿಸರ ನಮ್ಮ ಸುತ್ತಮುತ್ತಲೂ ಸದಾವಿರಬೇಕೆಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಶನಿವಾರ ಸೆ.1 ರಂದು ಬ್ಯಾಗ ಲೇಸ್ ಡೇ ಪ್ರಯುಕ್ತ ಆಯೋಜಿಸಿದ ಹೊರ ಸಂಚಾರ ಪಾದಯಾತ್ರೆಯ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಪರಿಸರ, ಸಂರಕ್ಷಣೆ, ಬೆಟ್ಟ, ಗುಡ್ಡಗಳಿರುವದರಿಂದ ಮನುಷ್ಯನಿಗೆ ದೊರಕುವ ಪ್ರಯೋಜನಗಳ ಕುರಿತು ಸ್ಥಳೀಯ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಎಲ್ಲ ತರಗತಿಯ ವಿದ್ಯಾಥಿಗಳಿಗೆ ಪಠ್ಯೇತರ ಚಟುವಟಿಕೆ ಪ್ರಾಯೋಗಿಕ ಪಾಠದ ವಿನೂತನ ಉಪನ್ಯಾಸ ಕಾರ್ಯಕ್ರಮದ ನಿಮಿತ್ತ ಹೊರ ಸಂಚಾರ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಉಪನ್ಯಾಸ ಕಾರ್ಯಕ್ರಮ: ಸ್ಥಳೀಯ ಪ್ರೌಢ ಶಾಲೆಯ ಎಲ್ಲ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕರು ಹೊರಸಂಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಾದಯಾತ್ರೆಯ ಮೂಲಕ ಸಮೀಪದ ಮರಡಿಶಿವಾಪೂರ ಗುಡ್ಡಕ್ಕೆ ಹೋಗಿ, ಅಲ್ಲಿರುವ ಮಲ್ಲಿಕಾರ್ಜುನ ಸ್ವಾಮಿಜಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಬೆಟ್ಟ, ಗುಡ್ಡಗಳ ಗಿಡಗಂಟಿಗಳಲ್ಲಿ ಕಾಡುಪ್ರಾಣಿ, ಪಕ್ಷಿಗಳು ತಮ್ಮ ವಾಸಸ್ಥಳವನ್ನು ಹೇಗೆ ಸೃಷ್ಠಿಸಿಕೊಳ್ಳುತ್ತವೆ, ಅವುಗಳ ಬದುಕಿನ ಹೊಟ್ಟೆ, ಹೊರೆ ಹಾಗೂ ಪರಿಸರ ಸಂರಕ್ಷಣೆ, ಮಾನವ ವಿನಾಶಗೊಳಿಸುತ್ತಿರುವ ಪರಿಸರ ಸಂಪತ್ತು ಸೇರಿದಂತೆ ಮತ್ತೀತರ ಪರಿಸರ ಉಳಿವಿಗಾಗಿ ಜಾಗೃತಿ ಮೂಡಿಸುವ ವಿಷಯಗಳ ಕುರಿತು ಶಾಲೆಯ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮನವರಿಕೆ ಉಪನ್ಯಾಸ ಕಾರ್ಯಕ್ರಮ ಮುಗಿದ ಬಳಿಕ ಅಲ್ಪೊಪಹಾರ ಸೇವಿಸಿ ಕಾಲ್ನಡಿಗೆ ಮೂಲಕ ಮರಳಿ ಶಾಲೆಗೆ ವಿದ್ಯಾರ್ಥಿಗಳು, ಶಿಕ್ಷಕರು ಮರಳಿದರು.
ಸಂಭ್ರಮಿಸಿದ ವಿದ್ಯಾರ್ಥಿಗಳು: ಹೊರಸಂಚಾರ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡು, ಖುಷಿ, ಖುಷಿಯಾಗಿ ಕಾಲ್ನಡಿಗೆ ಮೂಲಕ ಸುಮಾರು ಹತ್ತಾರು ಕೀ.ಮಿ. ದೂರದ ದಾರಿ ನಡೆದು, ಬೆಟ್ಟ, ಗುಡ್ಡದ ಮೇಲೆ ನಿಂತು ಅಲ್ಲಿರುವ ಹಚ್ಚ ಹಸಿರಿನ ರಮನೀಯ ಪರಿಸರ ನೋಡಿ ಸಂಭ್ರಮಿಸಿದರು. ಪರಿಸರ ಪ್ರಜ್ಞೆ ಮೂಡಿಸಲು ಈ ಪ್ರಾಯೋಗಿಕ ಹೊರ ಸಂಚಾರ ಕಾರ್ಯಕ್ರಮ ನಮ್ಮೆಲ್ಲರಿಗೂ ಇಂದು ಹೊಸತನ ಮೂಡಿಸಿದೆ. ಪ್ರಕೃತಿಯ ಸೊಬಗನ್ನು ಕಣ್ಣುತುಂಬಿಕೊಂಡಂತಾಯಿತು ಎಂದು ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಆರತಿ ಪಣದಿ ಅಭಿಪ್ರಾಯ ಪಟ್ಟರು.
ಮಲ್ಲಿಕಾರ್ಜುನ ಹಿರೇಮಠ, ಮಂಜುನಾಥ ಹತ್ತಿ, ಮೋಹನ ತುಪ್ಪದ, ಅಪ್ಪಾಸಾಹೇಬ ತಾಂವಶಿ, ರಾಕೇಶ್ ನಡೋಣಿ, ವಿ.ಬಿ.ಬಿರಾದಾರ, ಶುಭಾ.ಬಿ., ಜಯಶ್ರೀ ಇಟ್ನಾಳ, ವೀಣಾ ಹತ್ತಿ, ರಮೇಶ ಬುದ್ನಿ, ಪ್ರಮೋದ ದಾಸರ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ, ಮತ್ತೀತರರು ಇದ್ದರು.